2022 ರ ಮೊದಲ ಉಪಗ್ರಹ ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

February 14, 2022
9:28 PM

ಭಾರತೀಯ  ಬಾಹ್ಯಾಕಾಶ ಸಂಸ್ಥೆ ತನ್ನ 2022ರ  ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಸೋಮವಾರ ಆರಂಭಿಸಿದೆ. ಸೋಮವಾರ ಮುಂಜಾನೆ  5.59 ಗಂಟೆಗೆ ಭಾರತೀಯ ರಾಕೆಟ್ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್-ಸಿ52 (ಪಿಎಸ್‌ಎಲ್‌ವಿ-ಸಿ52) ಮೊದಲ ಉಡಾವಣಾ ಪ್ಯಾಡ್‌ನಿಂದ ಸಂಚರಿಸಿತು. ಭೂ ವೀಕ್ಷಣಾ ಉಪಗ್ರಹ-೦4 (ಇಒಎಸ್-೦4) ಸೇರಿದಂತೆ ಮೂರು ಉಪಗ್ರಹಗಳನ್ನು ಆರ್‌ಐಎಸ್‌ಎಟಿ-1ಎ ಎಂದು ಹೆಸರಿಸಲಾಗಿತ್ತು. 

Advertisement
Advertisement

ಯಶಸ್ವಿ ಕಾರ್ಯಾಚರಣೆಗಾಗಿ ತಂಡವನ್ನು ಅಭಿನಂದಿಸಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಎಸ್. ಸೋಮನಾಥ್ ಅವರು ‘ಮಿಷನ್ ಯಶಸ್ವಿಯಾಗಿ ಸಾಧಿಸಲಾಗಿದೆ. ಪ್ರಾಥಮಿಕ ಉಪಗ್ರಹ  ಸಹ- ಪ್ರಯಾಣಿಕ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಯಿತು’ ಎಂದು ಹೇಳಿದರು.

ಸುಮಾರು 17 ನಿಮಿಷ 34 ಸೆಕೆಂಡ್‌ಗಳ ಪ್ರಯಣದ ಬಳಿಕ ಎಒಎಸ್-04, ಐಎನ್‌ಎಸ್‌ಪಿಆರ್‌ಇಸ್ಪಾಟ್-1 ಮತ್ತು ಐಎನ್‌ಎಸ್-2ಟಿಡಿ ಸ್ಪಾಟ್ ಉಪಗ್ರಹಗಳನ್ನು 529 ಕಿ,ಮೀ ಗಳಷ್ಟು ದೂರದ ಸನ್ ಸಿಂಕ್ರೋನಸ್ ಸೌರಕಕ್ಷೆಗೆ ಸಫಲವಾಗಿ ಸೇರ್ಪಡೆಗೊಳಿಸಲಾಯಿತು. ಬಳಿಕ ಇಒಎಸ್-04 ಎರಡು ಸೌರ ಸಾಧನಗಳು ಸ್ವಯಂಚಾಲಿತವಾಗಿ ನಿಯೋಜನೆಗೊಂಡವು. ಮುಂದಿನ ದಿನಗಳಲ್ಲಿ ಉಪಗ್ರಹದ ಅಂತಿಮ ಕಾರ್ಯಾಚರಣೆ ಬಳಿಕ ಅದು ದತ್ತಾಂಶ ಒದಗಿಸಲು ಆರಂಭಿಸುತ್ತದೆ ಎಂದು ಇಸ್ರೋ ಹೇಳಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |
July 22, 2025
10:37 PM
by: The Rural Mirror ಸುದ್ದಿಜಾಲ
ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ 2 ದಿನ ಭಾರಿ ಮಳೆ
July 22, 2025
10:01 PM
by: The Rural Mirror ಸುದ್ದಿಜಾಲ
ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?
July 22, 2025
9:52 PM
by: The Rural Mirror ಸುದ್ದಿಜಾಲ
 ಇಂದು ವಿಶ್ವ ಮಾವು ದಿನಾಚರಣೆ | ರಾಜ್ಯದ ಮಾವಿಗೆ ಜಗತ್ತಿನಾದ್ಯಂತ ಬೇಡಿಕೆ |
July 22, 2025
9:34 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group