ಭಾರತೀಯ ಬಾಹ್ಯಾಕಾಶ ಸಂಸ್ಥೆ ತನ್ನ 2022ರ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಸೋಮವಾರ ಆರಂಭಿಸಿದೆ. ಸೋಮವಾರ ಮುಂಜಾನೆ 5.59 ಗಂಟೆಗೆ ಭಾರತೀಯ ರಾಕೆಟ್ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್-ಸಿ52 (ಪಿಎಸ್‌ಎಲ್‌ವಿ-ಸಿ52) ಮೊದಲ ಉಡಾವಣಾ ಪ್ಯಾಡ್‌ನಿಂದ ಸಂಚರಿಸಿತು. ಭೂ ವೀಕ್ಷಣಾ ಉಪಗ್ರಹ-೦4 (ಇಒಎಸ್-೦4) ಸೇರಿದಂತೆ ಮೂರು ಉಪಗ್ರಹಗಳನ್ನು ಆರ್‌ಐಎಸ್‌ಎಟಿ-1ಎ ಎಂದು ಹೆಸರಿಸಲಾಗಿತ್ತು.
ಯಶಸ್ವಿ ಕಾರ್ಯಾಚರಣೆಗಾಗಿ ತಂಡವನ್ನು ಅಭಿನಂದಿಸಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಎಸ್. ಸೋಮನಾಥ್ ಅವರು ‘ಮಿಷನ್ ಯಶಸ್ವಿಯಾಗಿ ಸಾಧಿಸಲಾಗಿದೆ. ಪ್ರಾಥಮಿಕ ಉಪಗ್ರಹ ಸಹ- ಪ್ರಯಾಣಿಕ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಯಿತು’ ಎಂದು ಹೇಳಿದರು.
ಸುಮಾರು 17 ನಿಮಿಷ 34 ಸೆಕೆಂಡ್‌ಗಳ ಪ್ರಯಣದ ಬಳಿಕ ಎಒಎಸ್-04, ಐಎನ್‌ಎಸ್‌ಪಿಆರ್‌ಇಸ್ಪಾಟ್-1 ಮತ್ತು ಐಎನ್‌ಎಸ್-2ಟಿಡಿ ಸ್ಪಾಟ್ ಉಪಗ್ರಹಗಳನ್ನು 529 ಕಿ,ಮೀ ಗಳಷ್ಟು ದೂರದ ಸನ್ ಸಿಂಕ್ರೋನಸ್ ಸೌರಕಕ್ಷೆಗೆ ಸಫಲವಾಗಿ ಸೇರ್ಪಡೆಗೊಳಿಸಲಾಯಿತು. ಬಳಿಕ ಇಒಎಸ್-04 ಎರಡು ಸೌರ ಸಾಧನಗಳು ಸ್ವಯಂಚಾಲಿತವಾಗಿ ನಿಯೋಜನೆಗೊಂಡವು. ಮುಂದಿನ ದಿನಗಳಲ್ಲಿ ಉಪಗ್ರಹದ ಅಂತಿಮ ಕಾರ್ಯಾಚರಣೆ ಬಳಿಕ ಅದು ದತ್ತಾಂಶ ಒದಗಿಸಲು ಆರಂಭಿಸುತ್ತದೆ ಎಂದು ಇಸ್ರೋ ಹೇಳಿದೆ.
ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್‌ಐ ಪ್ರಾತ್ಯಕ್ಷಿಕೆ ಮುಂದುವರಿದಿದೆ. ವೈಜ್ಞಾನಿಕ ಕ್ರಮಗಳು ಮತ್ತು…
ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…
ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…
ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಸಮಾಜದ ನಿಜವಾದ ಸಂಸ್ಕೃತಿಯನ್ನು ತೋರಿಸುತ್ತದೆ. ಸಣ್ಣ ಸಣ್ಣ ಸರಿಯಾದ…
ಗುಜ್ಜೆ ಮತ್ತು ಕಡಲೆ ಬಳಸಿ ತಯಾರಿಸುವ ಸಾಂಪ್ರದಾಯಿಕ ಗಸಿ ರುಚಿಕರ ಆಹಾರ. ಚಪಾತಿ…
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…