ವಿಶ್ವದ ಅತ್ಯಂತ ದುಬಾರಿ ಉಪಗ್ರಹ ನಿಸಾರ್ ಇದೀಗ ವೈಜ್ಞಾನಿಕ ಅಧ್ಯಯನಗಳ ಹಂತವನ್ನು ತಲುಪಿದೆ. ಆರಂಭಿಕ ವಿಶ್ಲೇಷಣೆಗಾಗಿ ಕೃಷಿ, ಅರಣ್ಯ, ಜಲವಿಜ್ಞಾನ, ಭೂವಿಜ್ಞಾನ, ಹಿಮಾಲಯನ್ ಧ್ರುವ ಅಧ್ಯಯನಗಳು ಮತ್ತು ಸಾಗರ ಸಂಶೋಧನೆಯಲ್ಲಿಉಪಗ್ರಹದ S-ಬ್ಯಾಂಡ್ SAR ಡೇಟಾವು ಉತ್ತಮ ಸಾಮರ್ಥ್ಯ ಪ್ರದರ್ಶಿಸಿದೆ. ಅತ್ಯಂತ ಗುಣಮಟ್ಟದ ಡೇಟಾವನ್ನು ನೀಡಿದೆ. ಆಗಸ್ಟ್ 19, 2025 ರಂದು ಉಪಗ್ರಹದ ಮೂಲಕ ಸೆರೆಹಿಡಿಯಲಾದ ಮೊದಲ S-ಬ್ಯಾಂಡ್ ಚಿತ್ರವು ಆಂಧ್ರಪ್ರದೇಶದ ಗೋದಾವರಿ ನದಿ ತೀರವನ್ನು ಒಳಗೊಂಡಿದೆ. ಇಲ್ಲಿನ ಮ್ಯಾಂಗ್ರೋವ್‌ಗಳು, ಕೃಷಿ ಕ್ಷೇತ್ರಗಳು, ಅಡಿಕೆ ತೋಟಗಳು, ಜಲಚರ ಸಾಕಣೆ ಪ್ರದೇಶಗಳು ಮತ್ತು ಇನ್ನೂ ಹೆಚ್ಚಿನ ಪ್ರದೇಶಗಳು ಸ್ಪಷ್ಟವಾಗಿ ಗೋಚರವಾಗಿದೆ. ಇಸ್ರೋ ಈ ಚಿತ್ರವನ್ನು ಬಿಡುಗಡೆ ಮಾಡಿದೆ.
ಭೂಮಿಯ ಮೇಲಿನ ನೈಸರ್ಗಿಕ ಬದಲಾವಣೆಗಳನ್ನು ಅಧ್ಯಯನ ಮಾಡಲು ಈ ಉಪಗ್ರಹ ಬಳಸಲಾಗುತ್ತದೆ. ಇದು ವಿಶ್ವದ ಮೊದಲ ಡ್ಯುಯಲ್-ಫ್ರೀಕ್ವೆನ್ಸಿ ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಗ್ರಹವಾಗಿದ್ದು, ಎರಡು ವಿಭಿನ್ನ ರಾಡಾರ್ ಆವರ್ತನಗಳನ್ನು (L-ಬ್ಯಾಂಡ್ ಮತ್ತು S-ಬ್ಯಾಂಡ್) ಬಳಸಿ ಭೂಮಿಯ ಮೇಲ್ಮೈಯಲ್ಲಿ ಸೆಂಟಿಮೀಟರ್-ಮಟ್ಟದ ಬದಲಾವಣೆಗಳನ್ನು ಅಳೆಯುವ ಸಾಮರ್ಥ್ಯ ಹೊಂದಿದೆ.
ಅಮೇರಿಕಾ ಭಾರತ ಜಂಟಿ ಯೋಜನೆಯಾದ NISAR, ಇದುವರೆಗೆ ನಿರ್ಮಿಸಲಾದ ಮತ್ತು ಕಕ್ಷೆಯಲ್ಲಿರುವ ವಿಶ್ವದ ಅತ್ಯಂತ ದುಬಾರಿ ಭೂ ವೀಕ್ಷಣಾ ಉಪಗ್ರಹವಾಗಿದೆ. ಈ ಉಪಗ್ರಹವನ್ನು ಜುಲೈ 30, 2025 ರಂದು ಶ್ರೀಹರಿಕೋಟಾದ ಭಾರತೀಯ ಉಡ್ಡಯನ ಕೇಂದ್ರದಿಂದ ಭಾರತೀಯ ರಾಕೆಟ್ GSLV-F16 ಮೂಲಕ ಉಡಾಯಿಸಲಾಯಿತು. ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ಬೆಂಬಲದೊಂದಿಗೆ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ((ISTRAC) ನಿಂದ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು. ಬಳಿಕ ವಿವಿಧ ಹಂತಗಳು ದಾಟಿ ಇಸ್ರೋ ಪ್ರಕಾರ, ನಿಸಾರ್ ನಿಂದ ಮೊದಲ ಚಿತ್ರವನ್ನು ಆಗಸ್ಟ್ 19, 2025 ರಂದು ಸ್ವೀಕರಿಸಲಾಯಿತು. ಅಂದಿನಿಂದ NISAR S-ಬ್ಯಾಂಡ್ SAR ನಿಯಮಿತವಾಗಿ ವಿವಿಧ ಕಾರ್ಯಾಚರಣೆ ಮಾಡುತ್ತಿತ್ತು. ವಿಶೇಷವಾಗಿ ಈ ಉಪಗ್ರಹವು ಭಾರತೀಯ ಭೂಪ್ರದೇಶ ಮತ್ತು ಜಾಗತಿಕ ಮಾಪನಾಂಕ ನಿರ್ಣಯ-ಮೌಲ್ಯಮಾಪನ ತಾಣಗಳ ಮೇಲೆ ಚಿತ್ರಿಸುತ್ತಿದೆ. ಗುಣಮಟ್ಟದ ಚಿತ್ರ ಸಂಗ್ರಹಿಸುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಈ ಉಪಗ್ರಹವು ವಿಶೇಷವಾಗಿ ಕೃಷಿಗೆ, ಪರಿಸರಕ್ಕೆ, ವಿಪತ್ತು ನಿರ್ವಹಣೆಗೆ ಆದ್ಯತೆ ನೀಡಿದೆ. ಬೆಳೆಗಳ ಪರಿಸ್ಥಿತಿ ಮತ್ತು ಮಣ್ಣಿನ ತೇವಾಂಶವನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಅರಣ್ಯ, ಹಿಮ, ಮಂಜುಗಡ್ಡೆ ಮತ್ತು ಜ್ವಾಲಾಮುಖಿಗಳಲ್ಲಿನ ಬದಲಾವಣೆಗಳನ್ನು ಗಮನಿಸುತ್ತದೆ. ಪ್ರಕೃತಿ ವಿಕೋಪಗಳ ಸಮಯದಲ್ಲಿ ಭೂಮಿಯ ಮೇಲ್ಮೈಯಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚಲು ನೆರವಾಗುತ್ತದೆ. NISAR ಭಾರತ ಮತ್ತು ಅಮೆರಿಕಕ್ಕೆ ಮಾತ್ರವಲ್ಲದೆ, ಪ್ರಪಂಚದಾದ್ಯಂತದ ದೇಶಗಳಿಗೆ, ವಿಶೇಷವಾಗಿ ವಿಪತ್ತು ನಿರ್ವಹಣೆ, ಕೃಷಿ ಮತ್ತು ಹವಾಮಾನ ಮೇಲ್ವಿಚಾರಣೆಯಂತಹ ಕ್ಷೇತ್ರಗಳಲ್ಲಿ ನಿರ್ಣಾಯಕ ದತ್ತಾಂಶವನ್ನು ಒದಗಿಸುತ್ತದೆ.
ಎಸ್-ಬ್ಯಾಂಡ್ ಮತ್ತು ಎಸ್‌ಎಆರ್ ಡೇಟಾಗೆ ಉತ್ತಮ ಸಾಮರ್ಥ್ಯವಿದೆ. ಹೀಗಾಗಿ ಈ ಉಪಗ್ರಹ ಗಮನ ಸೆಳೆದಿದೆ. ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ಆರಂಭಿಕ ಅಧ್ಯಯನದಲ್ಲಿ ಕೃಷಿ, ಅರಣ್ಯ, ಭೂವಿಜ್ಞಾನ, ಜಲವಿಜ್ಞಾನ, ಧ್ರುವ-ಹಿಮಾಲಯದ ಮಂಜುಗಡ್ಡೆ-ಹಿಮ ಮತ್ತು ಸಾಗರ ಅಧ್ಯಯನಗಳಂತಹ ವಿವಿಧ ಉದ್ದೇಶಿತ ವಿಜ್ಞಾನ ಮತ್ತು ಅನ್ವಯಿಕ ಕ್ಷೇತ್ರಗಳಿಗೆ ಎಸ್-ಬ್ಯಾಂಡ್ ಎಸ್‌ಎಆರ್ ಡೇಟಾದ ಸಾಮರ್ಥ್ಯ ಬೇಕಾಗಿದೆ. ಇದಕ್ಕಾಗಿ ಮೊದಲು ಸೆರೆ ಹಿಡಿದ ಫೋಟೊವು ಉತ್ತಮ ಸಾಮರ್ಥ್ಯ ಹೊಂದಿದೆ. ಈ ಚಿತ್ರದಲ್ಲಿ ಮ್ಯಾಂಗ್ರೋವ್‌ಗಳು, ತೋಟಗಳು, ಅಡಿಕೆ ತೋಟಗಳು, ಜಲಚರ ಸಾಕಣೆ ಕ್ಷೇತ್ರಗಳು ಮತ್ತು ಇತರವುಗಳಂತಹ ವಿವಿಧ ಸಸ್ಯವರ್ಗಗಳನ್ನು ಚಿತ್ರದಲ್ಲಿ ಸ್ಪಷ್ಟವಾಗಿ ಕಾಣಬಹುದು. ಹೀಗಾಗಿ ಮುಂದೆ ಪರಿಸರ ವ್ಯವಸ್ಥೆಗಳಲ್ಲಿನ ಬದಲಾವಣೆಗಳು, ಸಂಶೋಧಕರಿಗೆ ಕಾಡ್ಗಿಚ್ಚುಗಳು, ಜ್ವಾಲಾಮುಖಿ ಸ್ಫೋಟಗಳು, ಭೂಕಂಪಗಳು ಮತ್ತು ಭೂಕುಸಿತಗಳಂತಹ ನೈಸರ್ಗಿಕ ವಿಕೋಪಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿದೆ. ಮಂಜುಗಡ್ಡೆಗಳು, ಭೂಮಿಯ ವಿರೂಪ ಮತ್ತು ಇತರ ಒಳನೋಟಗಳನ್ನು ಕೂಡಾ ಅಧ್ಯಯನ ಮಾಡಲು ಸಾಧ್ಯವಿದೆ.


