#GaganyaanCraft | ಮತ್ತೊಂದು ಸಾಧನೆಯತ್ತ ಇಸ್ರೋ | 2024ಕ್ಕೆ ಮಾನವ ಬಾಹ್ಯಾಕಾಶಕ್ಕೆ – ಭಾರತದ ಗಗನಯಾನ ನೌಕೆ ಮೊದಲ ಚಿತ್ರ ರಿಲೀಸ್‌ |

October 7, 2023
7:15 PM
ಗಗನಯಾನ#Gaganyaan ಕಾರ್ಯಾಚರಣೆಗಾಗಿ ಶೀಘ್ರದಲ್ಲೇ ಮಾನವರಹಿತ ಹಾರಾಟ ಪರೀಕ್ಷೆಯನ್ನು ಪ್ರಾರಂಭಿಸುವುದಾಗಿ ಇಸ್ರೋ ಹೇಳಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಇಸ್ರೋ, ಗಗನಯಾನ ಮಿಷನ್‌ಗಾಗಿ ಮಾನವರಹಿತ ಹಾರಾಟ ಪರೀಕ್ಷೆಗಳನ್ನು ಇಸ್ರೋ ಪ್ರಾರಂಭಿಸಲಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ#ISRO ಒಂದಾದ ಮೇಲೊಂದರಂತೆ ಸಾಧನೆಯನ್ನು ಮಾಡುತ್ತಲೇ ಇದೆ. ಚಂದ್ರಯಾನ-3 ಮತ್ತು ಆದಿತ್ಯ ಎಲ್‌1#Aditya L1 ಯಶಸ್ಸಿನ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ಸಜ್ಜಾಗುತ್ತಿದೆ. 2024ರಲ್ಲಿ ಮಾನವರನ್ನು ಕೊಂಡೊಯ್ಯಲು ಸಜ್ಜಾಗಿರುವ ಗಗನಯಾನ ಬಾಹ್ಯಾಕಾಶ ನೌಕೆಯ ಚಿತ್ರಗಳನ್ನು ಬಿಡುಗಡೆ ಮಾಡಿದೆ.

Advertisement
Advertisement
ಗಗನಯಾನ ಕಾರ್ಯಾಚರಣೆಗಾಗಿ ಶೀಘ್ರದಲ್ಲೇ ಮಾನವರಹಿತ ಹಾರಾಟ ಪರೀಕ್ಷೆಯನ್ನು ಪ್ರಾರಂಭಿಸುವುದಾಗಿ ಇಸ್ರೋ ಹೇಳಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಇಸ್ರೋ, ಗಗನಯಾನ ಮಿಷನ್‌ಗಾಗಿ ಮಾನವರಹಿತ ಹಾರಾಟ ಪರೀಕ್ಷೆಗಳನ್ನು ಇಸ್ರೋ ಪ್ರಾರಂಭಿಸಲಿದೆ. ಕ್ರೂ ಎಸ್ಕೇಪ್ ಸಿಸ್ಟಮ್‌ನ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 (ಟಿವಿ-ಡಿ1) ಗಾಗಿ ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದೆ.

 

ಗಗನಯಾನ ಯೋಜನೆಯು 2024 ರಲ್ಲಿ ಕಾರ್ಯರೂಪಕ್ಕೆ ಬರಲಿದೆ. ಈ ಯೋಜನೆಯಲ್ಲಿ ಮೂವರು ಗಗನಯಾತ್ರಿಗಳನ್ನು 400 ಕಿ.ಮೀ ಎತ್ತರದ ಕಕ್ಷೆಗೆ ಮೂರು ದಿನಗಳ ಪ್ರಯಾಣಕ್ಕಾಗಿ ಕರೆದೊಯ್ಯಲಾಗುವುದು. ನಂತರ ಅವರನ್ನು ಮರಳಿ ಸುರಕ್ಷಿತವಾಗಿ ಭೂಮಿಗೆ ಕರೆತಂದು, ಭಾರತದ ವ್ಯಾಪ್ತಿಯ ಸಮುದ್ರದಲ್ಲಿ ಇಳಿಸಲಾಗುತ್ತದೆ. ಕ್ರೂ ಎಸ್ಕೇಪ್‌ ಸಿಸ್ಟಮ್‌ ಗಗನಯಾನ ಯೋಜನೆಯ ಬಹುದೊಡ್ಡ ಅಂಶವಾಗಿದ್ದು, ಡೈನಮಿಕ್‌ ಪ್ರಶೆರ್‌ ಹಾಗೂ ಟ್ರಾನ್ಸಾನಿಕ್‌ ಕಂಡೀಶನ್‌ಗಳಲ್ಲಿಯೂ ಈ ವ್ಯವಸ್ಥೆ ಕಾರ್ಯನಿರ್ವಹಿಸುವುದು ಅತ್ಯಗತ್ಯವಾಗಿದೆ. ಅದರ ಕಾರ್ಯನಿರ್ವಹಣೆಯನ್ನು ಖಾತರಿಪಡಿಸಿಕೊಳ್ಳುವ ಉದ್ದೇಶವನ್ನು ಪರೀಕ್ಷಾರ್ಥ ಉಡಾವಣೆ ಹೊಂದಿದೆ. ಒಟ್ಟು 4 ಪರೀಕ್ಷಾರ್ಥ ಉಡಾವಣೆ ನಡೆಯಲಿದ್ದು, ಈ ತಿಂಗಳ ಅಂತ್ಯದಲ್ಲಿ ಟಿವಿ-ಡಿ1 ಎನ್ನುವ ಪರೀಕ್ಷಾರ್ಥ ವಾಹನ ಉಡಾವಣೆಯಾಗಲಿದೆ.

  • ಅಂತರ್ಜಾಲ ಮಾಹಿತಿ

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮ
May 22, 2025
8:02 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 22-05-2025 | ಮೇ ಕೊನೆಯ ತನಕವೂ ಉತ್ತಮ ಮಳೆ ಸಾಧ್ಯತೆ | ಇನ್ನೊಮ್ಮೆ ವಾಯುಭಾರ ಕುಸಿತದ ಲಕ್ಷಣ |
May 22, 2025
2:37 PM
by: ಸಾಯಿಶೇಖರ್ ಕರಿಕಳ
ಅಕಾಲಿಕ ಮಳೆ | ಮಾವು ಇಳುವರಿ ಕುಸಿತ | ಬೆಲೆ ಕುಸಿತ | ರೈತರಿಗೆ ನಿರಾಸೆ |
May 22, 2025
7:33 AM
by: The Rural Mirror ಸುದ್ದಿಜಾಲ
ಶಾಲೆ ಆರಂಭ | ಯೋಜಿತ ಮತ್ತು ಪರಿಣಾಮಕಾರಿ ಆರಂಭದ ಅಗತ್ಯ
May 22, 2025
7:17 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror

Join Our Group