ಪ್ರಪಂಚದ ಅತ್ಯಂತ ಕಿರಿದಾದ ಜಾನುವಾರುಗಳು ಪೈಕಿ ಪುಂಗನೂರು ತಳಿಯು ಇಡೀ ದೇಶದಲ್ಲಿ 500 ಕ್ಕಿಂತ ಕಡಿಮೆ ಹಸುಗಳಿವೆ. 2022 ರಲ್ಲಿ ಈ ತಳಿಗೆ ಗೌರವ ತಂದಿತು. ಭಾರತದ ಮೊದಲ ಐವಿಎಫ್ ಪುಂಗನೂರ್ ಕರು ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಜನಿಸಿದೆ ಎಂದು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಪ್ರಕಟಿಸಿದೆ.
ಮೀನುಗಾರಿಕೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ, ಸ್ಥಳಿಯ ಜಾನುವಾರುಗಳನ್ನು ಸಂರಕ್ಷಿಸುವ ಉದ್ದೇಶದಿಂದ ರಾಷ್ಟ್ರೀಯ ಡೈರಿ ಉತ್ಪಾದನೆಗೆ ಗಮನಾರ್ಹ ಉತ್ತೇಜನವನ್ನು ಹಾಗೂ ಸಾಮರ್ಥ್ಯವನ್ನು ಎತ್ತಿಹಿಡಿಯುವ ಯೋಜನೆಯನ್ನು ಪ್ರಾರಂಭಿಸಿದೆ. ಸ್ಥಳಿಯ ಜಾನುವಾರುಗಳ ಹಾಲು ರೋಗ ನಿರೋಧಕ ಗುಣ ಹೊಂದಿದ್ದು ಹೆಚ್ಚಿನ ಪೌಷ್ಠಿಕಾಂಶವನ್ನು ಹೊಂದಿರುತ್ತದೆ ಎಂದು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಅಧಿಕಾರಿ ಹೇಳಿದ್ದಾರೆ.
ಅಕ್ಟೋಬರ್‌ನಲ್ಲಿ ಭಾರತದ ಮೊದಲ ಬನ್ನಿ ಎಮ್ಮೆ, ಐವಿಎಫ್ ಕರು ಗುಜರಾತ್‌ನ ಸೋಮನಾಥ್ ಜಿಲ್ಲೆಯಲ್ಲಿ ಜನಿಸಿದರೆ, ರಾಜಸ್ಥಾನದ ಸೂರತ್‌ಗಢದಲ್ಲಿ ಐವಿಎಫ್ ತಂತ್ರಜ್ಞಾನದ ಮೂಲಕ ಮೊದಲ ಹೆಣ್ಣು ಕರು ಜನನವನ್ನು ಆಗಿದೆ.
ಅನೇಕ ಕಾರಣಗಳಿಗಾಗಿ, ಕಳೆದ ಹಲವಾರು ದಶಕಗಳಲ್ಲಿ ಭಾರತವು ಸ್ಥಳಿಯ ಜಾನುವಾರುಗಳ ಕುಸಿತವನ್ನು ಕಂಡಿದೆ. ಈಗ ಪಶುಸಂಗೋಪನಾ ಇಲಾಖೆಯು ಸ್ಥಳಿಯ, ಅಪರೂಪದ ಗೋವುಗಳನ್ನು ಸಂರಕ್ಷಿಸಲು ಜಾನುವಾರುಗಳಿಗೆ ಐವಿಎಫ್ ಬಳಕೆಯನ್ನು ಉತ್ತೇಜಿಸುತ್ತಿದೆ.