ಮೊದಲ ಐವಿಎಫ್ ಪುಂಗನೂರು ತಳಿಯ ಕರು ಜನನ | ಸ್ಥಳೀಯ ಜಾನುವಾರುಗಳ ರಕ್ಷಣೆಯತ್ತ ಚಿತ್ತ |

January 9, 2022
10:30 PM

ಪ್ರಪಂಚದ ಅತ್ಯಂತ ಕಿರಿದಾದ ಜಾನುವಾರುಗಳು ಪೈಕಿ ಪುಂಗನೂರು ತಳಿಯು ಇಡೀ ದೇಶದಲ್ಲಿ 500 ಕ್ಕಿಂತ ಕಡಿಮೆ ಹಸುಗಳಿವೆ. 2022 ರಲ್ಲಿ ಈ ತಳಿಗೆ ಗೌರವ ತಂದಿತು. ಭಾರತದ ಮೊದಲ ಐವಿಎಫ್  ಪುಂಗನೂರ್ ಕರು ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಜನಿಸಿದೆ ಎಂದು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಪ್ರಕಟಿಸಿದೆ.

ಮೀನುಗಾರಿಕೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ, ಸ್ಥಳಿಯ ಜಾನುವಾರುಗಳನ್ನು ಸಂರಕ್ಷಿಸುವ ಉದ್ದೇಶದಿಂದ ರಾಷ್ಟ್ರೀಯ ಡೈರಿ ಉತ್ಪಾದನೆಗೆ ಗಮನಾರ್ಹ ಉತ್ತೇಜನವನ್ನು ಹಾಗೂ ಸಾಮರ್ಥ್ಯವನ್ನು ಎತ್ತಿಹಿಡಿಯುವ ಯೋಜನೆಯನ್ನು ಪ್ರಾರಂಭಿಸಿದೆ. ಸ್ಥಳಿಯ ಜಾನುವಾರುಗಳ ಹಾಲು ರೋಗ ನಿರೋಧಕ ಗುಣ ಹೊಂದಿದ್ದು ಹೆಚ್ಚಿನ ಪೌಷ್ಠಿಕಾಂಶವನ್ನು ಹೊಂದಿರುತ್ತದೆ ಎಂದು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಅಧಿಕಾರಿ ಹೇಳಿದ್ದಾರೆ.

ಅಕ್ಟೋಬರ್‌ನಲ್ಲಿ ಭಾರತದ ಮೊದಲ ಬನ್ನಿ ಎಮ್ಮೆ, ಐವಿಎಫ್ ಕರು ಗುಜರಾತ್‌ನ ಸೋಮನಾಥ್ ಜಿಲ್ಲೆಯಲ್ಲಿ ಜನಿಸಿದರೆ, ರಾಜಸ್ಥಾನದ ಸೂರತ್‌ಗಢದಲ್ಲಿ ಐವಿಎಫ್ ತಂತ್ರಜ್ಞಾನದ ಮೂಲಕ ಮೊದಲ ಹೆಣ್ಣು ಕರು ಜನನವನ್ನು ಆಗಿದೆ.

ಅನೇಕ ಕಾರಣಗಳಿಗಾಗಿ, ಕಳೆದ ಹಲವಾರು ದಶಕಗಳಲ್ಲಿ ಭಾರತವು ಸ್ಥಳಿಯ ಜಾನುವಾರುಗಳ ಕುಸಿತವನ್ನು ಕಂಡಿದೆ. ಈಗ ಪಶುಸಂಗೋಪನಾ ಇಲಾಖೆಯು ಸ್ಥಳಿಯ, ಅಪರೂಪದ ಗೋವುಗಳನ್ನು ಸಂರಕ್ಷಿಸಲು ಜಾನುವಾರುಗಳಿಗೆ ಐವಿಎಫ್ ಬಳಕೆಯನ್ನು ಉತ್ತೇಜಿಸುತ್ತಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

‘ರೋಸ್ಟೆಡ್ ಅಡಿಕೆ’ ಆಮದು ವರ್ಗೀಕರಣಕ್ಕೆ ಮತ್ತೊಂದು ತಿರುವು – ಹೈಕೋರ್ಟ್ ತೀರ್ಪು ಉಲ್ಲೇಖಿಸಿ ಅರ್ಜಿ ತಿರಸ್ಕರಿಸಿದ ಮುಂಬೈ ಪ್ರಾಧಿಕಾರ
September 28, 2026
10:20 PM
by: ದ ರೂರಲ್ ಮಿರರ್.ಕಾಂ
ಬರಕ್ಕೆ ರಾಗಿ ಕೂಡ ಸೋಲುತ್ತಿದೆ – ‘ಬರ ನಿರೋಧಕ’ ಎಂದರೆ ಮಳೆ ಇಲ್ಲದಿದ್ದರೂ ಬೆಳೆಯುತ್ತದೆ ಎಂದಲ್ಲ!
September 28, 2026
9:05 PM
by: ದ ರೂರಲ್ ಮಿರರ್.ಕಾಂ
₹2,000ಕ್ಕಿಂತ ಹೆಚ್ಚಿನ UPI ವಹಿವಾಟಿನ MDRಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ
September 28, 2026
2:31 PM
by: ದ ರೂರಲ್ ಮಿರರ್.ಕಾಂ
ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಎರಡು ಪದಕ: ಪುರುಷರಿಗೆ ಬೆಳ್ಳಿ, ಮಹಿಳೆಯರಿಗೆ ಕಂಚು – ಪ್ರಧಾನಿ ಮೋದಿ ಅಭಿನಂದನೆ
September 28, 2026
1:43 PM
by: ಮಿರರ್‌ ಡೆಸ್ಕ್‌

You cannot copy content of this page - Copyright -The Rural Mirror