ಹಲಸಿನೊಂದಿಗೆ ಫೋಟೋ | ಬಹುಮಾನ ವಿತರಣಾ ಕಾರ್ಯಕ್ರಮ | ಹಲಸು ಅನ್ನದ ಬಟ್ಟಲಿಗೆ ಬರುವಂತಾಗಲಿ |

September 5, 2021
10:29 PM

ಬಂಟ್ವಾಳ:ಹಲಸು ಒಂದು ಕಾಲದಲ್ಲಿ  ಹಸಿದ ಹೊಟ್ಟೆಯ ಆಹಾರವಾಗಿತ್ತು, ಬದಲಾದ ಪರಿಸ್ಥಿತಿಯಲ್ಲಿ ಮನುಷ್ಯನ ನಿರ್ಲಕ್ಷ್ಯದಿಂದ ಹಲಸು ಮೂಲೆಗುಂಪಾಗಿತ್ತು. ಈಗ ಮನೆಯಲ್ಲಿ ಅನ್ನದ ಬಟ್ಟಲಿಗೆ ಬರುತ್ತಿದೆ, ಹಲಸು ಕೂಡಾ ಉತ್ತಮ ಆಹಾರವಾಗಿದೆ ಎಂದು ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ.ವಸಂತ ಬಿ ಬಾಳಿಗಾ ಹೇಳಿದರು.

Advertisement
Advertisement
Advertisement

ಅವರು  ರಾರಾಸಂ ಫೌಂಡೇಶನ್ ಬಂಟ್ವಾಳ ಮತ್ತು ಹಲಸು ಪ್ರೇಮಿ ಕೂಟ, ಬಂಟ್ವಾಳ ಇದರ ಸಹಯೋಗದಲ್ಲಿ ಆಯೋಜಿಸಿದ “ಹಲಸಿನೊಂದಿಗೆ ಫೋಟೋ” ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ  ಮಾತನಾಡಿದರು. ಹಲಸು ಬೆಳೆದರೆ ಮಾತ್ರಾ ಸಾಲದು ಅದರ ಮೌಲ್ಯವರ್ಧನೆ ಹಾಗೂ ಮಾರಾಟವೂ ಅಗತ್ಯವಿದೆ. ಅದನ್ನು  ಅತ್ಯಂತ ಸಮರ್ಥವಾಗಿ ಮಾಡುತ್ತಿರುವ ಹಲಸು ಪ್ರೇಮಿ ಕೂಟದ ಪಾತ್ರ ಸಮಾಜಕ್ಕೆ ಉತ್ತಮ ಕೊಡುಗೆ ಎಂದರು.ಹಲಸು ನಮ್ಮ ಜೀವನದ ಒಂದು ಭಾಗ. ನಮ್ಮಲ್ಲಿ ಬೆಳೆದ ಹಲಸುಗಳಿಗೆ ಹೊಸ ರೂಪ ಕೊಟ್ಟು ಜನರಿಗೆ ಬಗೆ ಬಗೆಯ ತಿನಸುಗಳು ಸಿಗಲು  ಹಲಸಿನಂಗಡಿ ತುಂಬಾ ಸಹಕಾರಿ ಎಂದರು.

Advertisement

ಅತಿಥಿಗಳಾಗಿದ್ದ  ಅಂಕಣಗಾರ, ಅಡಿಕೆ ಪತ್ರಿಕೆ ಸಹಾಯಕ ಸಂಪಾದಕ ನಾ ಕಾರಂತ ಪೆರಾಜೆ ಮಾತನಾಡಿ, ಯಾವುದೇ ಆಂದೋಲನಗಳು ಹಂತ ಹಂತವಾಗಿ ಬೆಳೆಯಬೇಕು. ಹಲಸು ಆಂದೋಲನವು ಈಗ ಊಟದ ಬಟ್ಟಲಿಗೆ ಬಂದಿದೆ ಮಾತ್ರವಲ್ಲ ಕಾರ್ಪೋರೇಟ್‌ ವಲಯದಲ್ಲೂ ಹಲಸು ಸ್ಥಾನ ಪಡೆದಿದೆ.ಹಲಸು ಮಾರುಕಟ್ಟೆಯು ಇಂದು ವ್ಯಾಪಿಸಿದೆ. ಮೌಲ್ಯವರ್ಧನೆಯೂ ನಡೆಯುತ್ತಿದೆ ಇದು  ಆಶಾದಾಯಕ ಬೆಳವಣಿಗೆ ಎಂದರು.

Advertisement

ನಿವೃತ್ತ ಅರಣ್ಯ ಅಧಿಕಾರಿ ಮತ್ತು ಹಲಸು ಬೆಳೆಗಾರ ಗ್ಯಾಬ್ರಿಯಲ್‌ ವೇಗಸ್ ಮಾತನಾಡಿ, ಹಲಸು ಕೃಷಿಯೂ ಭವಿಷ್ಯದಲ್ಲಿ  ಉತ್ತಮ ಕೃಷಿಯಾಗುವುದರಲ್ಲಿ  ಸಂದೇಹವಿಲ್ಲ. ಆಹಾರ ಬೆಳೆಯೂ ಆದ ಹಲಸು ಬೆಳೆದು ಈ ಬಾರಿ ಆದಾಯಯೂ ಗಳಿಸಿದ್ದೇನೆ. ಹಲಸಿಗೆ ಮಾರುಕಟ್ಟೆ ಇಲ್ಲ ಎಂದು  ಅನೇಕರು ಹೇಳುತ್ತಿದ್ದರು. ಈ ವರ್ಷ ನಮ್ಮಲ್ಲಿ  ಬೆಳೆದ ಹಲಸಿಗೆ ಉತ್ತಮ ಬೇಡಿಕೆಯೂ ಬಂದಿತ್ತು ಎಂದರು.

Advertisement

 

ಕೃಷಿಕ, ಪತ್ರಕರ್ತ ಮಹೇಶ್‌ ಪುಚ್ಚಪ್ಪಾಡಿ ಮಾತನಾಡಿ, ಸಮ್ಮಿಶ್ರ ಕೃಷಿಯಿಂದ ಮಾತ್ರವೇ ಭವಿಷ್ಯದಲ್ಲಿ  ಕೃಷಿಕರ  ಆದಾಯ ದ್ವಿಗುಣವಾಗಲಿದೆ. ಹಲಸು ಮೌಲ್ಯವರ್ಧನೆಯ ಮೂಲಕ ಕೃಷಿಕರಿಗೆ ಉತ್ತಮ ಆದಾಯವಾಗಬಹುದು. ಕೃಷಿಕ,ಮೌಲ್ಯವರ್ಧನೆ, ಮಾರುಕಟ್ಟೆ, ಗ್ರಾಹಕರು ಇದೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿರುವುರಿಂದ ಎಲ್ಲಾ ಕಡೆಯೂ ಗಮನ ಅಗತ್ಯವಿದೆ ಎಂದರು.

Advertisement

ಹಲಸು ಸ್ನೇಹಿ ಕೂಟದ  ಮುಳಿಯ ವೆಂಕಟ ಕೃಷ್ಣ ಶರ್ಮ  ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಪೋನೋಸ್ ಹಲಸಿನಂಗಡಿ ಮಾಲಕರು ಹಾಗೂ ಹಲಸು ಪ್ರೇಮಿಕೂಟದ ಮೌನೇಶ್ ಮಲ್ಯ ಮಾತನಾಡಿ, ಮುಂದಿನ ದಿನಗಳಲ್ಲಿ ವಿವಿಧ ಹಲಸು ತಳಿಗಳನ್ನು ಜನರಿಗೆ ನೀಡಿ ಹಲಸು ಸಂರಕ್ಷಣೆ ಹಾಗೂ ಕೃಷಿಕರಿಂದಲೇ ಹಲಸು ಖರೀದಿ ನಡೆಸುವ ಬಗ್ಗೆ ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಹಲಸಿನೊಂದಿಗೆ ಫೋಟೋ” ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.

ರಾರಾಸಂ ಸಂಸ್ಥೆಯ ಅಧ್ಯಕ್ಷರಾದ ರಾಧಾಕೃಷ್ಣ ಬಂಟ್ವಾಳ ಸ್ವಾಗತಿಸಿದರು. ರಾರಾಸಂ ನಿರ್ದೇಶಕರಾದ ಕೇಶವ್ ಮಾಸ್ಟರ್ ಧನ್ಯವಾದ ಸಮರ್ಪಿಸಿದರು. ಶಿಕ್ಷಕರಾದ ದಾಮೋದರ್ ಮಾಸ್ಟರ್ ನಿರೂಪಿಸಿದರು.

Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror