ಕರಾವಳಿಯಲ್ಲೂ ಹಲಸಿಗೆ ಬರುತ್ತಿದೆ ಮಾನ | 10 ಸಾವಿರ ಕೆಜಿ ಹಲಸಿನ ಹಣ್ಣು ಮಾರಾಟ | ರೈತರಿಂದ ಗ್ರಾಹಕರಿಗೆ ನೇರ ವ್ಯವಸ್ಥೆ ಮಾಡಿದ ಬಂಟ್ವಾಳದ ಹಲಸಿನಂಗಡಿ |

September 5, 2021
10:59 PM

ಹಲಸು ಇನ್ನು ಕೃಷಿಕರಲ್ಲಿ ಎಸೆಯುವ ವಸ್ತುವಲ್ಲ. ಅದಕ್ಕೂ ಮಾನ-ಸಮ್ಮಾನಗಳು ಬಂದಿವೆ. ಬಂಟ್ವಾಳದ ಪೊನೋಸ್ ಹಲಸಿನಂಗಡಿಯಲ್ಲಿ  ಹಲಸು ಪ್ರೇಮಿ ಕೂಟದ ಮೌನೀಶ್‌ ಮಲ್ಯರು  ಈ ಬಾರು 10 ಸಾವಿರ ಕೆಜಿ ಹಲಸು  ಮಾರಾಟ ಮಾಡಿದ್ದಾರೆ. ಈ ಮೂಲಕ ಕೃಷಿಕರಿಗೂ ನೆರವಾಗಿದ್ದಾರೆ. ಈಗ ಹಲಸು ಮೌಲ್ಯವರ್ಧನೆಗೊಂಡು ಸುಮಾರು 25  ಬಗೆಯ ವಿವಿಧ ಹಲಸಿನ ಖಾದ್ಯಗಳು ಅಲ್ಲಿ ಮಾರಾಟಕ್ಕೂ ಲಭ್ಯವಿದೆ.

Advertisement

ಬಂಟ್ವಾಳದ ಪಾಣೆಮಂಗಳೂರಿನ ಪೊನೋಸ್ ಹಲಸಿನಂಗಡಿ ಈಗ ಗಮನಸೆಳೆಯುತ್ತಿದೆ. ಕೇರಳದಲ್ಲಿ  ಮಾತ್ರವೇ ಹಲಸಿನಂಗಡಿ ಕಾಣಸಿಗುತ್ತಿದ್ದ ಸಮಯ ಇತ್ತು, ಈಗ ಕರ್ನಾಟಕದ ಅದರಲ್ಲೂ ಬಂಟ್ವಾಳದಲ್ಲಿ  ಹಲಸಿನಂಗಡಿ ಕಾಣುತ್ತಿದೆ. ಬಂಟ್ವಾಳದ ಹಲಸು ಪ್ರೇಮಿ ಕೂಟದ ಮೌನೀಶ್‌ ಮಲ್ಯ ಅವರು ಇದರ ಸಾರಥಿ. ಕಳೆದ ಕೆಲವು ಸಮಯಗಳಿಂದ ಹಲಸಿನಿಂದ ತಯಾರಿಸಬಹುದಾದ ವಿವಿಧ ಉತ್ಪನ್ನಗಳ ಬಗ್ಗೆ ಅಧ್ಯಯನ ಮಾಡಿ, ತಾವೇ ಸ್ವತ: ತಯಾರಿಸಿ, ಅದರಲ್ಲಿ  ಇನ್ನಷ್ಟು ಪರಿಣತಿಯನ್ನು  ಪಡೆದು ಇದೀಗ ಅಧಿಕೃತವಾಗಿ ಹಲಸಿನಂಗಡಿಗೆ ಚಾಲನೆ ನೀಡಿದ್ದಾರೆ. ಈಗ ಒಂದಲ್ಲ, ಎರಡಲ್ಲ  ಸುಮಾರು 25  ಬಗೆಯ ಹಲಸಿನ ಖಾದ್ಯಗಳು ಇಲ್ಲಿ  ಲಭ್ಯವಿದೆ. ಹಲಸಿನ ಹಪ್ಪಳದಿಂದ ತೊಡಗಿ ಐಸ್ ಕ್ರೀಂ ವರೆಗೆ ಇಲ್ಲಿ  ವಿವಿಧ ಬಗೆಯ ಹಲಸಿನದ್ದೇ ತಿಂಡಿಗಳು ಸಿಗುತ್ತವೆ. ತಾವೇ ಮೌಲ್ಯವರ್ಧನೆ ಮಾಡುವ ಹಲಸು ಉತ್ಪನ್ನಗಳ ಜೊತೆಗೆ ಕೃಷಿಕರು ತಯಾರು ಮಾಡುವ ಹಲಸಿನ ಉತ್ಪನ್ನಗಳನ್ನು ಕೂಡಾ ಮಾರಾಟ ಮಾಡುತ್ತಾರೆ. ಹಲಸಿನ ಉತ್ಪನ್ನಗಳು ಎಲ್ಲೆಲ್ಲಾ ಲಭ್ಯವಿದೆಯೋ ಅಲ್ಲಿಂದೆಲ್ಲಾ ತರುತ್ತಾರೆ. ಕೃಷಿಕರಿಗೆ ಉಪಯೋಗವಾಗಬೇಕು ಹಾಗೂ ಹಲಸು ಪ್ರತೀ ಮನೆಗೂ ವರ್ಷದ ಎಲ್ಲಾ ಸಮಯದಲ್ಲೂ ಲಭ್ಯವಾಗಬೇಕು ಎನ್ನುವುದು  ಮೌನೀಶ್‌ ಮಲ್ಯರ ಉದ್ದೇಶ.

ಹಲಸನ್ನು ಸ್ಥಳೀಯ ಕೃಷಿಕರ ತೋಟದಿಂದಲೇ ಖರೀದಿ ಮಾಡುತ್ತಾರೆ. ಕೃಷಿಕರಿಗೆ ಉತ್ತಮ ಧಾರಣೆ ನೀಡಿ ಖರೀದಿ ಮಾಡಿ ಬಳಿಕ ಗುಣಮಟ್ಟದ ಹಣ್ಣುಗಳ ಮಾರಾಟದ ಬಳಿಕ ಉಳಿದ ಹಣ್ಣುಗಳಲ್ಲಿ  ಹಪ್ಪಳ ಇತ್ಯಾದಿ ಮೌಲ್ಯವರ್ಧನೆ ಮಾಡುತ್ತಾರೆ. ಹೀಗೇ ಈ ಬಾರಿ ಸುಮಾರು ಹತ್ತು ಸಾವಿರ ಕೆಜಿಯಷ್ಟು ಹಲಸು ಖರೀದಿ ಹಾಗೂ ಮಾರಾಟ ಮಾಡಿದ್ದಾರೆ. ಈ ಮೂಲಕ ಕೃಷಿಕರಿಗೂ ನೆರವಾಗಿದ್ದಾರೆ. ಕೆಲವು ಕೃಷಿಕರು ಹಲಸಿನ ಮೌಲ್ಯವರ್ಧನೆ ಮಾಡಿಯೇ ನೀಡುತ್ತಾರೆ. ಅದಕ್ಕೂ ವೇದಿಕೆ ಕಲ್ಪಿಸಿದ್ದಾರೆ, ಗುಣಮಟ್ಟ ಕಾಪಾಡಿಕೊಂಡವರಿಗೆ ಮಾತ್ರವೇ ಆದ್ಯತೆ ನೀಡಿದ್ದಾರೆ.

ಈ ಬಾರಿ ಹಲಸು ಗಿಡಗಳು, ತಳಿ ಸಂರಕ್ಷಣೆ ಕಡೆಗೂ ಮೌನೀಶ್‌ ಮಲ್ಯ ಅವರು ಗಮನ ಹರಿಸಿದ್ದು ಸುಮಾರು  2  ಸಾವಿರ ಕಸಿ ಹಲಸು ಗಿಡಗಳನ್ನು  ತಯಾರು ಮಾಡಿಸಿ ಕೃಷಿಕರಿಗೆ ನೀಡಿ ಹಲಸು ಖರೀದಿ ಮಾಡುವ ಭರವಸೆ ನೀಡಿದ್ದಾರೆ. ಹಲಸು ಪ್ರತೀ ಮನೆಯಲ್ಲೂ ಉಪಯೋಗದ ವಸ್ತುವಾಗಬೇಕು ಎಂಬುದು ನಮ್ಮ ಉದ್ದೇಶ ಎನ್ನುವ ಮೌನೀಶ್‌ ಮಲ್ಯರು, ಹಲಸಿನ ಹಣ್ಣನ್ನು  ಖರೀದಿ ಮಾಡುವವರು  ಅನೇಕರು ಇದ್ದಾರೆ, ಆದರೆ ಹಲಸು ಬೆಳೆಯುವ ಹಾಗೂ ಮಾರಾಟ ಮಾಡುವ ಕೃಷಿಕರ ಸಂಖ್ಯೆ ಹೆಚ್ಚಾಗಬೇಕಿದೆ ಎನ್ನುತ್ತಾರೆ. ದೊಡ್ಡ ದೊಡ್ಡ ಕಾರಲ್ಲಿ  ಬರುವ ಮಂದಿ ಹಲಸನ್ನು  ಹೊತ್ತೊಯ್ಯಲು ಅಂಜುವುದಿಲ್ಲ, ಆದರೆ ತೋಟದಿಂದ ಕೃಷಿಕರು ಹಲಸು ಮನೆಗೆ ತರಲು ಅಂಜಿಕೆ ಮಾಡುವುದನ್ನು ಈಗ ಕಾಣುತ್ತಿದ್ದೇವೆ, ಇದು ಬದಲಾಗಬೇಕು, ಹಲಸು ಕೂಡಾ ಆದಾಯ ತರುವ ಕೃಷಿಯಾಗಲಿದೆ ಎನ್ನುತ್ತಾರೆ ಮೌನೀಶ್‌ ಮಲ್ಯರು.

ಮೌನೀಶ್‌ ಮಲ್ಯ
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಹವಾಮಾನ ವರದಿ | 30-04-2025 | ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ |
April 30, 2025
1:54 PM
by: ಸಾಯಿಶೇಖರ್ ಕರಿಕಳ
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ
April 30, 2025
10:29 AM
by: The Rural Mirror ಸುದ್ದಿಜಾಲ
ಗುಡುಗು ಸಿಡಿಲಿನ ಮುನ್ಸೂಚನೆ ಬಗ್ಗೆ ಆಪ್‌ನಲ್ಲಿ ಮಾಹಿತಿ
April 30, 2025
10:18 AM
by: The Rural Mirror ಸುದ್ದಿಜಾಲ
ಸತತ ಸೋಲಿನ ಬಳಿಕ ಪುಟಿದೇಳುವರು ಈ ರಾಶಿಯವರು…!
April 30, 2025
10:02 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group