ಹಲಸಿನ ಹಣ್ಣಿನ ಹಲ್ವಕ್ಕೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣು 1 ಕಪ್. ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ, ಕಾಯಿತುರಿ 1/2 ಕಪ್, ಸಕ್ಕರೆ 3/4 ಕಪ್, ಏಲಕ್ಕಿ ಪುಡಿ ಸ್ವಲ್ಪ, ಗೋಡಂಬಿ ಬಾದಾಮಿ 2 ಚಮಚ ಚಿಕ್ಕ ದಾಗಿ ಕಟ್ ಮಾಡಿ, ತುಪ್ಪ 3 ಚಮಚ.
ಮಾಡುವ ವಿಧಾನ : ಒಂದು ಬಾಣಲೆಗೆ ಕಾಯಿತುರಿ ಹಾಕಿ ಸ್ವಲ್ಪ ಫ್ರೈ ಮಾಡಿ. ಒಂದು ತಟ್ಟೆಗೆ ಹಾಕಿ. ನಂತರ ಅದೇ ಬಾಣಲೆಗೆ ಸಕ್ಕರೆ, ಏಲಕ್ಕಿ ಪುಡಿ, 1/4 ಲೋಟ ನೀರು ಹಾಕಿ ಮಿಕ್ಸ್ ಮಾಡಿ. ಸಕ್ಕರೆ ಕರಗಿದ ನಂತರ ರುಬ್ಬಿದ ಹಲಸಿನ ಹಣ್ಣನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಬಣ್ಣ ಬದಲಾದಾಗ ಫ್ರೈ ಮಾಡಿದ ಕಾಯಿತುರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದಕ್ಕೆ ತುಪ್ಪ , ಕಟ್ ಮಾಡಿದ ಗೋಡಂಬಿ ಬಾದಾಮಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪಾಕ ತಳ ಬಿಡುತ್ತಾ ಬಂದಾಗ ಸ್ಟವ್ ಆಫ್ ಮಾಡಿ. ತುಪ್ಪ ಸವರಿದ ತಟ್ಟೆಗೆ ಅಥವಾ ಒಂದು ಕಪ್ ಗೆ ಹಾಕಿ ಬಿಸಿ ಆರಿದ ನಂತರ ಕಟ್ ಮಾಡಿ ಸವಿಯಿರಿ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

