ಐಸ್ ಕ್ರೀಮ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರಿಗೂ ಬೇಕು. ಹಲಸಿನ ಹಣ್ಣಿನ ಐಸ್ ಕ್ರೀಂ ಸವಿದಿದ್ದೇವೆ. ಆದರೆ ಇದು ಹಲಸಿನ ಕಾಯಿ ಐಸ್ ಕ್ರೀಮ್. ಹೇಗೆ ಮಾಡೋದು ನೋಡೋಣ ಬನ್ನಿ…
ಹಲಸಿನ ಕಾಯಿ 1 ಕಪ್ ಸ್ವಲ್ಪ ಹಾಲು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ, ಸಕ್ಕರೆ 8 ಚಮಚ, ಕಸ್ಟರ್ಡ್ ಪೌಡರ್ 4 ಚಮಚ, ಹಾಲು 2 ಕಪ್, ಏಲಕ್ಕಿ ಪುಡಿ ಸ್ವಲ್ಪ
ಮಾಡುವ ವಿಧಾನ: ಕಸ್ಟರ್ಡ್ ಪೌಡರ್ ಗೆ 4 ಚಮಚ ಹಾಲು ಸೇರಿಸಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಹಾಲು ಬಿಸಿ ಆಗಲು ಬಿಡಿ , ಇದಕ್ಕೆ ಸಕ್ಕರೆ ಸೇರಿಸಿ ಬಿಸಿ ಆದ ನಂತರ ಕಸ್ಟರ್ಡ್ ಪೌಡರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಈಗ ಹಾಲು ದಪ್ಪ ಆಗುತ್ತೆ ನಂತರ ಇದಕ್ಕೆ ರುಬ್ಬಿದ ಹಲಸಿನ ಕಾಯಿ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಟವ್ ಆಫ್ ಮಾಡಿ . ಬಿಸಿ ಆರಿದ ನಂತರ ಒಂದು ಡಬ್ಬದಲ್ಲಿ ಹಾಕಿ ಫ್ರೀಜರ್ ನಲ್ಲಿ ಇಟ್ಟುಕೊಳ್ಳಿ ಮಾರನೇ ದಿನ ಮತ್ತೆ ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿ ಮತ್ತೆ ಗಟ್ಟಿ ಆಗಲು ಬಿಡಿ ನಿಮಗೆ ಬೇಕಾದಾಗ ತಣ್ಣಗೆ ಸವಿಯಿರಿ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel