ಹಲಸಿನ ಹಣ್ಣಿನ ಮಲ್ಪುರಿಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣಿನ ಪಲ್ಪ್ 1/2 ಕಪ್, ಮೈದಾ ಹುಡಿ 3/4 ಕಪ್,ಮೊಸರು 2 ಚಮಚ, ಏಲಕ್ಕಿ ಪುಡಿ ಸ್ವಲ್ಪ, ಸಕ್ಕರೆ 1ಚಮಚ, ಅಕ್ಕಿ ಹುಡಿ 1 ಚಮಚ, ಚಿಟಿಕೆ ಉಪ್ಪು, ಸಕ್ಕರೆ ಪಾಕ ಮಾಡಲು: 8 ಚಮಚ ಸಕ್ಕರೆ, 1/4 ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ ಇದಕ್ಕೆ 4 ಕೇಸರಿ ದಳ ಹಾಕಿ. ಸ್ಟವ್ ಆಫ್ ಮಾಡಿ.
ಮಾಡುವ ವಿಧಾನ :ಜಾರ್ ಗೆ ಹಲಸಿನ ಹಣ್ಣು ಸಕ್ಕರೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.ಒಂದು ಪಾತ್ರೆಗೆ ಹಲಸಿನ ಹಣ್ಣಿನ ಪಲ್ಪ್, ಮೊಸರು, ಏಲಕ್ಕಿ ಪುಡಿ, ಅಕ್ಕಿ ಹುಡಿ , ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮೈದಾ ಹುಡಿ, ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ . ( ಹಿಟ್ಟು ಹದವಾಗಿ ಇರಲಿ). 45 ನಿಮಿಷ ಮುಚ್ಚಳ ಮುಚ್ಚಿ ಇಡಿ . ನಂತರ ತವಾ ಬಿಸಿ ಆದಾಗ ಅದಕ್ಕೆ ಎಣ್ಣೆ 1/4 ಕಪ್ ಹಾಕಿ. ಸಿಮ್ ನಲ್ಲಿ ಇಟ್ಟು ಮದ್ಯ ಭಾಗಕ್ಕೆ ಹಿಟ್ಟು ಹಾಕಿ . ಹಿಟ್ಟಿನ ಮೇಲೆ ಬಿಸಿ ಎಣ್ಣೆ ಸ್ವಲ್ಪ ಸ್ವಲ್ಪ ಹಾಕಿ ಉಬ್ಬಿ ಕೊಂಡು ಬಂದಾಗ ಕವುಚಿ ಹಾಕಿ ಬೇಯಿಸಿ ಕೊಳ್ಳಿ. ತೆಗೆಯುವಾಗ ಮದ್ಯ ಭಾಗ ಸ್ವಲ್ಪ ಒತ್ತಿ ತೆಗೆಯಿರಿ.
ಸ್ವಲ್ಪ ಬಿಸಿ ಆರಿದ ನಂತರ. ಇದನ್ನು ಒಂದು ಒಂದಾಗಿ ಸಕ್ಕರೆ ಪಾಕಕ್ಕೆ ಅದ್ದಿ ತೆಗೆಯಿರಿ.ಇದರ ಮೇಲೆ ಕಟ್ ಮಾಡಿದ ಬಾದಾಮಿ, ಗೋಡಂಬಿ ಹಾಕಿ.
ಈವಾಗ ಬಿಸಿ ಬಿಸಿಯಾದ ಹಲಸಿನ ಹಣ್ಣಿನ ಮಲ್ಪುರಿ ರೆಡಿ