ಹಲಸಿನಕಾಯಿ ರಚ್ಚೆಯ ಚಟ್ನಿಗೆ ಬೇಕಾಗುವ ಸಾಮಗ್ರಿಗಳು: ರಚ್ಚೆ 1/2 ಕಪ್( ಬೇಯಿಸಿ ಕೊಳ್ಳಿ), ಕೊತ್ತಂಬರಿ ಬೀಜ 1 ಚಮಚ, ಜೀರಿಗೆ 1/2 ಚಮಚ, ಬೆಳ್ಳುಳ್ಳಿ 4 ಎಸಳು, ಕೆಂಪು ಮೆಣಸು 3 , ಕಾಯಿತುರಿ 1/2 ಕಪ್, ಹುಣಸೆ ಹಣ್ಣು ಸ್ವಲ್ಪ.………ಮುಂದೆ ಓದಿ……..
ಮಾಡುವ ವಿಧಾನ: ಕೊತ್ತಂಬರಿ, ಜೀರಿಗೆ, ಬೆಳ್ಳುಳ್ಳಿ, ಕೆಂಪು ಮೆಣಸು, ಹುಣಸೆ ಹಣ್ಣು, ಫ್ರೈ ಮಾಡಿ ಕೊಳ್ಳಿ. ಮಿಕ್ಸಿ ಜಾರ್ ಗೆ ಕಾಯಿತುರಿ ಫ್ರೈ ಮಾಡಿದ ಸಾಮಗ್ರಿಗಳು, ರಚ್ಚೆ, ಉಪ್ಪು ರುಚಿಗೆ ತಕ್ಕಷ್ಟು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಗ್ಗರಣೆ: ಸಾಸಿವೆ, ಎಣ್ಣೆ ,ಕೆಂಪು ಮೆಣಸು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಬಿಸಿ ಬಿಸಿಯಾದ ಅನ್ನದ ಜೊತೆ, ದೋಸೆ ಜೊತೆ ಹಲಸಿನಕಾಯಿ ರಚ್ಚೆಯ ಚಟ್ನಿ ಬಲು ಸೂಪರ್.
ಬರಹ :
ದಿವ್ಯಾ ಮಹೇಶ್.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel