ಹೊಸರುಚಿ | ಹಲಸಿನ ಬೀಜ ಕ್ಯಾಬೇಜ್ ಪಕೋಡಾ

September 13, 2025
7:15 AM

ಹಲಸಿನ ಬೀಜ ಕ್ಯಾಬೇಜ್ ಪಕೋಡಾ ಕ್ಕೆ  ಬೇಕಾಗುವ ಸಾಮಗ್ರಿಗಳು :  ಹಲಸಿನ ಬೀಜ 1 ಕಪ್ ಜಜ್ಜಿ ಸಿಪ್ಪೆ ತೆಗೆದು ಕ್ಲೀನ್ ಮಾಡಿ ಬೇಯಿಸಿ ಇಟ್ಟು ಕೊಳ್ಳಿ.
ಕ್ಯಾಬೇಜ್ 1/2 ಕಪ್ ,  ಈರುಳ್ಳಿ ಚಿಕ್ಕದು 1 ತೆಳ್ಳಗೆ ಕಟ್ ಮಾಡಿ,  ಜೀರಿಗೆ 1 ಚಮಚ, ಓಂ ಕಾಳು 1/4 ಚಮಚ, ಮೆಣಸಿನ ಪುಡಿ 1 ಚಮಚ, ಅರಿಸಿನ ಪುಡಿ ಸ್ವಲ್ಪ,
ಅಕ್ಕಿ ಹುಡಿ 6 ಚಮಚ, ಕಾರ್ನ್ ಫ್ಲೋರ್ 1/4 ಕಪ್, ಕಡಲೆ ಹಿಟ್ಟು 1/4 ಕಪ್ , ಸ್ವಲ್ಪ ನೀರು ಸೇರಿಸಿ, ಕರಿಬೇವಿನ ಸೊಪ್ಪು ಚಿಕ್ಕ ದಾಗಿ ಕಟ್ ಮಾಡಿ, ಉಪ್ಪು ರುಚಿಗೆ ತಕ್ಕಷ್ಟು,  ಕರಿಯಲು ಎಣ್ಣೆ.

ಮಾಡುವ ವಿಧಾನ : ಒಂದು ಪಾತ್ರೆಗೆ ಕ್ಯಾಬೇಜ್ ಚಿಕ್ಕ ದಾಗಿ ಕಟ್ ಮಾಡಿ ತೊಳೆದು ಹಾಕಿ , ಈರುಳ್ಳಿ ಕಟ್ ಮಾಡಿ ಹಾಕಿ ಕರಿಬೇವಿನ ಸೊಪ್ಪು, ಜೀರಿಗೆ, ಓಂ ಕಾಳು, ಮೆಣಸಿನ ಪುಡಿ, ಅರಿಸಿನ ಪುಡಿ, ಅಕ್ಕಿ ಹುಡಿ, ಕಡಲೆ ಹಿಟ್ಟು, ಕಾರ್ನ್ ಫ್ಲೋರ್, ಉಪ್ಪು ರುಚಿಗೆ ತಕ್ಕಷ್ಟು, ನೀರು ಸ್ವಲ್ಪ ಬೇಯಿಸಿ ಇಟ್ಟು ಕೊಂಡ ಹಲಸಿನ ಬೀಜ ಪುಡಿ ಮಾಡಿ ಹಾಕಿ.  ಇವುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆಯಿರಿ ಈವಾಗ ಬಿಸಿ ಬಿಸಿಯಾದ ಪಕೋಡ ರೆಡಿ ನಿಮಗೆ ಇಷ್ಟವಾದ ಚಟ್ನಿ ಜೊತೆ ಸಾಸ್ ಜೊತೆ, ಅಥವಾ ಹಾಗೆ ಕೂಡಾ ತಿನ್ನಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

ಇದನ್ನೂ ಓದಿ

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?
October 3, 2026
10:46 AM
by: ದ ರೂರಲ್ ಮಿರರ್.ಕಾಂ
ಗೋಡಂಬಿ ಬೇರೆ ದೇಶಗಳಿಂದ… ಜಾಗತಿಕ ಮಾರುಕಟ್ಟೆ ವಿಯೆಟ್ನಾಂನ ಕೈಯಲ್ಲಿ..!
October 3, 2026
10:34 AM
by: ದ ರೂರಲ್ ಮಿರರ್.ಕಾಂ
ರೇಷನ್ ಕಾರ್ಡ್‌ ಇ-ಕೆವೈಸಿಗೆ ಇನ್ನು ಕ್ಯೂ ಬೇಕಿಲ್ಲ – ಮನೆಯಲ್ಲೇ ಇ-ಕೆವೈಸಿಗೆ ‘ಅನ್ನಸೇವೆ’ ಆ್ಯಪ್‌
October 3, 2026
10:00 AM
by: ದ ರೂರಲ್ ಮಿರರ್.ಕಾಂ
ಅಡಿಕೆ ವಹಿವಾಟಿನ ಹಿಂದೆ ಮತ್ತೊಂದು ದೊಡ್ಡ ತನಿಖೆ..? ₹1.3 ಕೋಟಿ ನಗದು ವಶ
October 3, 2026
9:48 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror