ಹಲಸು ಮೌಲ್ಯವರ್ಧನೆಯಾಗಿ ಅಡುಗೆ ಮನೆ ಸೇರುತ್ತಿದೆ. ಅದರ ಜೊತೆಗೇ ಹಲಸು ವಿವಿಧ ರೂಪದಲ್ಲಿ ಈಗ ಬೇಡಿಕೆಯ ಹಣ್ಣಾಗಿದೆ. ಇದೀಗ ಹಲಸಿನ ಬೀಜವೂ ವಿವಿಧ ಖಾದ್ಯವಾಗಿ ಅಡುಗೆ ಮನೆಯಲ್ಲಿ ಸದ್ದಾಗುತ್ತಿದೆ. ಹಲಸಿನ ಬೀಜದ ಖಾರಾ ಸೇವ್ ಬಗ್ಗೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾರಂಪಳ್ಳಿಯ ಗೌತಮ್ ಐತಾಳ ಅವರು ಈ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. ಬಹಳ ರುಚಿಕರವಾಗಿದೆ ಎಂದು ಹೇಳಿದ್ದಾರೆ.
ಹಲಸಿನ ಬೀಜವನ್ನು ಬೇಯಿಸಿ ಕಡಲೆ ಹಿಟ್ಟು ಮತ್ತು ಸ್ವಲ್ಪ ಅಕ್ಕಿ ಹಿಟ್ಟು ಹಾಕಿ ಕಲಸಿ ನಂತರ ಎಣ್ಣೆಯಲ್ಲಿ ಕರಿದಿದ್ದೇವೆ. ಮೊದಲ ಪ್ರಯತ್ನ ಇದಾಗಿದೆ. ಇನ್ನೂ ಸುಧಾರಿಸಬಹುದುಎಂದಿದ್ದಾರೆ.ಹಲಸಿನ ಬೀಜದ ಪೌಡರ್ ಸಿಕ್ಕಿದರೆ ಮತ್ತಷ್ಟುರುಚಿಕರವಾಗಿ ಮಾಡಬಹುದು ಎಂದು ಹೇಳಿದ್ದಾರೆ.
ಹಲಸಿನ ಬೀಜವನ್ನು ಬೇಯಿಸಿ ಗೋದಿ ಹಿಟ್ಟನ್ನು ಮಾಡಿಕೊಂಡು ಸ್ಮಾಷ್ ಮಾಡಿಕೊಳ್ಳಬೇಕು. ದೊಡ್ಡ ತುಂಡುಗಳು ಹಾಗೆ ಉಳಿದರೆ ಮಿಕ್ಸಿ ಗೆ ಅಥವಾ ಗ್ರೈಂಡರ್ ಗೆ ಹಾಕಿ ರುಬ್ಬಿ ಕೊಳ್ಳಬಹುದು. ನೀರು ನೋಡಿಕೊಂಡು ಹಾಕಬೇಕು ಎಂದು ಮಾಹಿತಿ ನೀಡಿದ್ದಾರೆ. ಕೋಡುಬಳೆ ಕೂಡಾ ಮಾಡಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ. ನೀವೂ ಈ ಬಗ್ಗೆ ಪ್ರಯತ್ನ ಮಾಡಿ. ಹೊಸ ವಿಧಾನ ಇದ್ದರೆ ಇತರರಿಗೂ ಹೇಳಿ.