ಹಲಸಿನ ಬೀಜದ ಪರೋಟ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಹಲಸಿನ ಬೀಜ 1 ಕಪ್ , ಆಲೂಗಡ್ಡೆ 1 ಸಿಪ್ಪೆ ತೆಗೆದು ಇಟ್ಟುಕೊಳ್ಳಿ. ಇವುಗಳನ್ನು ಕುಕ್ಕರ್ ಗೆ ಹಾಕಿ ಬೇಯಿಸಿ ಕೊಳ್ಳಿ. ನಂತರ ನೀರು ಸೋಸಿ ನುಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಿ . ಒಂದು ಪಾತ್ರೆಗೆ ಈರುಳ್ಳಿ 1 ಚಿಕ್ಕ ದಾಗಿ ಕಟ್ ಮಾಡಿ ಹಾಕಿ, ಹಸಿಮೆಣಸಿನ ಕಾಯಿ,1 ಚಿಕ್ಕ ದಾಗಿ ಕಟ್ ಮಾಡಿ ಹಾಕಿ, ಕೊತ್ತಂಬರಿ ಸೊಪ್ಪು, ಜೀರಿಗೆ 1/4 ಚಮಚ, ಜೀರಿಗೆ ಪುಡಿ 1/4 ಚಮಚ, ಕೊತ್ತಂಬರಿ ಪುಡಿ 1/2 ಚಮಚ, ಚಾಟ್ ಮಸಾಲ 1/2 ಚಮಚ, ಗರಂ ಮಸಾಲ 1/4 ಚಮಚ, ಉಪ್ಪು ರುಚಿಗೆ ತಕ್ಕಷ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ . ನಂತರ ಉಡುಗೆಗಳನ್ನು ಮಾಡಿ ಇಟ್ಟುಕೊಳ್ಳಿ.
ಹಿಟ್ಟು ಕಲೆಸಿ ಕೊಳ್ಳಲು: ಗೋಧಿ ಹಿಟ್ಟು, ಉಪ್ಪು ರುಚಿಗೆ ತಕ್ಕಷ್ಟು, ನೀರು ಸೇರಿಸಿ ಹಿಟ್ಟನ್ನು ಮೃದುವಾಗಿ ಕಲೆಸಿ. ನಂತರ ಉಡುಗೆಗಳನ್ನು ಮಾಡಿ ಇಟ್ಟುಕೊಳ್ಳಿ. ನಂತರ ಸ್ವಲ್ಪ ಲಟ್ಟಿಸಿ, ಉಂಡೆ ಇಟ್ಟು ಕವರ್ ಮಾಡಿ ನಂತರ ಲಟ್ಟಿಸಿ. ಕಾದ ತವಾ ದಲ್ಲಿ ಎರಡು ಬದಿ ತುಪ್ಪ ಹಾಕಿ ಬೇಯಿಸಿಕೊಳ್ಳಿ.
ನಿಮಗೆ ಇಷ್ಟವಾದ ಚಟ್ನಿ ಜೊತೆ ಸವಿಯಿರಿ.
12.01.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಬರ ಪ್ರದೇಶ ಕೃಷಿಗೆ ಹೊಸ ದಾರಿ ತೆರೆದಿರುವ ICAR–ಒಂಟೆ ಸಂಶೋಧನಾ ಕೇಂದ್ರದ ಅಧ್ಯಯನವು,…
ರಾಜಸ್ಥಾನದ ಹನುಮಂಗಢ ಜಿಲ್ಲೆಯಲ್ಲಿ ಇಬ್ಬರು ಗ್ರಾಮೀಣ ಉದ್ಯಮಿಗಳು ಆರಂಭಿಸಿದ ಗ್ರೀನ್ ವಿಷನ್ ವರ್ಮಿಕಾಂಪೋಸ್ಟ್…
ಚೀನಾದ Chinese Academy of Tropical Agricultural Sciences (CATAS) ವಿಜ್ಞಾನಿಗಳು Electron…
ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…
ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…