ಕಳೆದ ಮೂರು – ನಾಲ್ಕು ವರ್ಷಗಳಿಂದ ಮೈದಾ ಹುಡಿಗೆ ಪರ್ಯಾಯವಾಗಿ ಬಾಳೆಕಾಯಿಯ ಹುಡಿಯನ್ನು ಅಂದರೆ ಬಾಕಾಹು ಬಳಸುವ ಬಗ್ಗೆ ಅನೇಕ ಪ್ರಯೋಗಗಳು ಕೇರಳ ಹಾಗೂ ಉತ್ತರ ಕನ್ನಡ, ದಕ್ಷಿಣ ಕನ್ನಡದ ಕೆಲವೆಡೆ ನಡೆದಿದೆ. ಅದೇ ರೀತಿ ಹಲಸಿನ ಬೀಜವನ್ನು ಹುಡಿ ಮಾಡಿ ಮೈದಕ್ಕೆ ಪರ್ಯಾಯಾವಾಗಿ ಬಳಸುವ ಪ್ರಯೋಗಳು ನಡೆಯುತ್ತಿವೆ. ಇತ್ತೀಚೆಗೆ ಹಲಸಿನ ಬೆಳೆಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲು ಹಲವು ಪ್ರಯತ್ನಗಳೂ ನಡೆಯುತ್ತಿವೆ.
ಇದೀಗ ಶಿರಸಿಯಲ್ಲಿ ಹಬೀಹು ಅಂದರೆ ಹಲಸಿನ ಬೀಜದ ಹುಡಿಯಿಂದ ಒಂದಷ್ಟು ಪ್ರಯೋಗಗಳನ್ನು ಮಹಿಳೆಯೊಬ್ಬರು ಮಾಡಿ ಯಶಸ್ವಿಯಾಗಿದ್ದಾರೆ. ಹೌದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಆಶೀಸರದ ಮಹಿಳೆಯೊಬ್ಬರು ಹಲಸಿನ ಬೇಳೆಯಿಂದ (Jackfruit Seed) ಹುಡಿ, ರವೆಯನ್ನು ತಯಾರಿಸುತ್ತಿದ್ದಾರೆ.
ಆಶೀಸರದ ಅರುಣಾ ಹೆಗಡೆ ಅವರು ಕಳೆದ 10 ವರ್ಷದಿಂದ ಹಲಸಿನ ತಿನಿಸು ಮಾಡುವಲ್ಲಿ ಸಿದ್ಧಹಸ್ತರು. ಕಳೆದ ವರ್ಷ ಅವರಿಗೆ ಈ ಉಪಾಯ ಬಂದಿತ್ತು. ಹೀಗಾಗಿ ಹಲಸಿನ ಬೇಳೆಯನ್ನು ಮೊದಲು ಬೇಯಿಸಿಕೊಂಡು ನಂತರ ಒಣಗಿಸಿ ಅದನ್ನು ನುರಿದುಕೊಂಡು ಮಿಕ್ಸಿ ಮಾಡಿಕೊಂಡರು. ಇವರು ಎಂಟು ರೌಂಡ್ ಮಿಕ್ಸಿ ಮಾಡಿದ ನಂತರ ಅದರಲ್ಲಿ ಜಿನುಗು ರವೆ, ದಪ್ಪ ರವೆ, ಕೊನೆಯ ಪ್ರಾಡಕ್ಟ್ ಆಗಿ ಹಿಟ್ಟು ದೊರೆಯಿತು. ಆ ಹಿಟ್ಟಿನಿಂದ ಶಂಕರಪೋಳಿಯಂತಹ ಖಾದ್ಯಗಳನ್ನು ಇವರು ತಯಾರಿಸಿದ್ದಾರೆ.
ಈ ಹಿಟ್ಟು ಮೈದಾದ ಹಾಗೆ ಅಲ್ಲ ಇದು ಬೇಗ ಕರಗುತ್ತದೆ. ಹೀಗಾಗಿ ಇದನ್ನು ಒಮ್ಮೆ ಹಲಸಿನ ಸೀಸನ್ ಅಲ್ಲಿ ಸಂಸ್ಕರಿಸಿ ಇಟ್ಟುಕೊಂಡರೆ, ನಮಗೆ ಬೇಕಾದ ತಿಂಡಿಗಳನ್ನು ಹಲಸಿನ ಬೇಳೆಯ ಹುಡಿ ಅಥವಾ ಹಿಟ್ಟಿನಲ್ಲಿಯೇ ಮಾಡಬಹುದು. ಅಂತೆಯೇ ಹಲಸಿನ ರವೆಯನ್ನೂ ಸಹ ಉಪ್ಪಿಟಿಗೆ, ಶೀರಾಕ್ಕೆ ಬಳಸಬಹುದಾಗಿದೆ. ಹೋಳಿಗೆ ಮಾಡಲು ಚಿರೋಟಿ ರವಾ ಅನ್ನೂ ಕೂಡ ಹಲಸಿನ ಬೇಳೆ ಹುಡಿಯಿಂದಲೇ ಮಾಡಿಕೊಳ್ಳಬಹುದು. ದೊಡ್ಡ ಪ್ರಮಾಣದಲ್ಲಿ ಇದಕ್ಕೊಂದು ಮಾರ್ಕೆಟ್ ಸಿಕ್ಕರೆ ಒಳ್ಳೆಯ ಗೃಹೋದ್ಯಮವಾಗಬಹುದು. ಅರುಣಾ ಹೆಗಡೆಯವರು ಪ್ರಯೋಗವಾಗಿ ಇದನ್ನು ಮಾಡಿದ್ದಾರೆ, ಹಲಸು ಬೆಳೆಗಾರರು ಇದನ್ನು ಪ್ರಾಯೋಗಿಕವಾಗಿ ಒಮ್ಮೆ ಮಾಡಬಹುದಾಗಿದೆ.
The trend of using jackfruit seed flour as a substitute for all-purpose flour like maida is gaining popularity after ba ka hu. However, important considerations need to be taken into account before making this substitution.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…