Advertisement
Opinion

ಮೈದಾಕ್ಕೆ ಪರ್ಯಾಯ ಹಿಟ್ಟು ಯಾವುದಿದೆ…? | ಬಾ ಕಾ ಹು ನಂತರ ಹ ಬೀ ಹು ಪ್ರಯೋಗ |

Share

ಕಳೆದ ಮೂರು – ನಾಲ್ಕು ವರ್ಷಗಳಿಂದ ಮೈದಾ ಹುಡಿಗೆ ಪರ್ಯಾಯವಾಗಿ ಬಾಳೆಕಾಯಿಯ ಹುಡಿಯನ್ನು ಅಂದರೆ ಬಾಕಾಹು ಬಳಸುವ ಬಗ್ಗೆ ಅನೇಕ ಪ್ರಯೋಗಗಳು ಕೇರಳ ಹಾಗೂ ಉತ್ತರ ಕನ್ನಡ, ದಕ್ಷಿಣ ಕನ್ನಡದ ಕೆಲವೆಡೆ ನಡೆದಿದೆ.  ಅದೇ ರೀತಿ ಹಲಸಿನ ಬೀಜವನ್ನು ಹುಡಿ ಮಾಡಿ ಮೈದಕ್ಕೆ ಪರ್ಯಾಯಾವಾಗಿ ಬಳಸುವ ಪ್ರಯೋಗಳು ನಡೆಯುತ್ತಿವೆ. ಇತ್ತೀಚೆಗೆ ಹಲಸಿನ ಬೆಳೆಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲು ಹಲವು ಪ್ರಯತ್ನಗಳೂ ನಡೆಯುತ್ತಿವೆ. 

ಇದೀಗ ಶಿರಸಿಯಲ್ಲಿ ಹಬೀಹು ಅಂದರೆ ಹಲಸಿನ ಬೀಜದ ಹುಡಿಯಿಂದ ಒಂದಷ್ಟು ಪ್ರಯೋಗಗಳನ್ನು ಮಹಿಳೆಯೊಬ್ಬರು ಮಾಡಿ ಯಶಸ್ವಿಯಾಗಿದ್ದಾರೆ.  ಹೌದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಆಶೀಸರದ ಮಹಿಳೆಯೊಬ್ಬರು ಹಲಸಿನ ಬೇಳೆಯಿಂದ (Jackfruit Seed) ಹುಡಿ, ರವೆಯನ್ನು ತಯಾರಿಸುತ್ತಿದ್ದಾರೆ.

ಆಶೀಸರದ ಅರುಣಾ ಹೆಗಡೆ ಅವರು ಕಳೆದ 10 ವರ್ಷದಿಂದ ಹಲಸಿನ ತಿನಿಸು ಮಾಡುವಲ್ಲಿ ಸಿದ್ಧಹಸ್ತರು. ಕಳೆದ ವರ್ಷ ಅವರಿಗೆ ಈ ಉಪಾಯ ಬಂದಿತ್ತು. ಹೀಗಾಗಿ ಹಲಸಿನ ಬೇಳೆಯನ್ನು ಮೊದಲು ಬೇಯಿಸಿಕೊಂಡು ನಂತರ ಒಣಗಿಸಿ ಅದನ್ನು ನುರಿದುಕೊಂಡು ಮಿಕ್ಸಿ ಮಾಡಿಕೊಂಡರು. ಇವರು ಎಂಟು ರೌಂಡ್ ಮಿಕ್ಸಿ ಮಾಡಿದ ನಂತರ ಅದರಲ್ಲಿ ಜಿನುಗು ರವೆ, ದಪ್ಪ ರವೆ, ಕೊನೆಯ ಪ್ರಾಡಕ್ಟ್ ಆಗಿ ಹಿಟ್ಟು ದೊರೆಯಿತು. ಆ ಹಿಟ್ಟಿನಿಂದ ಶಂಕರಪೋಳಿಯಂತಹ ಖಾದ್ಯಗಳನ್ನು ಇವರು ತಯಾರಿಸಿದ್ದಾರೆ.

ಈ ಹಿಟ್ಟು ಮೈದಾದ ಹಾಗೆ ಅಲ್ಲ ಇದು ಬೇಗ ಕರಗುತ್ತದೆ. ಹೀಗಾಗಿ ಇದನ್ನು ಒಮ್ಮೆ ಹಲಸಿನ ಸೀಸನ್ ಅಲ್ಲಿ ಸಂಸ್ಕರಿಸಿ ಇಟ್ಟುಕೊಂಡರೆ, ನಮಗೆ ಬೇಕಾದ ತಿಂಡಿಗಳನ್ನು ಹಲಸಿನ ಬೇಳೆಯ ಹುಡಿ ಅಥವಾ ಹಿಟ್ಟಿನಲ್ಲಿಯೇ ಮಾಡಬಹುದು.‌ ಅಂತೆಯೇ ಹಲಸಿನ ರವೆಯನ್ನೂ ಸಹ ಉಪ್ಪಿಟಿಗೆ, ಶೀರಾಕ್ಕೆ ಬಳಸಬಹುದಾಗಿದೆ. ಹೋಳಿಗೆ ಮಾಡಲು ಚಿರೋಟಿ ರವಾ ಅನ್ನೂ ಕೂಡ ಹಲಸಿನ ಬೇಳೆ ಹುಡಿಯಿಂದಲೇ ಮಾಡಿಕೊಳ್ಳಬಹುದು. ದೊಡ್ಡ ಪ್ರಮಾಣದಲ್ಲಿ ಇದಕ್ಕೊಂದು ಮಾರ್ಕೆಟ್ ಸಿಕ್ಕರೆ ಒಳ್ಳೆಯ ಗೃಹೋದ್ಯಮವಾಗಬಹುದು. ಅರುಣಾ ಹೆಗಡೆಯವರು ಪ್ರಯೋಗವಾಗಿ ಇದನ್ನು ಮಾಡಿದ್ದಾರೆ, ಹಲಸು ಬೆಳೆಗಾರರು ಇದನ್ನು ಪ್ರಾಯೋಗಿಕವಾಗಿ ಒಮ್ಮೆ ಮಾಡಬಹುದಾಗಿದೆ.

  • ಅಂತರ್ಜಾಲ ಮಾಹಿತಿ

The trend of using jackfruit seed flour as a substitute for all-purpose flour like maida is gaining popularity after ba ka hu. However, important considerations need to be taken into account before making this substitution.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 23-09-2026 | ಸೆ.30 ರಿಂದ ಮತ್ತೆ ಬದಲಾಗಲಿದೆ ಹವಾಮಾನ..!

ಕರ್ನಾಟಕದಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.26 ರವರೆಗೆ ಅಲ್ಲಲ್ಲಿ ತುಂತುರು…

7 hours ago

ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ..! ಎಲ್ಲೆಲ್ಲಾ ರೆಡ್‌ ಎಲರ್ಟ್..?‌ ಯಾವಾಗ..?

ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಮಳೆ ಚುರುಕಾಗಲಿದ್ದು,…

12 hours ago

₹1.65 ಲಕ್ಷದ ಐಫೋನ್‌ಗಾಗಿ ಬೆಳಗ್ಗೆಯಿಂದಲೇ ಸರದಿ..! ಬೆಂಗಳೂರಿನಿಂದ ಮುಂಬೈವರೆಗೆ ಕಂಡ ‘ಐಫೋನ್‌ ಕ್ರೇಜ್’

₹1.65 ಲಕ್ಷದಿಂದ ಬೆಲೆ ಆರಂಭವಾಗುವ ಐಫೋನ್‌ 18 ಪ್ರೊ ಖರೀದಿಗಾಗಿ ದೇಶದ ಹಲವು…

2 days ago

ಹವಾಮಾನ ವರದಿ | 21-09-2026 | ಕರಾವಳಿಯಲ್ಲಿ ಜೋರು ಮಳೆಯ ಸಾಧ್ಯತೆ ಕಡಿಮೆ

ಅರಬ್ಬಿ ಸಮುದ್ರದ ಕಡೆಯಿಂದ ಬೀಸುವ ಗಾಳಿಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮುನ್ಸೂಚನೆಯಲ್ಲಿದ್ದಷ್ಟು…

2 days ago

ಹವಾಮಾನ ವರದಿ | 20.09.2026 |ಕರ್ನಾಟಕದಲ್ಲಿ ಸೆ.25ರವರೆಗೆ ಮಳೆಯ ಲಕ್ಷಣ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಉ ತ್ತಮ ಮಳೆಯ…

3 days ago

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.22ರಿಂದ ಇನ್ನಷ್ಟು ಚುರುಕು, 7 ದಿನಗಳ ಎಚ್ಚರಿಕೆ

ಕರ್ನಾಟಕದಲ್ಲಿ ಮಳೆಯ ಚಟುವಟಿಕೆ ಮತ್ತೆ ಹೆಚ್ಚಾಗುವ ಸೂಚನೆ ದೊರೆತಿದ್ದು, ಮುಂದಿನ ಏಳು ದಿನಗಳ…

3 days ago