ಹಲಸಿನ ಬೀಜದ ರಸಂ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಹಲಸಿನ ಬೀಜ ಜಜ್ಜಿ ಕ್ಲೀನ್ ಮಾಡಿ, ನಂತರ ಕುಕ್ಕರ್ ಗೆ ಹಲಸಿನ ಬೀಜ, ಟೊಮೆಟೊ 1 ತೊಳೆದು ಕಟ್ ಮಾಡಿ ಹಾಕಿ, ಅರಿಸಿನ ಪುಡಿ, ಎಣ್ಣೆ ಸ್ವಲ್ಪ ಹಾಕಿ ಬೇಯಿಸಿ. ನಂತರ ಬೇಯಿಸಿದ ರಸ ಹಾಗೇ ತೆಗೆದು ಇಟ್ಟುಕೊಳ್ಳಿ.
ನಂತರ ಜಾರ್ ಗೆ ಹಾಕಿ , ಇದಕ್ಕೆ ಶುಂಠಿ ಹಾಕಿ,ನುಣ್ಣಗೆ ರುಬ್ಬಿಕೊಳ್ಳಿ. ಅದೇ ಕುಕ್ಕರ್ ಗೆ ಎಣ್ಣೆ 1 ಚಮಚ ,ಸಾಸಿವೆ 1/4 ಚಮಚ, ಜೀರಿಗೆ 1 ಚಮಚ, ಕರಿಬೇವಿನ ಸೊಪ್ಪು , ಬೆಳ್ಳುಳ್ಳಿ 8 ಎಸಳು,ಕೊತ್ತಂಬರಿ ಸೊಪ್ಪು ಸ್ವಲ್ಪ ಕೆಂಪು ಮೆಣಸು ಹಾಕಿ ಒಗ್ಗರಣೆ ಚಟಪಟಾಯಿಸಿ. ನಂತರ ರುಬ್ಬಿದ ಮಿಶ್ರಣವನ್ನು ಹಾಕಿ ಇದಕ್ಕೆ ನೀರು, ಹುಣಸೆ ರಸ, ಬೇಯಿಸಿದ ನೀರು ಸೇರಿಸಿ ಉಪ್ಪು ರುಚಿಗೆ ತಕ್ಕಷ್ಟು ಇದಕ್ಕೆ , ಮೆಣಸಿನ ಪುಡಿ, ರಸಂ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಸಿ ಸ್ಟವ್ ಆಫ್ ಮಾಡಿ. ..ಬಿಸಿ ಬಿಸಿಯಾದ ಅನ್ನದ ಜೊತೆ ಸೂಪರ್… ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.

