ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಘಾಲಯಕ್ಕೆ ಭೇಟಿ ನೀಡಿದ ಸಂದರ್ಭ ಹಲಸಿನ ಹಣ್ಣನ್ನು ಉಡುಗೊರೆಯಾಗಿ ನೀಡಲಾಯಿತು. ಬಿಜೆಪಿ ಹಿರಿಯ ನಾಯಕ ಎ ಎಲ್ ಹೆಕ್ ಅವರು ಸಚಿವರಿಗೆ ಉಡುಗೊರೆ ನೀಡಿ ಮೇಘಾಲಯ ಸರ್ಕಾರವು ‘ಮಿಷನ್ ಜಾಕ್ ಫ್ರುಟ್’ ಅಡಿಯಲ್ಲಿ ಹಲಸಿನ ಕೃಷಿ ಮತ್ತು ಸಂಸ್ಕರಣೆಯನ್ನು ಉತ್ತೇಜಿಸುವ ವಿವರಗಳನ್ನು ತಿಳಿಸಿದರು.
ಮೇಘಾಲಯಕ್ಕೆ ಭೇಟಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಖಾಸಗಿ ರೆಸಾರ್ಟ್‌ನಲ್ಲಿ ಮೇಘಾಲಯದ ರೈತರು ಬೆಳೆಸಲಾದ ಹಲಸಿನ ಹಣ್ಣನ್ನು ಕೃಷಿಕರ ಪರವಾಗಿ ಆತಿಥ್ಯದ ಸಂಕೇತವಾಗಿ ಮತ್ತು ರಾಜ್ಯದ ಶ್ರೀಮಂತ ಕೃಷಿ ಉತ್ಪನ್ನಗಳ ಸಂಕೇತವಾಗಿ ಎ.ಎಲ್. ಹೆಕ್ ಅವರು ಉಡುಗೊರೆಯಾಗಿ ನೀಡಿದರು. ಇದೇ ಸಂದರ್ಭ, ಹಲಸಿನ ಕೃಷಿ ಮತ್ತು ಸಂಸ್ಕರಣೆಯನ್ನು ಉತ್ತೇಜಿಸುವ ಮೇಘಾಲಯ ಸರ್ಕಾರ ಯೋಜನೆಯನ್ನು ತಿಳಿಸಿದರು. ಹಲಸು ಹಣ್ಣಿನ ವಾಣಿಜ್ಯ ಸಾಮರ್ಥ್ಯವನ್ನು ಬಳಸಿಕೊಳ್ಳುವ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯವನ್ನು ಸುಧಾರಿಸುವ ಗುರಿಯನ್ನು ʼಮಿಷನ್ ಜಾಕ್ ಫ್ರುಟ್’ ಹೊಂದಿದೆ ಎಂದು ಹೆಕ್ ಅವರು ಹೇಳಿದರು. ಹಣಕಾಸು ಸಚಿವರು ಈ ಕಾರ್ಯಕ್ಕಾಗಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು ಉತ್ಪನ್ನಗಳ ಗುಣಮಟ್ಟವನ್ನು ಶ್ಲಾಘಿಸಿದರು.

