ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಆಪ್ತ ಸಹಾಯಕ ಮೌಲಾನಾ ರಹೀಂ ಉಲ್ಲಾ ತಾರಿಖ್ ಭಾನುವಾರ ಕರಾಚಿಯ ಓರಂಗಿ ಟೌನ್‌ನಲ್ಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ತಿಂಗಳು ಭಾರತದ ಮೇಲೆ ಕೇಂದ್ರೀಕೃತವಾಗಿರುವ ಭಯೋತ್ಪಾದಕನ ಮೂರನೇ ಹೈ ಪ್ರೊಫೈಲ್ ಹತ್ಯೆ ಇದಾಗಿದೆ.
ಇದಕ್ಕೂ ಮೊದಲು ಪಾಕಿಸ್ತಾನದ ಖೈಬರ್ ಪ್ರಾಂತ್ಯದಲ್ಲಿ ಲಷ್ಕರ್-ಎ-ತೊಯ್ಬಾ ಕಮಾಂಡರ್ ಅಕ್ರಮ್ ಘಾಜಿಯನ್ನು ಅಪರಿಚಿತರು ಗುಂಡಿಕ್ಕಿ ಕೊಂದಿದ್ದರು. ಆತನಿಗಿಂತ ಮೊದಲು, ಖ್ವಾಜಾ ಶಾಹಿದ್ ನನ್ನು ಅಪಹರಿಸಿ ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಶಿರಚ್ಛೇದ ಮಾಡಲಾಗಿದೆ.ತಾರಿಕ್ ಹತ್ಯೆಯಲ್ಲಿ ಸ್ಥಳೀಯ ಭಯೋತ್ಪಾದಕರ ಪಾತ್ರ ಮತ್ತು ಜೆಎಂ ಕಾರ್ಯಕರ್ತರ ನಡುವಿನ ಆಂತರಿಕ ಕಲಹದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
Jaish-e-Muhammed chief’s close aide shot dead in Pakistan
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel