ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಬೆಳ್ಳಾರೆ ವಲಯ ಮಟ್ಟದ ಪ್ರತಿಭಾ ಕಾರಂಜಿ

September 17, 2022
5:42 PM

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ ಮತ್ತು ಪಯಸ್ವಿನಿ ಪ್ರೌಢ ಶಾಲೆ ಜಾಲ್ಸೂರು ಇದರ ಆಶ್ರಯದಲ್ಲಿ ಬೆಳ್ಳಾರೆ ವಲಯಮಟ್ಟದ ಪ್ರತಿಭಾ ಕಾರಂಜಿ  ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ನಡೆಯಿತು.

Advertisement
ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮಕ್ಕಳು ಭೌತಿಕವಾಗಿ, ಸಾಂಸ್ಕೃತಿಕವಾಗಿ ಬೆಳೆಯಲು ಇಂತಹ ವೇದಿಕೆಗಳು ಸಹಕಾರಿ ಆಗುತ್ತದೆ. ಸ್ಪರ್ಧೆ ಗಳಲ್ಲಿ ನಿಷ್ಪಕ್ಷಪಾತ ವಾಗಿ ನಿರ್ಣಾಯಕರು ತೀರ್ಪು ನೀಡಬೇಕು ಎಂದರು.

ಪಯಸ್ವಿನಿ ಪ್ರೌಢಶಾಲಾ ಸಂಚಾಲಕ ಜಾಕೆ ಸದಾನಂದ ಮಾತನಾಡಿ, ಅವರಲ್ಲಿ ಇರುವ ಪ್ರತಿಬೆಗಳನ್ನು ಹುಡುಕಿ ಗುರುತಿಸುವ ಕೆಲಸ ಆಗಬೇಕು ಎಂದರು.

ಅಧ್ಯಕ್ಷತೆ ಯನ್ನು ವಹಿಸಿದ್ದ ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ದೇರಣ್ಣ ಗೌಡ ಮಾತನಾಡಿ, ಮಕ್ಕಳು ಇಂತಹ ವೇದಿಕೆಯಿಂದ ತಮ್ಮ ಪ್ರತಿಭೆಗಳನ್ನು ಹೊರಸೂಸಿ, ಮಹಾನ್ ವ್ಯಕ್ತಿ ಗಳಾದ ನಿದರ್ಶನ ಗಳು ಇವೆ. ಪ್ರತಿಭಾಕಾರಂಜಿ ಗಳು ಇಂದಿನ ಯುವಪೀಳಿಗೆ ಸ್ಪೂರ್ತಿ ದಾಯಕ ಎಂದರು.

Advertisement
ಪ್ರತಿಭಾಕಾರಂಜಿ ನೋಡೆಲ್ ಅಧಿಕಾರಿ ವಸಂತ ಏನೆಕಲ್ಲು ಪ್ರಾಸ್ತಾವಿಕ ಮಾತನಾಡಿದರು.ವೇದಿಕೆಯಲ್ಲಿ ಶಿಕ್ಷಣ ಸಂಯೋಜಕರಾದ ಸಂಧ್ಯಾಕುಮಾರಿ, ನಳಿನಿ ಪುರುಷೋತ್ತಮ ಕಿರ್ಲಾಯ, ಸಿ.ಆರ್.ಪಿಗಳಾದ ಅನುರಾಧ, ಸವಿತಾಕುಮಾರಿ, ಮಮತ, ಬಿ.ಆರ್.ಪಿ ರಮ್ಯ ಇದ್ದರು.

Advertisement
ಪಯಸ್ವಿನಿ ಪ್ರೌಢ ಶಾಲಾ ಮುಖ್ಯಶಿಕ್ಷಕಿ ಕುಸುಮಾವತಿ ಯು.ಪಿ ಸ್ವಾಗತಿಸಿ, ಶಿಕ್ಷಕಿ ಜಯಲತಾ ಕೆ.ಆರ್ ವಂದಿಸಿದರು. ಶಿಕ್ಷಕರಾದ ಸವಿತ ಮತ್ತು ವೆಂಕಟಗಿರಿ ನಿರೂಪಿಸಿದರು. ಬೆಳ್ಳಾರೆ ವಲಯ ಮಟ್ಟದ ಒಟ್ಟು 12 ಶಾಲೆಗಳ 189 ಸ್ಪರ್ಧಾಳು ಭಾಗವಹಿಸಿದ್ದರು. ತಾಲೂಕಿನ ನುರಿತ ನಿರ್ಣಾಯಕರು ಭಾಗವಹಿಸಿದ್ದರು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶದ ಜಿಡಿಪಿಯಲ್ಲಿ ಗಮನಾರ್ಹ ಪ್ರಗತಿ
August 18, 2025
2:39 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 18-08-2025 | ವಾಯುಭಾರ ಕುಸಿತದ ಮಳೆಯ ಅಬ್ಬರ | ಆ.19-20 ರಿಂದ ಮಳೆ ಕಡಿಮೆ |
August 18, 2025
12:52 PM
by: ಸಾಯಿಶೇಖರ್ ಕರಿಕಳ
ನ್ಯಾನೊ ಯೂರಿಯಾ ಬಳಕೆಯಿಂದ ಶೇಕಡಾ 80 ರಷ್ಟು ಇಳುವರಿ ಸಾಧ್ಯ
August 18, 2025
7:43 AM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ 17 ಸಾವಿರ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರ ಚಿಂತನೆ
August 18, 2025
7:39 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group