ಕರ್ನಾಟಕದಲ್ಲಿ ಬೆಳೆಯುವ ನೇರಳೆಹಣ್ಣು ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದೇ ಮೊದಲ ಬಾರಿಗೆ ನೆರಳೆ ಹಣ್ಣನ್ನು ಕರ್ನಾಟಕದಿಂದ ಲಂಡನ್‌ಗೆ ರಫ್ತು ಮಾಡಲಾಗುತ್ತಿದೆ. ದೇಶದ ವಿವಿಧ ಭಾಗಗಳ ಸಾಂಪ್ರದಾಯಿಕ ಹಣ್ಣುಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಬೇಸಿಗೆ ಕಾಲದಲ್ಲಿ ಫಲ ಬಿಡುವ ನೇರಳೆ ಹಣ್ಣು ತಿನ್ನಲು ಬಲು ರುಚಿ ಜೊತೆಗೆ ಇದರಲ್ಲಿ ಹಲವಾರು ಔಷಧೀಯ ಗುಣಗಳು ಕೂಡ ಇವೆ.ಇದನ್ನು ಜಾಮೂನ್ ಎಂದೂ ಕರೆಯುತ್ತಾರೆ. ಈ ಹಣ್ಣು ಅದರ ಗಾಢ ಬಣ್ಣ ಮತ್ತು ಹುಳಿ ಸಿಹಿ ರುಚಿಯಿಂದಾಗಿ ಜನರು ಇಷ್ಟಪಡುತ್ತಾರೆ. ಹಳ್ಳಿ ಭಾಗಗಳಲ್ಲಿ ಗುಡ್ಡಗಳಲ್ಲಿ ನೇರಳೆ ಹಣ್ಣಿನ ಮರಗಳಿರುವುದು ಸಾಮಾನ್ಯ. ಇದೀಗ ಈ ಹಣ್ಣಿಗೆ ಜಾಗತಿಕ ಮಾರುಕಟ್ಟೆ ಲಭ್ಯವಾಗಿದೆ. ಕೇಂದ್ರ ವಾಣಿಜ್ಯ ಸಚಿವಾಲಯದ ಅಂಗಸಂಸ್ಥೆಯಾಗಿರುವ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕದಿಂದ ಲಂಡನ್ ಗೆ ತಾಜಾ ನೇರಳೆ ಹಣ್ಣುಗಳ ರಫ್ತಿಗೆ ಚಾಲನೆ ನೀಡಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel