ಮಲ್ಲಿಗೆ ಮುಡಿಯಲು, ದೇವರಿಗೆ, ಪರಿಮಳಕೆ ಮಾತ್ರ ಅಲ್ಲ…! | ಮಲ್ಲಿಗೆಯಲ್ಲಿ ಆರೋಗ್ಯ ಲಾಭಗಳು ಇವೆ…

October 28, 2023
1:17 PM

ಮಲ್ಲಿಗೆ(jasmine)ಯನ್ನು ನೆನೆದರೇನೇ ಮನಸ್ಸು ಉಲ್ಲಾಸಕೊಳ್ಳುತ್ತದೆ. ಅದರ ಪರಿಮಳ ಅಷ್ಟೊಂದು ಅಲ್ಹಾದಕರ. ಮಲ್ಲಿಗೆ ಹೂವನ್ನು ಇಷ್ಟಪಡದ ಮಹಿಳೆಯರಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಮಲ್ಲಿಗೆ ಹೂಗಳು ತಲೆಗೆ ಮುಡಿಯುವುದಕ್ಕೆ, ಅಲಂಕಾರಕ್ಕೆ ಮತ್ತು ಪೂಜೆಗೆ ನಿಯಮಿತ ಬಳಕೆಯಾಗುವುದು ಎಲ್ಲರಿಗೂ ಗೊತ್ತು. ಆದರೆ, ಇದರಿಂದ ಸಾಕಷ್ಟು ಆರೋಗ್ಯ(health) ಪ್ರಯೋಜನಗಳಿವೆ ಎಂಬುದು ಬಹಳ ಜನರಿಗೆ ಗೊತ್ತಿಲ್ಲ.

ಮಲ್ಲಿಗೆ ಹಲವಾರು ಔಷಧೀಯ(medicinal) ಗುಣಗಳನ್ನು ಹೊಂದಿದೆ. ಮಲ್ಲಿಗೆ ಹೂವಿನ ಲಾಭಗಳು ತಿಳಿದರೆ ನಿಮಗೆ ಖಂಡಿತ ಆಶ್ಚರ್ಯವಾಗುತ್ತದೆ. ಮಲ್ಲಿಗೆ ಹೂವನ್ನು ಚಹಾ, ಜ್ಯೂಸ್, ಕ್ಯಾಂಡಿಗಳು ಮತ್ತು ವಿವಿಧ ಆಹಾರಗಳೊಂದಿಗೆ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇಂದು ಮಲ್ಲಿಗೆಯ ಆರೋಗ್ಯ ಲಾಭಗಳನ್ನು ಅರಿತುಕೊಳ್ಳೋಣ.

ಮನಸ್ಸನ್ನು ಹಗುರಗೊಳಿಸಲು:- ಮಲ್ಲಿಗೆಯ ಪರಿಮಳದಿಂದ ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ ಹಾಗೂ ತಲೆನೋವು ಶಮನಗೊಳ್ಳುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:ಮಲ್ಲಿಗೆಯು ಗ್ಯಾಸ್, ಹೊಟ್ಟೆ ನೋವು, ಅತಿಸಾರ ಮತ್ತು ಮಲಬದ್ಧತೆ ಹಾಗೂ ಇನ್ನಿತರ ಸಮಸ್ಯೆಯಿಂದ ಪರಿಹಾರ ಒದಗಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಾಂಗದಲ್ಲಿ ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ದೇಹದಿಂದ ವಿಷಕಾರಿ ಅಂಶವನ್ನು ತೆಗೆದುಹಾಕುತ್ತದೆ. ಆದ್ದರಿಂದ ಅನೇಕ ಜನರು ಊಟದ ನಂತರ ಮಲ್ಲಿಗೆ ಚಹಾವನ್ನು ಸೇವಿಸುತ್ತಾರೆ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು:- ಮಲ್ಲಿಗೆ ಆಧಾರಿತ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸಬಹುದು. ಇದು ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಲು ಕೂಡಾ ಸಹಾಯ ಮಾಡುತ್ತದೆ. ಹೃದಯದ ಸಮಸ್ಯೆ ಇರುವವರು ತಮ್ಮ ದೈನಂದಿನ ಆಹಾರದಲ್ಲಿ ಮಲ್ಲಿಗೆ ಆಧಾರಿತ ಪದಾರ್ಥಗಳನ್ನು ಸೇರಿಸುವುದು ಸೂಕ್ತ.

ತೂಕ ಇಳಿಕೆ:- ಮಲ್ಲಿಗೆಯಲ್ಲಿನ ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ ಮತ್ತು ಗ್ಯಾಲಿಕ್ ಆಮ್ಲದ ಉಪಸ್ಥಿತಿಯು ಚಯಾಪಚಯವನ್ನು ವೇಗಗೊಳಿಸುತ್ತದೆ ಮತ್ತು ತೂಕ ಹೆಚ್ಚಾಗುವುದನ್ನು ತಡೆಯುತ್ತದೆ. ಆದ್ದರಿಂದಲೇ ಮಲ್ಲಿಗೆ ಮಿಶ್ರಿತ ಆಹಾರ ಸೇವಿಸಿದಾಗ ದೇಹದಲ್ಲಿ ಅಧಿಕ ಕೊಬ್ಬನ್ನು ಕರಗಿಸುತ್ತದೆ.

ನಿದ್ರಾಹೀನತೆಗೆ ಚಿಕಿತ್ಸೆ:ಜಾಸ್ಮಿನ್ ಎಸೆನ್ಷಿಯಲ್‌ ಆಯಿಲ್‌ ನಿದ್ರಾಹೀನತೆ, ಆತಂಕ, ಒತ್ತಡ, ಖಿನ್ನತೆಯ ಸಂದರ್ಭಗಳಲ್ಲಿ ಮನಸ್ಸಿಗೆ ಶಾಂತಿ ಮತ್ತು ಆಹ್ಲಾದಕರ ವಾತಾವರಣ ನೀಡುತ್ತದೆ. ಅಧ್ಯಯನದ ಪ್ರಕಾರ, ಜಾಸ್ಮಿನ್ ಎಣ್ಣೆಯು ಮನಸ್ಥಿತಿ ಮತ್ತು ಮೆದುಳಿನ ಚಟುವಟಿಕೆಯನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲ, ಇದು ಮೆದುಳಿನ ಮೇಲೆ ಶಾಂತಗೊಳಿಸುವ ಪರಿಣಾಮವನ್ನು ಬೀರುತ್ತದೆ. ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ.

ಚರ್ಮದ ಆರೋಗ್ಯಕ್ಕೆ:- ಮಲ್ಲಿಗೆಯ ಸಾರದಲ್ಲಿರುವ ಕೀಟೋನ್ ಗಳು ಚರ್ಮದ ತೇವಾಂಶವನ್ನು ರಕ್ಷಿಸಿ ಮೃದು ಮತ್ತು ಕಾಂತಿಯುತಗೊಳಿಸುತ್ತವೆ. ಮಲ್ಲಿಗೆಯ ಪೇಸ್ಟನ್ನು ಹಚ್ಚುವುದರಿಂದ ಚರ್ಮವನ್ನು ಟೋನ್ ಮಾಡಿ ಅದರ ಸ್ಥಿತಿ ಸ್ಥಾಪಕತ್ವವನ್ನು ಹೆಚ್ಚಿಸುತ್ತದೆ.

ಗಾಯಗಳ ಆರೈಕೆಗೆ:ಮಲ್ಲಿಗೆಯಲ್ಲಿರುವ ನೈಸರ್ಗಿಕ ನಂಜುಂಡಿರುವುದಕಗಳು ಗಾಯಗಳನ್ನು ಬೇಗ ಗುಣಪಡಿಸುತ್ತವೆ. ಮಲ್ಲಿಗೆ ತಾಜಾ ಎಣ್ಣೆಯನ್ನು ಹಚ್ಚುವುದರಿಂದ ಗಾಯಗಳು ಹಾಗೂ ಕಡಿತಕ್ಕೆ ಶೀಘ್ರ ಪರಿಹಾರ ದೊರೆಯುತ್ತದೆ.

ಕೂದಲಿನ ಆರೋಗ್ಯಕ್ಕೆ:- ಮಲ್ಲಿಗೆ ಹೂವುಗಳನ್ನು ನೀರಿನಲ್ಲಿ ಕುದಿಸಿ ತಣ್ಣಗಾದ ನಂತರ ಕೂದಲನ್ನು ಶಾಂಪೂ ಬಳಿಕ ತೊಳೆಯುವುದರಿಂದ ಆಳವಾಗಿ ಕಂಡಿಷನಿಂಗ್ ಮಾಡುತ್ತದೆ. ಮಲ್ಲಿಗೆಯ ಸಾರಭೂತ ಎಣ್ಣೆಯನ್ನು ಒಂದಿಗೆ ಬೆರೆಸಿ ಹಚ್ಚುವುದರಿಂದ ಕೂದಲಿನ ಆರೋಗ್ಯ ಸುಧಾರಿಸುತ್ತದೆ.

ಸ್ನಾಯುಗಳ ನೋವಿಗೆ:– ಮಲ್ಲಿಗೆ ಹೂವು ಉತ್ತಮ ಸೆಳೆತ ನಿವಾರಕವಾಗಿದ್ದು ಇದರ ತೈಲವನ್ನು ಉಳುಕು ಹಾಗೂ ನೋವಿನ ಜಾಗದಲ್ಲಿ ಹಚ್ಚುವುದರಿಂದ ಸ್ನಾಯುಗಳು ಸಡಿಲವಾಗಿ ನೋವು ನಿವಾರಣೆಯಾಗುತ್ತದೆ.

ಕ್ಯಾನ್ಸರ್ ನಿರೋಧಕ:- ಮಲ್ಲಿಗೆಯಲ್ಲಿರುವ ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ (ಇಜಿಸಿಜಿ) ನಂತಹ ಪಾಲಿಫಿನಾಲ್ಗಳು ಉತ್ತಮ ಉತ್ಕರ್ಷಣ ನಿರೋಧಕಗಳಾಗಿದ್ದು ಸ್ವತಂತ್ರರಾಡಿಕಲ್ಸ್ ಗಳನ್ನು ತೊಡೆದು ಕ್ಯಾನ್ಸರನ್ನು ತಡೆಗಟ್ಟುತ್ತವೆ.

ಮಧುಮೇಹದಲ್ಲಿ ಉಪಯುಕ್ತ:ಮಲ್ಲಿಗೆಯಲ್ಲಿನ ಘಟಕಗಳು ಚಯಾಪಚಯವನ್ನು ಸುಧಾರಿಸುತ್ತವೆ ಇದರಿಂದ ಸಕ್ಕರೆಯ ನಿರ್ವಹಣೆ ಉತ್ತಮಗೊಂಡು ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಉಳಿಯುತ್ತದೆ.

ರೋಗ ಪ್ರತಿಕಾರ ಶಕ್ತಿ ವೃದ್ಧಿಸುತ್ತದೆ:ನಿಯಮಿತವಾಗಿ ಮಲ್ಲಿಗೆಯ ಚಹವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ (ಇಮ್ಯೂನಿಟಿ) ಸುಧಾರಿಸುತ್ತದೆ ಹಾಗೂ ಸೋಂಕು ರೋಗಗಳಿಂದ ರಕ್ಷಣೆ ದೊರೆಯುತ್ತದೆ.

ಜೀರ್ಣಾಂಗ ವ್ಯವಸ್ಥೆಗೆ ಲಾಭಕಾರಿ: ಮಲ್ಲಿಗೆಯ ಚಹಾ ಜೀರ್ಣಾಂಗ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸುತ್ತದೆ ಇದರಲ್ಲಿರುವ ಘಟಕಗಳು ತಿನ್ನುವಗಳು ಹಾಗೂ ಜೀರ್ಣರಸಗಳನ್ನು ಉತ್ತಮವಾಗಿ ನಿರ್ವಹಿಸುತ್ತದೆ. ಅಲ್ಲದೆ ಈ ಜಟರ ಹಾಗೂ ಕರುಳಿನ ಕ್ಯಾನ್ಸರ್ ಅನ್ನು ತಡೆಗಟ್ಟಲು ಸಹಾಯಕವಾಗಿದೆ. ಅಲಂಕಾರಿಕ ಪಶ್ಚಿಮಾತ್ಯ ಸಸ್ಯಗಳ ವ್ಯಾಮೋಹವನ್ನು ತೊರೆದು ಭಾರತೀಯರು ಮಲ್ಲಿಗೆ, ತುಳಸಿ, ಅಮೃತಬಳ್ಳಿ, ಇತ್ಯಾದಿ ಬಹು ಗುಣಕಾರಿ ಗಿಡಗಳನ್ನು ತಮ್ಮ ಅಂಗಳದಲ್ಲಿ ಮನೆಯಲ್ಲಿ ಬೆಳೆಸಬೇಕು. ಭಾರತೀಯ ಮೂಲದ ಗಿಡಗಳು ನಿಮ್ಮ ಮನೆಯಲ್ಲಿ ಔಷಧಾಲಯವಿದ್ದಂತೆ.

ಬರಹ :
ಡಾ. ಕುಲಕರ್ಣಿ ಪಿ. ಎ., ಹೋಮಿಯೋಪತಿ ತಜ್ಞರು

Jasmine has many medicinal properties. You will surely be surprised to know the benefits of jasmine flower. Consuming jasmine flower with tea, juice, candies and various foods can provide many health benefits.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೇರಳದಲ್ಲಿ ಹೀಟ್‌ ವೇವ್‌ ಎಲರ್ಟ್‌ | 10 ಜಿಲ್ಲೆಗಳಿಗೆ ಎಲ್ಲೋ ಎಲರ್ಟ್‌ |
March 14, 2025
11:36 PM
by: ದ ರೂರಲ್ ಮಿರರ್.ಕಾಂ
ಮೆಣಸಿನಕಾಯಿ ಬೆಲೆ ಕುಸಿತ | ಒಣ ಮೆಣಸಿನಕಾಯಿ ಖರೀದಿಸುವಂತೆ ಬಸವರಾಜ ಬೊಮ್ಮಾಯಿ ಪತ್ರ
March 14, 2025
11:03 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡಲು ಸರ್ಕಾರ ಚಿಂತನೆ
March 14, 2025
10:57 PM
by: The Rural Mirror ಸುದ್ದಿಜಾಲ
ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ
March 14, 2025
6:57 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

NEWS UPDATE ಪಡೆಯಲು ಇಲ್ಲಿ ಬನ್ನಿ...