ಸಂಪಾಜೆ ಬಳಿಯ ಜೇಡ್ಲದ ಗೋಪಾಲಕೃಷ್ಣ ದೇವಕಿ ಪಶುಸಂಗೋಪನಾ ಕೇಂದ್ರದ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ ಮತ್ತು ಹೈಡ್ರೋಪೋನಿಕ್ಸ್ ಘಟಕ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ದೀಪಾವಳಿಯ ಸಂದರ್ಭ ವಿಶೇಷ ಗೋಪೂಜೆ ಗೋಸೂಕ್ತ ಪಠಣ, ರುದ್ರಪಾರಾಯಣ, ವೇಣುಗೋಪಾಲ ಪೂಜೆ ನಡೆಯಿತು. ಸುಮಾರು 50 ಕ್ಕೂ ಹೆಚ್ಚು ಗೋಭಕ್ತರು ಭಾಗವಹಿಸಿದ್ದರು.ಇದೇ ವೇಳೆ ಕೃಷಿಭೂಮಿ ಮಾರಾಟ ಖರೀದಿ ವಾಟ್ಸಪ್ ಗುಂಪಿನ ವತಿಯಿಂದ ಕೊಡುಗೆಯಾಗಿ ನೀಡಲಾದ ಹೈಡ್ರೋಪೋನಿಕ್ಸ್ ಘಟಕ ಉದ್ಘಾಟಿಸಲಾಯಿತು.
ಹೈಡ್ರೋಪೋನಿಕ್ಸ್ ಮೂಲಕ ಮಣ್ಣನ್ನು ಬಳಸದೆ, ನೀರಿನಲ್ಲಿ ಖನಿಜ ಪುಷ್ಟಿಕಾರಿ ದ್ರಾವಣವನ್ನು ಬಳಸಿಕೊಂಡು ಗೋವಿಗೆ ಅಗತ್ಯವಾದ ಮೇವುಗಳನ್ನು ಬೆಳೆಸುವ ವಿಧಾನವನ್ನು ಗೋಶಾಲೆಯಲ್ಲಿ ಅನುಷ್ಟಾನ ಮಾಡಲಾಗುತ್ತಿದೆ.
ಈ ಸಂದರ್ಭ ಗೋಶಾಲೆಯ ಆಡಳಿತವ ಸಮಿತಿ ಅಧ್ಯಕ್ಷ ರಾಜಾರಾಮ ಭಟ್, ಕಾರ್ಯದರ್ಶಿ ವಿಜಯಕೃಷ್ಣ ಮೊದಲಾದವರು ಇದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel