ಸಂನ್ಯಾಸ ಗ್ರಹಣದ 29ನೇ ಪರ್ವ | ಆರ್ತ ಕುಟುಂಬಕ್ಕೆ ಜೀವನದಾನ | ಜೀವಜಗತ್ತಿಗೆ ಒಳಿತು ಮಾಡುವುದೇ ನಿಜವಾದ ಪೂಜೆ : ರಾಘವೇಶ್ವರ ಶ್ರೀ |

April 5, 2022
11:10 PM

ಜನ್ಮದಿನವನ್ನು ಬಗೆ ಬಗೆಯಾಗಿ ಆಚರಿಸುತ್ತಾರೆ. ಆದರೆ ಜನ್ಮದಿನದಂದು ಮಾತ್ರವಲ್ಲದೇ ಜೀವನವಿಡೀ ನಮ್ಮಿಂದಾದ ಒಳಿತು ಮಾಡುವುದೇ ನಿಜವಾಗಿ ಪರಮೇಶ್ವರನ ಪೂಜೆ ಎಂದು ರಾಮಚಂದ್ರಾಪುರ ಮಠಧ  ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

Advertisement

ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ 29ನೇ ಸಂನ್ಯಾಸ ಗ್ರಹಣ ದಿನದ ಪುಣ್ಯ ಪರ್ವದಂದು ಪ್ರತಿ ವರ್ಷದಂತೆ ಆರ್ತರೊಬ್ಬರ ಕುಟುಂಬಕ್ಕೆ ಅಭಯ ನೀಡಿ, ಅವರ ಜನರ ಜೀವನಕ್ಕೆ ನೆರವಾಗುವ ಜೀವಕಾರುಣ್ಯದ ಯೋಜನೆ ಜೀವನದಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಶುಭಕೃತ್ ಸಂವತ್ಸರದ ಜೀವನದಾನ ಇಂದು ನಡೆಯುತ್ತಿದೆ. ಜನ್ಮದಿನವನ್ನು ವಿವಿಧ ಬಗೆಯಾಗಿ ಆಚರಿಸುತ್ತಾರೆ. ಹುಟ್ಟಿದ ದಿನವನ್ನು ಮಾತ್ರವಲ್ಲ, ಬದುಕೆಲ್ಲ ಶುಭವನ್ನು ಮಾಡುವುದು ಮುಖ್ಯ. ಸುತ್ತಮುತ್ತಲ ಜೀವಜಗತ್ತಿಗೆ ನಮ್ಮಿಂದಾದ ಒಳಿತು ಮಾಡುವುದೇ ನಿಜವಾಗಿ ಪರಮೇಶ್ವರನ ಪೂಜೆ. ಭಯಮುಕ್ತ, ದುಃಖಮುಕ್ತವಾಗಿ, ಶುಭಕೃತ್ ಶಂಕರರಾಗಿ, ತಮಗೆ, ಕುಟುಂಬಕ್ಕೆ, ಊರಿಗೆ, ಗ್ರಾಮಕ್ಕೆ ಒಳಿತು ಮಾಡುವ ಪಣ ತೊಡುವಂತೆ ಕರೆ ನೀಡಿದರು.

ರಾಮ ಶುಭವನ್ನು ನೀಡುವವನು. ರಾಮನ ಪದಸ್ಪರ್ಶದಿಂದ ಲಂಕೆಯೂ ರಾಮರಾಜ್ಯವಾಗಿದೆ. ಗಂಗೆಯಾಚೆ ರಾಮ ಹೆಜ್ಜೆ ಇಟ್ಟಾಗ ಕಲ್ಪತರು ಜನಿಸಿದರೆ, ದಕ್ಷಿಣದಲ್ಲಿ ಕಂಟಕವೆಂಬ ಮುಳ್ಳನ್ನು ಕಿತ್ತು ಅವರ ಬಾಳು ಕೂಡಾ ಬೆಳಕಾಗಿದೆ. ನಾವು ಸಿಹಿ ತಿಂದು ಜನ್ಮದಿನ ಆಚರಿಸುವುದಕ್ಕಿಂತ ಬೇರೆಯವರ ಬಾಳಿಗೆ ಸವಿ ತರುವುದು ಮುಖ್ಯ. ಶ್ರೀಶಂಕರರ ಜೀವನವೇ ಒಂದು ಉಪದೇಶ. ಶಂ ಎಂದರೆ ಶುಭ; ಕರ ಎಂದರೆ ಮಾಡುವವನು. ಅಂದರೆ ಶುಭ ಮಾಡು ಎನ್ನುವುದೇ ಅವರ ಜೀವನ ಸಂದೇಶ ಎಂದು ಬಣ್ಣಿಸಿದರು. ಶುಭಂಕರತ್ವ, ಶಂಕರತ್ವ ಬಾಳಿನಲ್ಲಿ ಮುಖ್ಯ ಎಂದರು.

ಆರ್ತ ಕುಟುಂಬದ ಕಣ್ಣೀರು ಒರೆಸುವ ಮೂಲಕ ಸಂನ್ಯಾಸ ಸ್ವೀಕಾರ ದಿನವನ್ನು ಆಚರಿಸಲಾಗುತ್ತಿದೆ. ಅವರ ಜೀವನ ಬೆಳಕಾಗಲಿ; ಬೇಗೆಯಲಿ ಬೇಯದಿರಲಿ ಎಂದು ಆಶಿಸುವುದೇ ಇಂದಿನ ಆಚರಣೆ. ಅವರ ಬದುಕಿನ ಕಷ್ಟ ದೂರ ಮಾಡುವ ಪ್ರಮಾಣ ಮಾಡುವ ದಿನ ಎಂದು ಹೇಳಿದರು.

ಶ್ರೀಮಠದ ಸಿಇಓ ಕೆ.ಜಿ.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾತಿ ಮತ ಬೇಧವಿಲ್ಲದೇ ಆರ್ತರನ್ನು ಗುರುತಿಸಿ ಪ್ರತಿ ವರ್ಷ ಒಬ್ಬರಿಗೆ ಜೀವನದಾನ ನೀಡಿ ಅವರ ಇಡೀ ಜೀವನ ನಿರ್ವಹಣೆ ಹೊಣೆಯನ್ನು ಟ್ರಸ್ಟ್ ವಹಿಸಿಕೊಳ್ಳುತ್ತದೆ ಎಂದು ಅವರು ಹೇಳಿದರು. ಹೊನ್ನಾವರ ತಾಲೂಕಿನ ಯಶೋಧಾ ಹೆಗಡೆ ಅವರಿಗೆ ಜೀವನದಾನ ಪ್ರದಾನ ಮಾಡಲಾಯಿತು. ಟ್ರಸ್ಟಿಗಳಾದ ಎಸ್.ಎಸ್.ಹೆಗಡೆ, ಆರ್.ಜಿ.ಹೆಗಡೆ, ಶ್ರೀಕಾಂತ ಹೆಗಡೆ, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಮತ್ತಿತರರು ಉಪಸ್ಥಿತರಿದ್ದರು.

ಎಸ್.ಜಿ.ಭಟ್ ಕಬ್ಬಿನಹಿತ್ಲು ಕಾರ್ಯಕ್ರಮ ನಿರೂಪಿಸಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?
May 6, 2025
7:44 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |
May 6, 2025
7:18 AM
by: ದ ರೂರಲ್ ಮಿರರ್.ಕಾಂ
ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ
May 6, 2025
7:02 AM
by: The Rural Mirror ಸುದ್ದಿಜಾಲ
ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ
May 5, 2025
10:56 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group