ಜನ್ಮದಿನವನ್ನು ಬಗೆ ಬಗೆಯಾಗಿ ಆಚರಿಸುತ್ತಾರೆ. ಆದರೆ ಜನ್ಮದಿನದಂದು ಮಾತ್ರವಲ್ಲದೇ ಜೀವನವಿಡೀ ನಮ್ಮಿಂದಾದ ಒಳಿತು ಮಾಡುವುದೇ ನಿಜವಾಗಿ ಪರಮೇಶ್ವರನ ಪೂಜೆ ಎಂದು ರಾಮಚಂದ್ರಾಪುರ ಮಠಧ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ 29ನೇ ಸಂನ್ಯಾಸ ಗ್ರಹಣ ದಿನದ ಪುಣ್ಯ ಪರ್ವದಂದು ಪ್ರತಿ ವರ್ಷದಂತೆ ಆರ್ತರೊಬ್ಬರ ಕುಟುಂಬಕ್ಕೆ ಅಭಯ ನೀಡಿ, ಅವರ ಜನರ ಜೀವನಕ್ಕೆ ನೆರವಾಗುವ ಜೀವಕಾರುಣ್ಯದ ಯೋಜನೆ ಜೀವನದಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಶುಭಕೃತ್ ಸಂವತ್ಸರದ ಜೀವನದಾನ ಇಂದು ನಡೆಯುತ್ತಿದೆ. ಜನ್ಮದಿನವನ್ನು ವಿವಿಧ ಬಗೆಯಾಗಿ ಆಚರಿಸುತ್ತಾರೆ. ಹುಟ್ಟಿದ ದಿನವನ್ನು ಮಾತ್ರವಲ್ಲ, ಬದುಕೆಲ್ಲ ಶುಭವನ್ನು ಮಾಡುವುದು ಮುಖ್ಯ. ಸುತ್ತಮುತ್ತಲ ಜೀವಜಗತ್ತಿಗೆ ನಮ್ಮಿಂದಾದ ಒಳಿತು ಮಾಡುವುದೇ ನಿಜವಾಗಿ ಪರಮೇಶ್ವರನ ಪೂಜೆ. ಭಯಮುಕ್ತ, ದುಃಖಮುಕ್ತವಾಗಿ, ಶುಭಕೃತ್ ಶಂಕರರಾಗಿ, ತಮಗೆ, ಕುಟುಂಬಕ್ಕೆ, ಊರಿಗೆ, ಗ್ರಾಮಕ್ಕೆ ಒಳಿತು ಮಾಡುವ ಪಣ ತೊಡುವಂತೆ ಕರೆ ನೀಡಿದರು.
ಆರ್ತ ಕುಟುಂಬದ ಕಣ್ಣೀರು ಒರೆಸುವ ಮೂಲಕ ಸಂನ್ಯಾಸ ಸ್ವೀಕಾರ ದಿನವನ್ನು ಆಚರಿಸಲಾಗುತ್ತಿದೆ. ಅವರ ಜೀವನ ಬೆಳಕಾಗಲಿ; ಬೇಗೆಯಲಿ ಬೇಯದಿರಲಿ ಎಂದು ಆಶಿಸುವುದೇ ಇಂದಿನ ಆಚರಣೆ. ಅವರ ಬದುಕಿನ ಕಷ್ಟ ದೂರ ಮಾಡುವ ಪ್ರಮಾಣ ಮಾಡುವ ದಿನ ಎಂದು ಹೇಳಿದರು.
ಶ್ರೀಮಠದ ಸಿಇಓ ಕೆ.ಜಿ.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾತಿ ಮತ ಬೇಧವಿಲ್ಲದೇ ಆರ್ತರನ್ನು ಗುರುತಿಸಿ ಪ್ರತಿ ವರ್ಷ ಒಬ್ಬರಿಗೆ ಜೀವನದಾನ ನೀಡಿ ಅವರ ಇಡೀ ಜೀವನ ನಿರ್ವಹಣೆ ಹೊಣೆಯನ್ನು ಟ್ರಸ್ಟ್ ವಹಿಸಿಕೊಳ್ಳುತ್ತದೆ ಎಂದು ಅವರು ಹೇಳಿದರು. ಹೊನ್ನಾವರ ತಾಲೂಕಿನ ಯಶೋಧಾ ಹೆಗಡೆ ಅವರಿಗೆ ಜೀವನದಾನ ಪ್ರದಾನ ಮಾಡಲಾಯಿತು. ಟ್ರಸ್ಟಿಗಳಾದ ಎಸ್.ಎಸ್.ಹೆಗಡೆ, ಆರ್.ಜಿ.ಹೆಗಡೆ, ಶ್ರೀಕಾಂತ ಹೆಗಡೆ, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಮತ್ತಿತರರು ಉಪಸ್ಥಿತರಿದ್ದರು.
ಎಸ್.ಜಿ.ಭಟ್ ಕಬ್ಬಿನಹಿತ್ಲು ಕಾರ್ಯಕ್ರಮ ನಿರೂಪಿಸಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…