ಜೀವನಪ್ರೀತಿ

February 15, 2026
6:21 AM

ಜೀವನವೆಂದರೆ ಕೇವಲ ಉಸಿರಾಟವಲ್ಲ; ಅದು ಅನುಭವಗಳ ಹೂಗುಚ್ಛ, ಭಾವನೆಗಳ ಹಬ್ಬ, ತತ್ತ್ವದ ಹಾದಿ. “ಇನ್ನೊಬ್ಬರಿಗೆ ತೊಂದರೆಯಾಗದಂತೆ ನಮ್ಮಿಷ್ಟದಂತೆ ಬದುಕುವುದು” ಎನ್ನುವ ಸರಳ ಮಾತು, ಶಾಶ್ವತ ಶಾಸ್ತ್ರವಾಣಿಯೂ ಆಗಿ, ಆಧುನಿಕ ಮನೋವಿಜ್ಞಾನದ ಶ್ರೇಷ್ಠ ತೀರ್ಮಾನವೂ ಆಗಿ ಕೇಳಿಸುತ್ತದೆ.

ಉಪನಿಷತ್ತುಗಳು “ಸತ್ಯಂ ವದ, ಧರ್ಮಂ ಚರ” ಎಂದು ಹೇಳಿದಾಗ, ಸತ್ಯ–ಧರ್ಮಗಳನ್ನೇ ಬದುಕಿನ ನಿತ್ಯ ಸಂಗಾತಿಯನ್ನಾಗಿ ಮಾಡು ಎಂಬ ಸಂದೇಶ ನೀಡಿದ್ದವು. “ಅಹಿಂಸಾ ಪರಮೋ ಧರ್ಮಃ” ಎಂಬ ಘೋಷದಲ್ಲಿ ಜೀವಜಗತ್ತಿಗೆ ಹಾನಿ ಮಾಡದ ಬದುಕೇ ಸರ್ವೋತ್ತಮವೆಂದು ತತ್ತ್ವಶಾಸ್ತ್ರವು ಸಾರಿತ್ತು. ಗೀತೆಯಲ್ಲಿ ಶ್ರೀಕೃಷ್ಣನು “ಸ್ವಧರ್ಮೇ ನಿಧನಂ ಶ್ರೇಯಃ” ಎಂದು ಹೇಳಿದಾಗ, ತನ್ನ ಸ್ವಭಾವಕ್ಕೆ ತಕ್ಕ ಹಾದಿಯೇ ನಿಜವಾದ ಬದುಕಿನ ಹಾದಿ ಎಂದು ಬೋಧಿಸಿದನು. ಶಾಸ್ತ್ರದ ಈ ತತ್ತ್ವದಲ್ಲಿ suppression ಗೆ ( ಅದುಮಿಡುವಿಕೆ )  ಸ್ಥಾನವಿಲ್ಲ; ಭಾವನೆಗಳ sublimation, (ಪರಿವರ್ತನೆ ) ಗೆ ,ಅಂದರೆ ಪರಿವರ್ತನೆಯೇ ಮಾರ್ಗ. ಕೋಪವು ಧೈರ್ಯವಾಗಿ ರೂಪಾಂತರಗೊಳ್ಳಬೇಕು; ಆಕಾಂಕ್ಷೆ ಧಾರ್ಮಿಕ ಪ್ರಯತ್ನದಲ್ಲಿ ಹೂಮಳೆಯಾಗಿ ಅರಳಬೇಕು.

ಆಧುನಿಕ ಮನಶ್ಶಾಸ್ತ್ರವೂ ಇದೇ ನಾದವನ್ನು ನುಡಿಸುತ್ತದೆ. ಫ್ರಾಯ್ಡ್ repression—ಅಂದರೆ ಭಾವನೆಗಳನ್ನು ಅದುಮಿಡುವುದು ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತದೆ ಎಂದು ಎಚ್ಚರಿಸುತ್ತಾನೆ. ರೋಜರ್ಸ್‌ನ self-actualization ತತ್ತ್ವವು ವ್ಯಕ್ತಿಯ ಒಳಗಿರುವ ಸಹಜತೆಯನ್ನು ಅರಿತು ಬೆಳಸಿದಾಗಲೇ ಸಂತೋಷ ಅರಳುತ್ತದೆ ಎಂದು ಸಾರುತ್ತದೆ. ಪಾಸಿಟಿವ್ ಸೈಕಾಲಜಿಯೂ ಹೇಳುವುದು ಏನೆಂದರೆ well-being ಅಂದರೆ ಕೇವಲ ಸಮಸ್ಯೆಗಳಿಲ್ಲದ ಸ್ಥಿತಿ ಅಲ್ಲ, ಬದಲಿಗೆ one’s potential  ( ಒಬ್ಬನ ಅಮಿತ ಸಾಮರ್ಥ್ಯ ಗಳು )  ಅರಿತುಕೊಳ್ಳುವ ನೆಮ್ಮದಿ, ಸಂಬಂಧಗಳ ಸಮತೋಲನ, ಸ್ವಾಭಾವಿಕತೆಯ ಅಭಿವ್ಯಕ್ತಿ ಎಂಬುದಾಗಿ.

ಈ ಹೋಲಿಕೆಯಲ್ಲಿ ಅದ್ಭುತ ಸಂಗತಿಯೇನೆಂದರೆ ಉಪನಿಷತ್ತಿನ ಜ್ಞಾನಮಾರ್ಗ ಹಾಗೂ ಆಧುನಿಕ ಮನೋವಿಜ್ಞಾನದ ಚಿಕಿತ್ಸೆ ಎರಡೂ ಒಂದೇ ತತ್ವವನ್ನು ವಿಭಿನ್ನ ಭಾಷೆಯಲ್ಲಿ ಹೇಳುತ್ತದೆ.. ಶಾಸ್ತ್ರ ಹೇಳುವುದು: “ಭಾವನೆಗಳನ್ನು ಜ್ಞಾನದಿಂದ ಪರಿವರ್ತಿಸು.” ಮನಶ್ಶಾಸ್ತ್ರ ಹೇಳುವುದು: “ಭಾವನೆಗಳನ್ನು repression ( ಒತ್ತಾಯ ಪೂರ್ವಕ ಅದುಮಿಡದೆ )ಮಾಡದೆ, healthy expression  ( ಆರೋಗ್ಯಕರವಾಗಿ ವ್ಯಕ್ತಪಡಿಸುವ )ಮೂಲಕ ಬದುಕು.” ಗೀತೆಯ ದೃಷ್ಟಿಯಲ್ಲಿ ಸ್ವಧರ್ಮ ಅನುಸರಿಸುವುದು ಆಧ್ಯಾತ್ಮಿಕ ಹೊಣೆಗಾರಿಕೆ; ಆಧುನಿಕ ದೃಷ್ಟಿಯಲ್ಲಿ self-expression ವ್ಯಕ್ತಿಯ ಮಾನಸಿಕ ಆರೋಗ್ಯಕ್ಕೆ ಅವಶ್ಯ. ಎರಡೂ ತೀರಗಳು ಶಾಂತಿಯೇ ಕೇಂದ್ರಬಿಂದುವು.

ಒಂದು ಉದಾಹರಣೆಯಾಗಿ ನೋಡಿದರೆ, ಒಬ್ಬ ಯುವಕನ ಕಲಾತ್ಮಕ ಕನಸುಗಳನ್ನು ಕುಟುಂಬದ ಒತ್ತಡದಿಂದ ನಿರಂತರವಾಗಿ ಅದುಮಿ ಹಾಕಿದರೆ , ಅವನ ಮನಸ್ಸು ಒತ್ತಡದ ಕಾರಾಗೃಹವಾಗುತ್ತದೆ. ಇದು ಫ್ರಾಯ್ಡ್ ಹೇಳಿದ repression, ಗೀತೆಯ ಪ್ರಕಾರ ಪರಧರ್ಮ ಅನುಸರಿಸುವ ತಪ್ಪು. ಇನ್ನೊಂದೆಡೆ, ತನ್ನ ಕೋಪವನ್ನು ಕೆಲಸದ ಶ್ರಮಶೀಲತೆಯಾಗಿ ಪರಿವರ್ತಿಸುವ ಉದ್ಯೋಗಿ ಉಪನಿಷತ್ತಿನ “ಪರಿವರ್ತನೆ” ತತ್ತ್ವವನ್ನು ಜೀವಂತಗೊಳಿಸಿದವನಾಗುತ್ತಾನೆ. ಇದು modern psychology ಯ strength-based approach ಗೆ ಸಮಾನ.

ಹೀಗಾಗಿ ಜೀವನಪ್ರೀತಿ ಎಂದರೆ ಕೇವಲ ಬದುಕುಳಿಯುವ ಹೋರಾಟವಲ್ಲ; ಅದು ಹೊಣೆಗಾರಿಕೆಯಿಂದ ಕೂಡಿದ ಸ್ವಾತಂತ್ರ್ಯ, ನಿಯಂತ್ರಣದಿಂದ ಕೂಡಿದ ಸ್ವಾಭಾವಿಕತೆ, ಸಮತೋಲನದಿಂದ ಕೂಡಿದ ಆನಂದ. suppression neither spiritually nor psychologically ಹೀಅಲ್ಥ್ಯ್ ಅಂದರೆ “ಭಾವನೆಗಳ ಅದುಮಿಡುವುದು  ಧಾರ್ಮಿಕ–ಆಧ್ಯಾತ್ಮಿಕ ದೃಷ್ಟಿಯಿಂದಲೂ, ಮಾನಸಿಕ–ಆರೋಗ್ಯದ ದೃಷ್ಟಿಯಿಂದಲೂ ಹಿತಕರವಲ್ಲ, ಮನಶ್ಶಾಸ್ತ್ರೀಯವಾಗಿಯೂ ಆರೋಗ್ಯಕರವಲ್ಲ.”ಶಾಸ್ತ್ರವು ಬೋಧಿಸಿದ ಧರ್ಮದ ಮಾರ್ಗವೂ, ಮನಶ್ಶಾಸ್ತ್ರವು ಬೋಧಿಸಿದ ಆರೋಗ್ಯದ ಮಾರ್ಗವೂ, ಒಂದೇ ಹೃದಯಸ್ಪಂದನದಲ್ಲಿ ಲಯಗೊಂಡಿವೆ.

ಜೀವನಪ್ರೀತಿ ಎಂದರೆ ಒಂದು  ಕಾವ್ಯದಂತೆ ತೋರುತ್ತದೆ:

“ಕ್ಷಮೆಯ ಗಂಗೆಯಲಿ ಮನಸ್ಸು ತೇಲಲಿ,

ಅಹಿಂಸೆಯ ಸೂರ್ಯೋದಯದಲ್ಲಿ ಹೃದಯ ಹೊಳೆಯಲಿ,

ಸ್ವಭಾವದ ಹೂವು ಅರಳಿ, ಆನಂದದ ಪರಿಮಳ ಹರಡಲಿ ,

ಅದೇ ಜೀವನಪ್ರೀತಿ. ಆನಂದದ ಅನುಭೂತಿ ”

………….

This opinion column explores how ancient Indian scriptures like the Upanishads and Bhagavad Gita align with modern psychology in emphasizing emotional transformation rather than suppression. Both traditions highlight self-expression, authenticity, and emotional balance as essential for true well-being and inner peace.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ

ಭಾರೀ ಮಳೆ ಹಿನ್ನೆಲೆ – ದಕ್ಷಿಣ ಕನ್ನಡದಲ್ಲಿ ಇಂದು ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ
July 23, 2026
7:29 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 22.07.2026 | ಉತ್ತರ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯ ಸಾಧ್ಯತೆ; ರಾಜ್ಯದಲ್ಲಿ ಮಳೆ ಚಟುವಟಿಕೆ ಮುಂದುವರಿಕೆ
July 22, 2026
3:55 PM
by: ಸಾಯಿಶೇಖರ್ ಕರಿಕಳ
ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ
July 21, 2026
11:55 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ
July 21, 2026
4:32 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror