ಸಾಮಾನ್ಯವಾಗಿ ಶುಂಠಿಯ ಗೊಂಚಲು ಸಾಮಾನ್ಯವಾಗಿ ಒಂದರಿಂದ ಎರಡು ಕೆ.ಜಿ ಮಾತ್ರ ಇರುತ್ತದೆ. ಆದರೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆ ಮೋಪಿದೇವಿ ಮಂಡಲದ ಶಿವರಾಮಪುರ ಎಂಬಲ್ಲಿ ಯರ್ಲಗಡ್ಡದ ನಾಗೇಶ್ವರರಾವ್ ಎಂಬುವವರು ಮನೆಯ ಹಿತ್ತಲಲ್ಲಿ ಬೆಳೆದ ಶುಂಠಿಯ ಗೊಂಚಲು ಬರೋಬ್ಬರಿ 7 ಕೆಜಿತೂಗುತ್ತಿದೆ.ಇದು ರೈತ ಸಮಾವೇಶವೊಂದರಲ್ಲಿ ಪ್ರಮುಖ ಆಕರ್ಷಣೆಯಾಗಿದೆ.
ರಾಸಾಯನಿಕ ಗೊಬ್ಬರ ಹಾಕದೇ ಸಾವಯವ ಪದ್ಧತಿಯಲ್ಲಿಯೇ ಈ ಶುಂಠಿಯನ್ನು ಬೆಳೆಯಲಾಗಿದೆ,ಇದನ್ನು ಮಾವಿನ ಶುಂಠಿ ಎಂದು ಕರೆಯಲಾಗುತ್ತದೆ. ಈ ಶುಂಠಿಯನ್ನು ಉಪ್ಪಿನಕಾಯಿಗೆ ಹೆಚ್ಚಿಗೆ ಬಳಸಲಾಗುತ್ತದೆ. ಈಗ ಒಂದು ಕೆಜಿ ಶುಂಠಿ ಬೆಲೆ 50 ರೂಪಾಯಿವರೆಗೆ ಇದೆ.
ಅರಿಶಿನದ ಸುಗ್ಗಿಯ ಅವಧಿ 7 ತಿಂಗಳಿಂದ 9 ತಿಂಗಳುಗಳಾಗಿದೆ. ಮಾವಿನ ಶುಂಠಿ ಕೇವಲ ಆರು ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ಮಾವಿನ ಶುಂಠಿಯನ್ನು ಕರ್ಕುಮಾ ಮಂಗ್ಗಾ ಎಂದೂ ಕರೆಯುತ್ತಾರೆ. ಮಾವಿನ ಶುಂಠಿಯಲ್ಲಿ ಈ ರೀತಿಯಾಗಿ ತೂಕ ಹೆಚ್ಚಾಗುವುದು ಬಹಳ ಅಪರೂಪ ಎಂದು ಘಂಟಸಾಲ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ಇಲಾಖೆಯ ಹಿರಿಯ ವಿಜ್ಞಾನಿ ಡಾ. ವಿ.ಮಂಜುವಾಣಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…