MIRROR FOCUS

ಬೆಳ್ಳಾರೆಗೆ ಆಗಮಿಸಿದ ಜ್ಞಾನಭಿಕ್ಷಾ ಪಾದಯಾತ್ರೆ | ಒಳ್ಳೆಯವರನ್ನು, ಒಳ್ಳೆಯದನ್ನು ಗುರುತಿಸೋಣ ಹಾಗೂ ಬೆಂಬಲಿಸೋಣ | ಕೆಟ್ಟವರನ್ನು, ಕೆಟ್ಟದ್ದನ್ನು ನಿರ್ಲಕ್ಷಿಸೋಣ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಮುಂದಿನ 15 ವರ್ಷಗಳಲ್ಲಿ ಮಾನವೀಯ ಮೌಲ್ಯಗಳನ್ನು  ತುಂಬುವ ಕಾರ್ಯ ನಡೆಯಬೇಕಿದೆ. ಇದಕ್ಕಾಗಿ ಪ್ರತೀ ವ್ಯಕ್ತಿಯ ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ  ಬದಲಾವಣೆ ಆಗಲೇಬೇಕಿದೆ. ಈ ಕಾರ್ಯಕ್ಕೆ ನಮ್ಮಲ್ಲೆರಲ್ಲೂ ಸಣ್ಣ ಬದಲಾವಣೆ ಮಾಡಿಕೊಳ್ಳಲೇಬೇಕಿದೆ

– ಹೀಗೆಂದು ಹೇಳಿದವರು  ಬೆಂಗಳೂರಿನ ವಿವೇಕಾನಂದ ಎಚ್‌ ಕೆ ಹೇಳಿದ್ದಾರೆ.

Advertisement

ಜ್ಞಾನಭಿಕ್ಷಾ ಪಾದಯಾತ್ರೆ ಮೂಲಕ ಮಾನವೀಯ ಮೌಲ್ಯಗಳ ಜಾಗೃತಿ ಸಂದೇಶ ನೀಡುತ್ತಾ ಪಾದಯಾತ್ರೆ ಮಾಡುತ್ತಿರುವ ಸಮಾಜ ಚಿಂತಕ ವಿವೇಕಾನಂದ ಎಚ್‌ ಕೆ 286  ನೇ ದಿನದ ಪಾದಯಾತ್ರೆಯಲ್ಲಿ  ಬೆಳ್ಳಾರೆಗೆ ತಲಪಿದರು. ಬೆಳ್ಳಾರೆಯಲ್ಲಿ ರೋಟರಿ ವತಿಯಿಂದ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ  ತುಂಬುವ ಕೆಲಸ ಆಗಲೇಬೇಕಿದೆ ಎಂದು ಪ್ರತಿಪಾದಿಸಿದ ವಿವೇಕಾನಂದ ಅವರು ಈ ದೇಶದಲ್ಲಿ  ಆಡಳಿತದ ಅಭಿವೃದ್ಧಿ ಆಗಿದೆ, ಚಂದ್ರಲೋಕದವರೆಗೂ ತೆರಳುವ ಅಧ್ಯಯನವಾಗಿದೆ, ಹೇರ್‌ ಸ್ಟೈಲ್‌ ಬಗ್ಗೆಯೇ ಅಧ್ಯಯನ ಮಾಡುವ ಡಿಪ್ಲೋಮಾ ಪದವಿಗಳೂ ಬಂದಿವೆ. ಇಷ್ಟೇ ಅಲ್ಲ ಅನೇಕ ಸಂಶೋಧನೆಗಳು, ತಾಂತ್ರಿಕತೆಗಳು ಬಂದಿವೆ. ಹಾಗಿದ್ದರೂ ಮಾನವ ಖುಷಿಯಾಗಿದ್ದಾನಾ ? ಎನ್ನುವ ಪ್ರಶ್ನೆ ಹಾಕಿಕೊಳ್ಳಬೇಕಿದೆ. ಮಾನವೀಯ ಮೌಲ್ಯ ಕಳೆದುಕೊಳ್ಳುತ್ತಿರುವುದೇ ಇಂದಿನ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ. ಅತ್ಯಂತ ಸಮೃದ್ಧವಾದ ನೀರಿನಿಂದ ಕೂಡಿದ ಈ ಪ್ರದೇಶದಲ್ಲಿ ನೀರಿಲ್ಲದೆ ಪರದಾಟ ಮಾಡುವುದು, ಈಗಲೂ ಮನೆಯಿಂದ ಹೊರಬರಲು ಮಾಸ್ಕ್‌ ಧರಿಸುವುದು, ಮುಖಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ಬಂದಿರುವುದಕ್ಕೆ ಏನು ಕಾರಣ ಎಂದು ಪ್ರಶ್ನಿಸಿದರು. ಈಗ ಇದಕ್ಕೆಲ್ಲಾ ಕಾರಣ ಹುಡುಕಿ ಸರಿಪಡಿಸಬೇಕಿದೆ, ಈ ಜವಾಬ್ದಾರಿ ನಮ್ಮ ಮೇಲಿದೆ, ಮುಂದಿಒನ  15 ವರ್ಷದೊಳಗೆ ಈ ವ್ಯವಸ್ಥೆ ಸರಿಪಡಿಸಬೇಕಿದೆ ಎಂದರು. ಸಾಮಾಜಿಕ ಮೌಲ್ಯಗಳನ್ನು  ಮುಂದಿನ ಜನಾಂಗಕ್ಕೆ ತಲುಪಿಸಿ ಪುನರ್‌ ಸ್ಥಾಪಿಸುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು. ಇಂದು ಈಗ 40-60  ವರ್ಷ ವಯಸ್ಸಿನ ಮಂದಿ ಹೆಚ್ಚು ಅನಾರೋಗ್ಯಕ್ಕೆ ಒಳಗಾದರೆ ಈಗ 60 ಕ್ಕಿಂತ ಹೆಚ್ಚಿನ ವಯಸ್ಸಿನ ಮಂದಿ ಆರೋಗ್ಯದಿಂದ ಇದ್ದಾರೆ ಎಂದರೆ ಕಳೆದ 20  ವರ್ಷಗಳಲ್ಲಿ ಅಂದರೆ ಜಾಗತೀಕರಣದ ನಂತರ ಭಾರತದಲ್ಲಿ ಮಾನವೀಯ ಮೌಲ್ಯಗಳು ಹಾಗೂ ಜನರ ಸಹಜತೆಯಲ್ಲಿ ಬದಲಾಗಿದೆ ಎನ್ನುವುದು  ಸ್ಪಷ್ಟವಾಗಿದೆ.

ಇಂದು ಸಂಪೂರ್ಣವಾಗಿ ಹಣಕ್ಕಾಗಿ , ಅಧಿಕಾರಕ್ಕಾಗಿ, ಪ್ರಚಾರಕ್ಕಾಗಿ ಎಲ್ಲವೂ  ಮಾರಾಟವಾಗುತ್ತಿದೆ. ಬನ್ನಿ ಸ್ವಾಗತ ಎನ್ನುವ ಬದಲಾಗಿ ಕಳ್ಳರಿದ್ದಾರೆ ಎಚ್ಚರಿಕೆ ಎನ್ನುವ ಸ್ಥಿತಿ ಬಂದಿರುವುದು ನಾಗರಿಕೆಯಾ ? ಇಂತಹ ಕುಸಿತಗಳು ಎಲ್ಲಾ ಕ್ಷೇತ್ರಗಳಲ್ಲೂ ಆಗಿದೆ. ಪ್ರಮುಖವಾಗಿ ಮಾಧ್ಯಮಗಳು, ಧಾರ್ಮಿಕ, ವೈದ್ಯಕೀಯ, ರಾಜಕೀಯ ಹೀಗೇ ವಿವಿಧ ಕ್ಷೇತ್ರಗಳಲ್ಲಿ ಕುಸಿತವಾಗಿದೆ. ದಟ್ಟ ಕಾಡಿನಲ್ಲಿ ಕೂಡಾ ಮದ್ಯದ ಬಾಟಲಿ ಲಭ್ಯವಾಗುತ್ತದೆ ಎಂದರು ಮೌಲ್ಯಗಳ ಕುಸಿದ ಎಷ್ಟಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇದೆಲ್ಲಾ ಕಾರಣದಿಂದ ಮನಸ್ಸು ಹಾಗೂ ಆರೋಗ್ಯ ಕೆಡುತ್ತಿದೆ. ಇದು ಸರಿಯಾಗದೇ ಇದ್ದರೆ ಭವಿಷ್ಯವೂ ಆತಂಕ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

Advertisement
ಜಾತಿಗಳು ಇರುವುದಾದರೆ ಮಠಗಳು ಏತಕೆ ?
ಮಾನವೀಯ ಮೌಲ್ಯಗಳನ್ನು  ತುಂಬಬೇಕಾದ ಮಠಗಳು ಜಾತಿಗಳ ಕೇಂದ್ರವಾಗಿದೆ. ಒಬ್ಬ ಸ್ವಾಮೀಜಿಯ ತಂದೆ, ಕುಟುಂಬ, ಆಸ್ಥಿ ಎಲ್ಲವೂ ಪೂರ್ವಾಶ್ರಮವಾದರೆ ಜಾತಿ ಏಕೆ ಪೂರ್ವಾಶ್ರಮವಲ್ಲ ? ಎಂದು ಪ್ರಶ್ನಿಸಿದ ವಿವೇಕಾನಂದ ಎಚ್‌ ಕೆ, ಮಠಗಳು ಜಾತಿ ವ್ಯವಸ್ಥೆಯನ್ನಲ್ಲ ಮಾನವೀಯ ಮೌಲ್ಯಗಳನ್ನು  ಬೆಳೆಸಬೇಕಾದ್ದು. ಮಠಗಳು ಇದ್ದರೆ ಜಾತಿಗಳು ಒರವಾರದು, ಜಾತಿಗಳೇ ಇರುವುದಾದರೆ ಮಠಗಳು ಏಕೆ ಬೇಕು ಎಂದು ಪ್ರಶ್ನಿಸಿದರು.

ಈಗ ಸಾಮಾನ್ಯ ಜನರೂ ಎಚ್ಚೆತ್ತುಕೊಳ್ಳಬೇಕು, ಮಾನವೀಯ ಮೌಲ್ಯಗಳನ್ನು  ಮುಂದಿನ  15  ವರ್ಷಗಳಲ್ಲಿ ಪುನರ್‌ ಸ್ಥಾಪಿಸಲು ಸಾಮಾನ್ಯನೂ ಜಾಗೃತವಾಗಬೇಕು. ಇದಕ್ಕಾಗಿ ಇಂದಿನಿಂದಲೇ ಒಳ್ಳೆಯವರನ್ನು ಗುರುತಿಸೋಣ ಹಾಗೂ ಬೆಂಬಲಿಸೋಣ. ಕೆಟ್ಟವರನ್ನು ನಿರ್ಲಕ್ಷಿಸೋಣ. ನಮ್ಮ ಒಳ್ಳೆಯದಕ್ಕಾಗಿ ಒಳ್ಳೆಯದರ ಕಡೆಗೆ ಸಾಗೋಣ. ಒಳ್ಳೆಯದನ್ನು ಒಳ್ಳೆಯದು ಎಂದು ಹೇಳಲು ಯಾವ ಭಯವೂ ಬೇಕಾಗಿಲ್ಲ. ಯಾವ ಇಸಂಗಳೂ ಇಲ್ಲಿ ಅಗತ್ಯವಿಲ್ಲ ಎಂದರು.

ಸಂವಾದ ಕಾರ್ಯಕ್ರಮದಲ್ಲಿ ಪೊಲೀಸ್‌ ಅಧಿಕಾರಿ ಶಿವಕುಮಾರ್‌, ಬೆಳ್ಳಾರೆ ರೋಟರಿ ಅಧ್ಯಕ್ಷ ಪದ್ಮನಾಭ ಬೀಡು ಮೊದಲಾದವರು ಇದ್ದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭಾರತದಲ್ಲಿ ಅಡಿಕೆ ಕೃಷಿ ಹೇಗಿದೆ..? ಎಷ್ಟು ಉತ್ಪಾದನೆಯಾಗುತ್ತಿದೆ…?

970 ರ ದಶಕದಿಂದ ಹಿಡಿದು ಈ ತನಕ ಇಲಾಖೆಗಳು,ಸರಕಾರಗಳು,ಹಿರಿಯರು ಹೇಳುತ್ತಾ ಬಂದದ್ದು ವಿಸ್ತರಣೆ…

25 minutes ago

ಹೊಸರುಚಿ | ಹಲಸಿನ ಬೀಜದ ಚಟ್ಟಂಬಡೆ

ಹಲಸಿನ ಬೀಜದ ಚಟ್ಟಂಬಡೆ :  ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : …

56 minutes ago

ಮನೆಯಲ್ಲಿ ಯಾವ ಬಣ್ಣದ ಗೋಡೆಗಳು ಗ್ರಹಗಳ ಶಕ್ತಿಯನ್ನು ಸಂತೋಲನಗೊಳಿಸಿ ಯಶಸ್ಸನ್ನು ತರುತ್ತವೆ?

ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರದಲ್ಲಿ, ಮನೆಯ ಗೋಡೆಗಳ ಬಣ್ಣವು ಕೇವಲ ಸೌಂದರ್ಯಕ್ಕೆ ಸೀಮಿತವಾಗಿಲ್ಲ,…

1 hour ago

ನಿರಂತರತೆಗೆ ಇರುವ ಶಕ್ತಿ ಅಪಾರ: ರಾಘವೇಶ್ವರ ಶ್ರೀ

ನೀರು ಕಲ್ಲಿಗಿಂತ ಮೆದುವಾದರೂ, ನಿರಂತರತೆಯಿಂದ ಕಲ್ಲನ್ನೂ ಕೊರೆಯಬಲ್ಲದು. ನಿರಂತರತೆಗೆ ಇರುವ ಶಕ್ತಿ ಅಪಾರ.…

10 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಸುಚನ್ಯ

ಸುಚನ್ಯ, ಸೈಂಟ್‌ ಆನ್ಸ್‌ ಇಂಗ್ಲಿಷ್‌ ಮೀಡಿಯಂ ಶಾಲೆ, ಕಡಬ , | ಕ್ರಿಯೇಟಿವ್‌…

10 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಪೃಥ್ವಿ ಜಿ ಎಂ

ಪೃಥ್ವಿ ಜಿ ಎಂ, 6 ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ, ಸುಬ್ರಹ್ಮಣ್ಯ |…

10 hours ago