Advertisement
ಅನುಕ್ರಮ

10000 ಕಿಲೋಮೀಟರ್ ನಡಿಗೆಯ ನಂತರ….| ವಿವೇಕಾನಂದ ಎಚ್‌ ಕೆ ಬರೆಯುತ್ತಾರೆ…… | ಜ್ಞಾನ ಭಿಕ್ಷಾ ಪಾದಯಾತ್ರೆಯ ಪಕ್ಷಿನೋಟ…|

Share

10000 ಕಿಲೋಮೀಟರ್……..! ಕಾಲ್ನಡಿಗೆ..!. 

ರಾಷ್ಟ್ರದ ಮೊದಲ ಹೊಗೆ ಮುಕ್ತ ಗ್ರಾಮ ಎಂದು ಹೆಸರಾದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವೈಚ್ಕೂರಳ್ಳಿಯಲ್ಲಿ ಕುಳಿತು ನೆನಪಿನ ಅಂಗಳಕ್ಕೆ ಜಿಗಿದಾಗ…..

ನಾನು ಡ್ಯಾನ್ಸ್ ಮಾಡುವವನಲ್ಲ, ಹಾಡು ಹೇಳುವವನಲ್ಲ, ಕಾಮಿಡಿ ಕಿಲಾಡಿಯಲ್ಲ, ಮಿಮಿಕ್ರಿ ಟಾಕೀಸಿನವನಲ್ಲ, ಯಾವುದೇ ಧರ್ಮದ ಧಾರ್ಮಿಕ ನಾಯಕನಲ್ಲ, ಪ್ರಶಸ್ತಿ ವಿಜೇತನಲ್ಲ, ಯಾವ ಅಧಿಕಾರವೂ ಇಲ್ಲ, ಯಾವ ಸಂಘಟನೆ ಅಥವಾ ಸಂಸ್ಥೆಗೂ ಸೇರಿಲ್ಲ……..

ಆದರೂ ಕರ್ನಾಟಕದ ಜನತೆ ಈ 336 ದಿನಗಳು 10 ಸಾವಿರ ಕಿಲೋಮೀಟರುಗಳ ಯಾತ್ರೆಯಲ್ಲಿ ತಮ್ಮ ಪ್ರೀತಿಯನ್ನು ಮೊಗೆ ಮೊಗೆದು ನೀಡಿದ್ದಾರೆ. ನನ್ನನ್ನು ಅಭಿಮಾನದಿಂದ ಸಾಕಿದ್ದಾರೆ. ಊಟ ವಸತಿ ಸೌಕರ್ಯಗಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ.

ಕೇವಲ ಅಕ್ಷರಗಳಲ್ಲಿ ಮೂಡಿದ ಅಭಿಪ್ರಾಯಗಳನ್ನು ಓದಿ ವ್ಯವಸ್ಥೆಯ ಸುಧಾರಣೆಗೆ ಹಾತೊರೆಯುತ್ತಿರುವ ಮನಸ್ಸುಗಳೇ ಇದಕ್ಕೆಲ್ಲ ಬಹುಮುಖ್ಯ ಕಾರಣ.

ಚಳಿ ಬಿಸಿಲು ಮಳೆ ಗಾಳಿ ಎತ್ತರದಿಂದ ಇಳಿಜಾರು ಪ್ರದೇಶಗಳಲ್ಲಿ ಸಂಚರಿಸುತ್ತಾ, ಕೊರೊನಾ ಅಲೆಯ ನಡುವೆ ಸಾಗುತ್ತಾ ನಗದು ರಹಿತವಾಗಿ ಕಾಲ್ನಡಿಗೆ ಮುಂದುವರಿಯಲು ಜನರು ತೋರಿದ ಕಾಳಜಿಯೇ ಕಾರಣ.

ಪ್ರತಿ ಹೆಜ್ಜೆಯಲ್ಲೂ ಸಿಗುವ ಜನರೊಂದಿಗೆ ಸಂವಾದ ಮಾಡುತ್ತಾ, ಎಲ್ಲಾ ಸ್ತರಗಳ ಸಾರ್ವಜನಿಕರೊಂದಿಗೆ ಬೆರೆಯುತ್ತಾ ಮಾನವೀಯ ಮೌಲ್ಯಗಳ ಬಗ್ಗೆ ಒಂದು ಚರ್ಚೆ ಹುಟ್ಟುಹಾಕುತ್ತಾ ನಿರಂತರ ಪಯಣ ಸಾಗಲು ಕಾರಣವೇ ಬದಲಾವಣೆಯ ತುಡಿತದ ಮನಸ್ಸುಗಳು.

ಎಲ್ಲರಿಗೂ ತುಂಬು ಹೃದಯದಿಂದ ಕೃತಜ್ಞತೆಗಳನ್ನು ಅರ್ಪಿಸುತ್ತಾ……… ಇನ್ನೂ ಸಾಗುತ್ತಲೇ ಇದೆ….

ಮಾನವೀಯ ಮೌಲ್ಯಗಳ ಪುನರುತ್ಥಾನದ ” ಜ್ಞಾನ ಭಿಕ್ಷಾ ಪಾದಯಾತ್ರೆ “……

ನಿಜ ಮನುಷ್ಯರ ಹುಡುಕುತ್ತಾ….. ಸಮ ಸಮಾಜದ ಕನಸಿನಲ್ಲಿ…….. ಜೀವಪರ ನಿಲುವಿನೊಂದಿಗೆ…… ಪರಿಸರದ ಉಳಿವಿಗಾಗಿ…….  ಎಲ್ಲಾ ಭಾವನೆಗಳನ್ನು ಅನುಭವಿಸುತ್ತಾ….. ತಿನ್ನುವ ಅನ್ನ ಬೆಳೆಯುವ ರೈತರ ಋಣ ತೀರಿಸಲು….. ಎಲ್ಲರಲ್ಲೂ ಪ್ರೀತಿ ಎಂಬ ಭಾವವನ್ನು ಸ್ಥಾಯಿಯಾಗಿಸುವ ಆಸೆಯೊಂದಿಗೆ…… ಕಾಲ್ನಡಿಗೆಯೇ ಒಂದು ಸಾಧನೆಯಲ್ಲ, ಸಾಮಾಜಿಕ ಪರಿವರ್ತನೆಗೆ ಪಾದಯಾತ್ರೆ ಒಂದು ಮಾರ್ಗ ಅಷ್ಟೇ….. ಸಾಗುತ್ತಿದೆ ಪಯಣ ಕೊನೆಯ ಉಸಿರಿನವರೆಗೆ………..

ಇಲ್ಲಿಯವರೆಗಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆಯ ಒಂದು ಪಕ್ಷಿನೋಟ……

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

Published by
ವಿವೇಕಾನಂದ ಎಚ್‌ ಕೆ

Recent Posts

ಹವಾಮಾನ ವರದಿ | 06-10-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಅ.9 ರಿಂದ ಕರಾವಳಿಯಲ್ಲಿ ಮಳೆ ಹೆಚ್ಚಾಗುತ್ತಾ?

ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…

7 hours ago

ರಾಜ್ಯದಲ್ಲಿ ನೈಋತ್ಯ ಮುಂಗಾರು ಸಕ್ರಿಯ ; ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಭಾರೀ ಮಳೆ

ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…

14 hours ago

ರಾಜ್ಯದಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್

ರಾಜ್ಯದಲ್ಲಿ ಸದ್ಯ ಯಾವುದೇ ರೀತಿಯ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ…

14 hours ago

ನವೋದಯ ವಿದ್ಯಾಲಯದ 9, 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ – ಅ.15 ಕೊನೆಯ ದಿನ

2027-28ನೇ ಸಾಲಿನಲ್ಲಿ ನವೋದಯ ವಿದ್ಯಾಲಯಗಳ 9 ಮತ್ತು 11ನೇ ತರಗತಿಯ ಖಾಲಿ ಸ್ಥಾನಗಳಿಗೆ…

14 hours ago

1973 ರ ಅಡಿಕೆ ಬಿಕ್ಕಟ್ಟು 2026ಕ್ಕೆ ನೀಡುವ ಎಚ್ಚರಿಕೆ ಏನು..?

1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…

1 day ago

ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?

ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…

1 day ago