ಸಮಾಜದ ಜನರಲ್ಲಿ ಕುಸಿದು ಹೋಗುತ್ತಿರುವ ಮಾನವೀಯ ಸಂಬಂಧದ ಮನವರಿಕೆ ಮಾಡಲು ರಾಜ್ಯಾದ್ಯಂತ ಪಾದಯಾತ್ರೆ ಮಾಡುತ್ತಿರುವ ವಿವೇಕಾನಂದ ಎಚ್. ಕೆ. ಅವರ ಯಾತ್ರೆ ಈಗ ದ ಕ ಜಿಲ್ಲೆಯಲ್ಲಿ ಸಾಗುತ್ತಿದೆ.
ಪುಸ್ತಕದಿಂದ ಜ್ಞಾನ ಪಡೆದುಕೊಂಡರೆ , ಪ್ರಪಂಚದಿಂದ ಅನುಭವ ದೊರೆಯುತ್ತದೆ. ಈ ಎರಡು ವಿಷಯ ವ್ಯಕ್ತಿಯ ಜೀವನದಲ್ಲಿ ಮುಖ್ಯವಾದದ್ದು ಇಂತಹ ಅಧ್ಬುತ ಸಂಗತಿಯನ್ನು ಮನವರಿಕೆ ಮಾಡಿಕೊಂಡ ವ್ಯಕ್ತಿಯೊಬ್ಬರು ಜ್ಞಾನಕ್ಕಾಗಿ ಹಾಗೂ ಜನರಲ್ಲಿ ಮಾನವೀಯ ಮೌಲ್ಯ ಗಳ ಅರಿವು ಮೂಡಿಸುವ ಸಲುವಾಗಿ ಜ್ಞಾನಕ್ಕೆ ಹಾಗೂ ಕಲಿಕೆಗೆ ವಯಸ್ಸಿನ ಅಂತರವಿಲ್ಲ ಮನಸ್ಸಿದ್ದರೆ ಮಾರ್ಗ ಎಂಬಂತೆ ರಾಜ್ಯಾದಾದ್ಯಂತ ಪಾದಯಾತ್ರೆ ಮಾಡುತ್ತಾ ಜ್ಞಾನಭಿಕ್ಷಾ ಪಾದಯಾತ್ರೆ ಎಂಬ ಹೆಸರನ್ನಿಟ್ಟು ಸಮಾಜದ ಜನರಲ್ಲಿ ಕುಸಿದು ಹೋಗುತ್ತಿರುವ ಮಾನವೀಯ ಸಂಬಂಧದ ಮನವರಿಕೆ ಮಾಡುತ್ವ್ಯತಿರುವ ವ್ಯಕ್ತಿಯೇ ವಿವೇಕಾನಂದ ಹಚ್. ಕೆ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ ಎಂಬ ಧ್ಯೇಯದೊಂದಿಗೆ ಜನರ ಜೀವನಮಟ್ಟ ಸುಧಾರಣೆ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳುವಳಿ ಎಂದು ಸಾರುತ್ತ ಉದ್ದದ ದಾರಿಯಲ್ಲಿ ಸಾಗುತ್ತಿದ್ದಾರೆ .
ಮೂಲತಃ ಬೆಂಗಳೂರು ಗ್ರಾಮಾಂತರ ಜೆಲ್ಲೆಯವರಾಗಿದ್ದು ಇತಿಹಾಸದಲ್ಲಿ ಎಂ.ಎ ಡಿಪ್ಲೊಮ ಇನ್ ಜರ್ನಲಿಸಂ ಹಾಗೂ ಡಿಪ್ಲೊಮ ಇನ್ ಫಿಲಂ ಆಕ್ಟಿಂಗ್ ಪದವಿ ಪಡೆದಿದ್ದು ಬರಹಗಾರನಾಗಿ ಸಂದರ್ಶ ಕನಾಗಿ ಶಾಲಾ ಕಾಲೇಜು ಸಂಘ ಸಂಸ್ಥೆ ಪತ್ರಿಕಾ ಘೋಷಣೆ ಆಸ್ಪತ್ರೆ ಮಠ ಮುಂತಾದ ಸಾಮಾಜಿಕ ಸ್ಥಳಗಳಲ್ಲಿ ಮಾನವೀಯ ಮೌಲ್ಯಗಳ ವಿಷಯ ಕುರಿತು ಸಾವಿರಕ್ಕೂ ಹೆಚ್ಚು ಸಂವಾದ ಕಾರ್ಯಕ್ರಮವನ್ನು ಮಾಡಿದ್ದಾರೆ. ಪುಸ್ತಕದ ಜ್ಞಾನ ವನ್ನು ಅರ್ಥೈಸಿಕೊಂಡು ಸಮಾಜದ ಅನುಭವವನ್ನು ಪಡೆದುಕೊಳ್ಳುತ್ತಾ ಜನರ ಮನಸ್ಸಿನಲ್ಲಿ ಮಾನವೀಯ ಮೌಲ್ಯದ ಬೀಜ ಬಿತ್ತುತ್ತಾ 2020 ನವೆಂಬರ 1 ನೇ ರಿಂದ ಬೀದರ್ ಜಿಲ್ಲೆ ಔರತ್ ತಾಲೂಕಿನ ವನಪವರವಳ್ಳಿಯಿಂದ ಕಾಲ್ನಡಿಗೆ ಪ್ರಾರಂಭಿಸಿ ಬಿಸಿಲು ಮಳೆ ಚಳಿ ಯಾವುದನ್ನು ಲೆಕ್ಕಿಸದೆ ನನ್ನ ನಾಡು ನನ್ನ ಜನರು ಎಂಬ ಅಪಾರವಾದ ಮಮತೆಯನ್ನು ಬೆಳೆಸಿಕೊಂಡು ಈ ಉತ್ತಮ ಕೆಲಸದಲ್ಲಿ ತೊಡಗಿಸಿಕೊಂಡು ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿರದೆ ಮಾನವ ಪ್ರಕೃತಿಯ ನಡುವೆ ಸಂಬಂಧವನ್ನು ಗಟ್ಟಿ ಮಾಡುವ ಸಲುವಾಗಿ ನಿರ್ದಿಷ್ಟವಾದ ಗುರಿಯೊಂದಿಗೆ ಮಾನವನ ನಡುವೆ ಪ್ರೀತಿ ನಿಸ್ವಾರ್ಥ ಕತೆ ಎಂಬ ಕೊಂಡಿಯನ್ನು ಬಿಗಿ ಮಾಡುವತ್ತಾ ಮಾನವೀಯ ಮೌಲ್ಯಗಳ ಬಗ್ಗೆ ಹಂಚುತ್ತಾ 240 ತಾಲೂಕು 275 ದಿನ 20 ಜಿಲ್ಲೆ ಕಾಲ್ನಡಿಗೆಯಲ್ಲಿ 8,300 ಕಿಲೋ ಮೀಟರ್ ಕ್ರಮಿಸಿದರೆ ಡಿಸೆಂಬರ್ ವೇಳೆಗೆ 12,000 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಸಾಗುವುದಾಗಿ ದೃಢ ಮನಸ್ಸು ಮಾಡಿದೆನೆ ಈ ಮೂಲಕ ಸಮಾಜದಲ್ಲಿ ಕಳೆದು ಹೋಗುತ್ತಿರುವ ಮಾನವೀಯ ಮೌಲ್ಯಗಳ ಅರಿವು ಮೂಡಿಸುವ ಜೊತೆಗೆ ಪ್ರಕೃತಿ ಆಹಾರ ಉಡುಪು ಜನರ ರೀತಿ ನೀತಿ ಸಮಾಜವನ್ನು ಹತ್ತಿರದಿಂದ ನೋಡುತ್ತಾ ಜೀವನ ಶೈಲಿ ಅರ್ಥೈಸಿಕೊಳ್ಳುತ ಜಾಗೃತಿ ಮೂಡಿಸುವಲ್ಲಿ ನನ್ನ ಪಯಣ ಸಾಗುತ್ತಿದೆ ಎನ್ನುತ್ತಾರೆ ವಿವೇಕಾನಂದ
ಜ್ಞಾನಭಿಕ್ಷೆ ಪಾದಯಾತ್ರೆ ಮೂಲಕ 10 ಲಕ್ಷಕ್ಕೂ ಹೆಚ್ಚು ಅಪರಿಚಿತರ ಸಂಪರ್ಕ ಮಾಡಿಕೊಳ್ಳುವ ಜೊತೆ ಉದ್ದದ ದಾರಿಯಲ್ಲಿ ಕಷ್ಟ ಸುಖಗಳನ್ನು ಎದುರಿಸುತ್ತಾ ಆತ್ಮ ವಿಶ್ವಾಸದಿಂದ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲದೆ ಸಾಗುತ್ತಿದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು. ಈ ಒಂದು ಯೋಚನೆ 45 ವರ್ಷವಿದ್ದಾಗ ಮನಸ್ಸಿಗೆ ಗಾಢವಾಗಿ ಮೂಡುತ್ತದೆ ಸಮಾಜಕೆ ನನ್ನಿಂದ ಆದಷ್ಟು ಕೊಡುಗೆ ಕೊಡಬೇಕೆಂಬ ಕಾರಣ ಕಾಲ್ನಡಿಗೆಯಲ್ಲಿ ಸಾಗುವುದು ಸಂತೋಷ ನೀಡಿದೆ ಲಕ್ಷಾಂತರ ಜನರ ಬೇಟಿ ಯುವ ಜನರಲ್ಲಿ ಆದಂತ ಬದಲಾವಣೆಯ ಬೆಳವಣಿಗೆ ಆಧರಿಸಿ ನಿರ್ಜೀವ ವಸ್ತುವಿಗೆ ಕೊಡುವ ಬೆಲೆಯನ್ನು ಮಾನವೀಯ ಮೌಲ್ಯಗಳಿಗೆ ಕೊಡುವಂತೆ ವಿನಂತಿಸುತ್ತಾ ಯಾರೊಬ್ಬರಲ್ಲೂ ಹಣವನ್ನು ಪಡೆಯದೆ ನಿಷ್ಕಲ್ಮಶ ಮನಸ್ಸಿನಿಂದ ಕಾಲ್ನಡಿಗೆಯಲ್ಲಿ ಸಾಗುತ್ತಾ ಪ್ರತಿಯೊಬ್ಬರಿಗೂ ಮಾದರಿಯಾಗುತ್ತಿರುವ ಸಾಹಸ ಬೆರಗು ಮೂಡಿಸುವಂಥದ್ದು .
# ಸುಕನ್ಯಾ ಎನ್ . ಆರ್,
ಪತ್ರಿಕೋದ್ಯಮ ವಿದ್ಯಾರ್ಥಿನಿ, ವಿವೇಕಾನಂದ ಕಾಲೇಜು, ಪುತ್ತೂರು