ಮಂಗಳೂರು ನಗರದ ಲಾಲ್‍ಬಾಗ್‍ನಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಅ.29ರ ಶನಿವಾರ ಬೆಳಿಗ್ಗೆ 10 ರಿಂದ 1.30ರವರೆಗೆ ವಿವಿಧ ಖಾಸಗಿ ಕಂಪೆನಿಗಳಿಂದ ನೇರ ಸಂದರ್ಶನ ಆಯೋಜಿಸಲಾಗಿದೆ.
ಅವತಾರ್ ಹೋಟೆಲ್ ಮತ್ತು ಕನ್‍ವೆನ್ಷನ್, ಫಿನ್ ಪವರ್ ಏರ್‍ಕಾನ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಸುವರ್ಣ ಕರ್ನಾಟಕ (ಎನ್.ಜಿ.ಒ), ಮುತೂಟ್ ಫಿನಾನ್ಸ್, ಈಶ ಮೋಟಾರ್ಸ್ ಹಾಗೂ ಯುರೇಖಾ ಪೋಬ್ರ್ಸ್ ಖಾಸಗಿ ಕಂಪೆನಿಗಳು ಭಾಗವಹಿಸಲಿವೆ.
ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ, ಫೈರ್ ಮತ್ತು ಸೇಪ್ಟಿ ಹಾಗೂ ಹೋಟೆಲ್ ಪದವಿ ಸೇರಿದಂತೆ ಯಾವುದೇ ಪದವಿ ತೇರ್ಗಡೆಯಾದ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಹಾಜರಾಗಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel