ಜಲ ವಿದ್ಯುತ್ ನಿಗಮದ ಹುದ್ದೆಗಳಿಗೆ ಅರ್ಜಿ ಆಹ್ವಾನ

Advertisement
Advertisement

ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 105 ಜೂನಿಯರ್ ಫೀಲ್ಡ್​ ಎಂಜಿನಿಯರ್, ಜೂನಿಯರ್ ಫೀಲ್ಡ್​ ಆಫೀಸರ್ ಹುದ್ದೆಗಳು ಖಾಲಿ ಇದೆ. ಆಸಕ್ತರು ಅರ್ಜಿ ಹಾಕಬಹುದು. ಅರ್ಜಿ ಸಲ್ಲಿಸಲು ಫೆಬ್ರವರಿ 12, 2023 ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್​(Online) ಮೂಲಕ ಅರ್ಜಿ ಸಲ್ಲಿಸಬಹುದು.

Advertisement

ಜೂನಿಯರ್ ಫೀಲ್ಡ್ ಎಂಜಿನಿಯರ್- 85, ಜೂನಿಯರ್ ಫೀಲ್ಡ್ ಆಫೀಸರ್- 20 ಹುದ್ದಗೆಳು ಖಾಲಿ ಇದ್ದು, ಜೂನಿಯರ್ ಫೀಲ್ಡ್ ಎಂಜಿನಿಯರ್ ಹುದ್ದೆಗೆ ಸಿವಿಲ್/ ಎಲೆಕ್ಟ್ರಿಕಲ್/ ಮೆಕ್ಯಾನಿಕಲ್ ಎಂಜಿನಿಯರಿಂಗ್​ನಲ್ಲಿ ಡಿಪ್ಲೋಮಾ ಆಗಿರಬೇಕು ಹಾಗೂ ಜೂನಿಯರ್ ಫೀಲ್ಡ್ ಆಫೀಸರ್ ಹುದ್ದೆಗೆ ಸಿಎ/ ICWA (ಇಂಟರ್), CMA (ಇಂಟರ್), ಪದವಿ, ಸ್ನಾತಕೋತ್ತರ ಪದವಿ ಆಗಿರಬೇಕು.

Advertisement
Advertisement

ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 12, 2023ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು. ವೇತನ ಮಾಸಿಕ 45,000 ರೂ ಆಗಿದ್ದು,  ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ಮಾಡಲು ಸಿದ್ಧರಿರಬೇಕು.

ಅರ್ಜಿ ಶುಲ್ಕ: SC/ST/PWD ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ, ಉಳಿದ ಎಲ್ಲಾ ಅಭ್ಯರ್ಥಿಗಳಿಗೆ- 300 ರೂ. ಪಾವತಿಸುವ ಬಗೆ- ಆನ್​ಲೈನ್​

Advertisement
Advertisement

ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ಸಂದರ್ಶನ. ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23/01/2023 , ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 12, 2023

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಜಲ ವಿದ್ಯುತ್ ನಿಗಮದ ಹುದ್ದೆಗಳಿಗೆ ಅರ್ಜಿ ಆಹ್ವಾನ"

Leave a comment

Your email address will not be published.


*