ಜೋಗ ಜಲಪಾತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮುಕ್ತಾಯ | ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶ | ಜೋಗ ಇನ್ನು ಮತ್ತಷ್ಟು ಆಕರ್ಷಕ |

May 1, 2025
7:38 AM

ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ  ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರ  ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ  ಆದ್ಯತೆ ನೀಡಿದೆ. ಪ್ರವಾಸೋದ್ಯಮ ಇಲಾಖೆ, ಶಿವಮೊಗ್ಗ  ಜಿಲ್ಲಾಡಳಿತ, ಜೋಗ ಅಭಿವೃದ್ಧಿ ಪ್ರಾಧಿಕಾರ ಜೊತೆಯಾಗಿ  ಸುಮಾರು 180 ಕೋಟಿ ರೂಪಾಯಿಗೂ ಅಧಿಕ  ವೆಚ್ಚದಲ್ಲಿ  ವಿವಿಧ ಕಾಮಗಾರಿಗಳನ್ನು  ಕೈಗೆತ್ತಿಕೊಂಡಿದ್ದು, ಅಂತಿಮ  ಹಂತದಲ್ಲಿದೆ. ಕಾಮಗಾರಿ ಹಿನ್ನೆಲೆಯಲ್ಲಿ  ತಾತ್ಕಾಲಿಕವಾಗಿ  ಪ್ರವಾಸಿಗರಿಗೆ  ವಿಧಿಸಿದ್ದ ನಿರ್ಬಂಧ   ಮುಕ್ತಾಯವಾಗಿದ್ದು,  ಮತ್ತೆ ಪ್ರವಾಸಿಗರ ಭೇಟಿಗೆ  ಅವಕಾಶ ಮಾಡಿಕೊಡಲಾಗಿದೆ.…..ಮುಂದೆ ಓದಿ….

180 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ  ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು  ಕೈಗೆತ್ತಿಕೊಂಡಿದ್ದು, ಶೇಕಡ 60ಕ್ಕೂ ಅಧಿಕ  ಭಾಗದ ಕಾಮಗಾರಿ  ಪೂರ್ಣಗೊಂಡಿದೆ. ಮಳೆಗಾಲ ಆರಂಭವಾಗುವುದಕ್ಕೂ ಮುನ್ನ  ಕಾಮಗಾರಿಯನ್ನು ಪೂರ್ಣಗೊಳಿಸಿದರೆ  ಪ್ರವಾಸಿಗರಿಗೆ  ಮತ್ತುಷ್ಟು ಅನುಕೂಲವಾಗಲಿದೆ ಎನ್ನುತ್ತಾರೆ ಸ್ಥಳೀಯರಾದ  ಸಂತೋಷ್ ಕುಮಾರ್.

ಜೋಗ ಜಲಪಾತವನ್ನು ಸರ್ವ ಋತುವಿನಲ್ಲೂ  ಪ್ರಮುಖ  ಪ್ರವಾಸಿ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ  ರಾಜ್ಯ ಸರ್ಕಾರ  ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಇದರಿಂದ ಮುಂದಿನ ದಿನಗಳಲ್ಲಿ  ಪ್ರವಾಸಿಗರ ಸಂಖ್ಯೆಯೂ  ಹೆಚ್ಚಾಗಲಿದೆ  ಎನ್ನುತ್ತಾರೆ ಸ್ಥಳೀಯರಾದ  ರಾಧಾಕೃಷ್ಣ.

 

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಆರೋಗ್ಯ ಸಂಶೋಧನೆಗೆ ಅಪಾರ ಅವಕಾಶ – ಕೋಕೋ ಕೃಷಿಯಲ್ಲೂ ಭಾರತಕ್ಕೆ ಭವಿಷ್ಯ – ಡಾ. ಬಾಲಚಂದ್ರ ಹೆಬ್ಬಾರ್
October 28, 2026
7:18 AM
by: ದ ರೂರಲ್ ಮಿರರ್.ಕಾಂ
ಮಾನವ–ಕಾಡಾನೆ ಸಂಘರ್ಷ ತಡೆಗೆ ಹೊಸ ಯೋಜನೆಗಳು
October 28, 2026
7:06 AM
by: ದ ರೂರಲ್ ಮಿರರ್.ಕಾಂ
ಅಡಿಕೆಯೊಂದನ್ನೇ ನಂಬಬೇಡಿ, ಮಿಶ್ರ ಬೆಳೆ ಪದ್ಧತಿಗೆ ಆದ್ಯತೆ ನೀಡಿ – ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ
October 27, 2026
12:50 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 27-10-2026 | ಮತ್ತೊಂದು ವಾಯುಭಾರ ಕುಸಿತದ ಸಾಧ್ಯತೆ..?
October 27, 2026
12:19 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror