ಗ್ರಾಮೀಣ ಭಾರತ | ಅನಾರೋಗ್ಯಕ್ಕೆ ತುತ್ತಾದ ಮಹಿಳೆಯನ್ನು ಬಡಿಗೆ ಕಟ್ಟಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದರು…! | ಮತ್ತೊಂದು ಕರುಣಾಜನಕ ಕತೆ |

August 20, 2022
1:24 PM

ಗ್ರಾಮೀಣ ಭಾರತ. ಸ್ವಾತಂತ್ರ್ಯ ಅಮೃತಮಹೋತ್ಸವ ಸಂಭ್ರಮ. ಈ ಸಂಭ್ರಮದ ನಡುವೆಯೇ ಗ್ರಾಮೀಣ ಭಾರತದ ಇನ್ನೊಂದು ಕತೆ ಹೊರಬಂದಿದೆ. 70 ವರ್ಷದ ಮಹಿಳೆಯೊಬ್ಬರನ್ನು ಅನಾರೋಗ್ಯದ ಕಾರಣದಿಂದ ಬಟ್ಟೆ ಕಟ್ಟಿ ಬಡಿಗೆಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಘಟನೆ ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬದಿಂದ ಕೇಳಿಬಂದಿದೆ.

Advertisement

ಗ್ರಾಮೀಣ ಭಾರತ ಇನ್ನೂ ಸಂಪರ್ಕ ವ್ಯವಸ್ಥೆಯನ್ನು ಸಾಧಿಸಿಲ್ಲ ಎಂದರೆ ನಂಬಬೇಕು. ಅದು ಮನುಷ್ಯದ ಮೂಲಭೂತ ಆವಶ್ಯಕತೆಗಳಾದ ರಸ್ತೆ ಸೇರಿದಂತೆ ಇಂದಿನ ಆವಶ್ಯಕತೆಯಾದ ಸೇತುವೆ, ನೆಟ್ವರ್ಕ್‌ ವ್ಯವಸ್ಥೆಗಳ ಕೊರತೆ ಎದುರಿಸುತ್ತಿದೆ. ಸುಳ್ಯದ ಹಲವು ಕಡೆ ಇಂತಹದ್ದೇ ಸಮಸ್ಯೆ ಇದೆ, ಈಗ ಬೆಳಕಿಗೆ ಬಂದಿರುವ ಇನ್ನೊಂದು ಘಟನೆ ಕಡಬತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯ ಕಲ್ಲುಗುಡ್ಡೆ ಸಮೀಪದ ಬಳ್ಳಕ್ಕ ಎಂಬಲ್ಲಿಂದ.

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯ ಕಲ್ಲುಗುಡ್ಡೆ ಸಮೀಪದ ಬಳ್ಳಕ್ಕ ಎಂಬಲ್ಲಿ ಆ.19 ರಂದು ಈ ಘಟನೆ ನಡೆದಿದೆ. 70ವರ್ಷದ ಮಹಿಳೆಯೊಬ್ಬರು ಕಾಲು ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಎಂಜಿರ ಮೂಲಕ ಉಪ್ಪಿನಂಗಡಿಗೆ ತುರ್ತಾಗಿ ಕರೆದೊಯ್ಯಬೇಕಿತ್ತು. ಆದರೆ ರಸ್ತೆ ಇದ್ದರೂ ಅಭಿವೃದ್ದಿ ಕಾರಣ ಹಿನ್ನೆಲೆಯಲ್ಲಿ ವಾಹನ ಓಡಾಟ ಕಷ್ಟಕರವಾಗಿತ್ತು. ಹೀಗಾಗಿ ಕುಟುಂಬಸ್ಥರು ಮರದ ಬಡಿಗೆಗೆ ಬಟ್ಟೆಯೊಂದನ್ನು ಕಟ್ಟಿ ಅದರಲ್ಲಿ ಮಹಿಳೆಯನ್ನು ಕುಳ್ಳಿರಿಸಿ ಎಂಜಿರ ಮುಖ್ಯ ರಸ್ತೆಗೆ ತಲುಪಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗಿದೆ.

ನೂಜಿಬಾಳ್ತಿಲ-ಕೊಣಾಜೆ ಗ್ರಾಮವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ಈ ಭಾಗದ ಜನರಿಗೆ ಎಂಜಿರ ಹತ್ತಿರದ ಪೇಟೆಯಾಗಿದೆ. ಇತ್ತೀಚೆಗೆ ಸುರಿದ ಮಹಾ ಮಳೆಗೆ ಈ ರಸ್ತೆ ಕೆಸರುಮಯವಾದ ಕಾರಣ ಈ ಭಾಗದ ಜನ ತಮ್ಮ ವಾಹನಗಳನ್ನು ಅರ್ಧ ದಾರಿಯಲ್ಲೇ ನಿಲ್ಲಿಸಿ ಕಿ.ಮೀ ಗಟ್ಟಲೆ ನಡೆದುಕೊಂಡು ಹೋಗಿ ಮನೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ರಸ್ತೆ ಅಭಿವೃದ್ಧಿಗೆ ಹಲವು ವರ್ಷಗಳಿಂದ ಸ್ಥಳೀಯ ಪಂಚಾಯತ್‌ ಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಲೇ ಇದ್ದಾರೆ ಇಲ್ಲಿಯ ಜನರು. ಆದರೆ ಚುನಾವಣೆ ಸಮಯದ ಭರವಸೆಗಳ ಬಳಿಕ ಎಲ್ಲವೂ ನೆನಪಿನ ಪುಟಕ್ಕೆ ಸೇರುತ್ತಿತ್ತು. ಇದೀಗ ಜನರು ಸಂಕಟ ಪಡುವಂತಾಗಿದೆ.

ಸುಳ್ಯವಿಧಾನಸಭಾ ಕ್ಷೇತ್ರದಲ್ಲಿ ಒಂದು ಮಾತಿದೆ, ಆದ ಕೆಲಸ ಹೇಳಬೇಕು, ಮಾಧ್ಯಮಗಳೂ ಅದನ್ನೇ ವರದಿ ಮಾಡಿ ನಂತರ ಆಗಬೇಕಾದ ಕೆಲಸಗಳನ್ನು ಹೇಳಬೇಕು. ಈಚೆಗೆ ಕಲ್ಮಕಾರು ಪ್ರದೇಶದ ಉಪ್ಪುಕಳದ ಬಳಿ ಸೇತುವೆಯೊಂದು ಕೊಚ್ಚಿ ಹೋದ ಸಂದರ್ಭ ವೈರಲ್‌ ಆದ ವಿಡಿಯೋ ಬಳಿಕ ಇಂತಹ ಹೇಳಿಕೆಗಳು ಕೆಲವು ಜನಪ್ರತಿನಿಧಿಗಳಿಂದ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ, ಮತದಾನ ಬಹಿಷ್ಕಾರ ಮಾಡಿದರೂ ಆಗದು, ಹೇಳಿದರೂ ಆಗದು, ಹೇಳದಿದ್ದರೂ ಆಗದು, ಮನವಿ ಮಾಡಿದರೂ ಆಗದು, ಮನವಿ ಮಾಡಿದರೂ ಆಗದು…! ಆದರೆ ಚುನಾವಣೆ ಸಮಯದಲ್ಲಿ ಓಟು ಮಾತ್ರಾ ಹಾಕಬೇಕು.. ಹೀಗೆಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಆಗುವುದಕ್ಕೆ ಆರಂಭವಾಗಿದೆ. ಇದೀಗ ಮಾಧ್ಯಮಗಳ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ಮತ್ತೆ ಗ್ರಾಮೀಣ ಭಾರತದ ಇನ್ನೊಂದು ಕತೆ ಹೊರಬಂದಿದೆ. ಆಡಳಿತಗಳು ಸ್ಪಂದಿಸಿಯಾವೇ ? ಈಗ ಇಂತಹ ಪ್ರಶ್ನೆಗಳು ಮಾತ್ರವೇ ಕೇಳಿವೆ. ಏಕೆಂದರೆ ಮಾಧ್ಯಮಗಳಲ್ಲಿ  ಬಂದರೆ ಆಗುತ್ತದೆಯೇ ? ಅವರೇ ಮಾಡಲಿ ..!, ವಾಟ್ಸಪ್‌ ಲಿ ಹಾಕಿದ್ರೆ ಆಗುತ್ತದಾ ? ಅವರೇ ಮಾಡಲಿ…! ಹೀಗೆಲ್ಲಾ ಪ್ರಶ್ನೆಗಳು ಬರುತ್ತದೆ.. ಅಷ್ಟೇ ಅಲ್ಲ, ಈಚೆಗೆ ಸುಳ್ಯದ ರಸ್ತೆ ಸಮಸ್ಯೆ ಬಗ್ಗೆ ಜಾಗೃತಿ ಮಾಡಿರುವ ಯುವಕನ ಮೇಲೆಯೇ ಪೊಲೀಸ್‌ ದೂರು ಆಗಿರುವುದು ಬಿಸಿ ಬಿಸಿಯಾಗಿದೆ.

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |
May 13, 2025
7:20 AM
by: ದ ರೂರಲ್ ಮಿರರ್.ಕಾಂ
ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ
May 13, 2025
6:53 AM
by: ದ ರೂರಲ್ ಮಿರರ್.ಕಾಂ
ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ
May 12, 2025
2:17 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group