ಕಾಳಸರ್ಪ ‘ಯೋಗಾಯೋಗ : ಜ್ಯೋತಿಷ್ಯ ಶಾಸ್ತ್ರ, ಮನೋವಿಜ್ಞಾನಿಗಳು ಹೇಳುವುದು ಒಂದೇ : ಭಯಪೀಡಿತರಾಗ ಬೇಡಿ

March 18, 2024
12:12 PM

ಜಾತಕದಲ್ಲಿರೋ(Forecast) ಅದೆಷ್ಟೋ ಯೋಗಗಳಲ್ಲಿ ಕಾಳಸರ್ಪ(Kalasarpa) ಯೋಗವೂ ಒಂದು. ಕಾಲ ಎಂದರೆ ಸಾವು(Death). ಸರ್ಪ ಎಂದರೆ ಹಾವು(Snake). ಕಾಲವನ್ನು ಸಮಯ(Time) ಅಂತಾನೂ ಗುರುತಿಸಬಹುದು. ಸರ್ಪ ಅಂದ್ರೆ ಭಯ(Afraid). ಅಂದ್ರೆ ಭಯದ ಕಾಲ ಅಂತಾನೂ ಅರ್ಥೈಸಿಕೊಳ್ಳಬಹುದು. ಭಯಪೀಡಿತ ವ್ಯಕ್ತಿ ಮಾನಸಿಕವಾಗಿ(Mental) ಅಸ್ವಸ್ಥನಾಗ್ತಾನೆ. ಇನ್ನಿಲ್ಲದ ತೊಂದರೆಗೆ ಸಿಕ್ಕಿ ಹಾಕೊಳ್ತಾನೇ ಅನ್ನೋದು ಜ್ಯೋತಿಷ್ಯ ಶಾಸ್ತ್ರದ ಅಂಬೋಣ. ಮನೋವಿಜ್ಞಾನಿಗಳು(Psychiatrist), ಈ ಅಂಶವನ್ನೇ ಹೇಳ್ತಾರೆ. ಎಲ್ಲಿಯವರೆಗೆ ನೀವು ಭಯಪೀಡಿತರಾಗಿರ್ತೀರೋ ಅಲ್ಲಿಯವರೆಗೆ ರೋಗಗಳು(Disease) ನಿಮ್ಮನ್ನು ಕಾಡುತ್ತವೆ ಅಂತ. ವೈಜ್ಞಾನಿಕ ದೃಷ್ಟಿಕೋನದಲ್ಲಿ(A scientific perspective) ಹೇಳೋದಾದ್ರೆ ಕಾಳಸರ್ಪ ಯೋಗ ಅನ್ನೋದು ಮನಸ್ಸಿನ ಭೀತಿಗೆ ಸಂಬಂಧಿಸಿದ್ದು.

ಭಾರತೀಯ ಜ್ಯೋತಿಷ್ಯಶಾಸ್ತ್ರದಲ್ಲಿ, ರಾಹು ಮತ್ತು ಕೇತುವನ್ನು ಸರ್ಪಕ್ಕೆ ಹೋಲಿಸಿದ್ದಾರೆ. ಹಾಗಾಗಿ ಜಾತಕದಲ್ಲಿ ರಾಹು ಇರುವ ಸ್ಥಾನವನ್ನು ಸರ್ಪದ ಶಿರೋಭಾಗವೆಂತಲೂ, ಕೇತುವಿನ, ಸ್ಥಾನವನ್ನು ಸರ್ಪದ ಬಾಲದ ತುದಿಗೂ ಹೋಲಿಸುತ್ತಾರೆ. ಸರ್ಪದ ತಲೆ ಮತ್ತು ಬಾಲದ ನಡುವೆ ಇನ್ನುಳಿದ ಗ್ರಹಗಳು {ರವಿ, ಸೋಮ, ಕುಜ, ಶುಕ್ರ, ಬುಧ, ಗುರು, ಶನಿ} ಇದ್ದರೆ ಆ ಯೋಗವನ್ನು ಕಾಳಸರ್ಪ ಯೋಗವೆನ್ನುತ್ತಾರೆ. ಅಂತಹ ಯೋಗದಲ್ಲಿ ಜನಿಸಿದವರು ಸಾಕಷ್ಟು ಕಷ್ಟ, ನಷ್ಟಗಳನ್ನು ಅನುಭವಿಸುತ್ತಾರೆ ಎನ್ನುವ ನಂಬಿಕೆಯಿದೆ. ಕೆಲವರಂತೂ ಕಾಳಸರ್ಪ ಯೋಗವನ್ನು ದೋಷಕ್ಕೆ ಹೋಲಿಸುತ್ತಾರೆ. ಕಾಳಸರ್ಪ ದೋಷದಿಂದ ವಿಮುಕ್ತಿ ಹೊಂದಲು ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡಬೇಕೆಂಬುದು ಕೆಲವರ ಅಭಿಪ್ರಾಯ. ಮತ್ತೆ ಕೆಲವರು ಕಾಳಸರ್ಪ ದೋಷ ಪರಿಹಾರಕ್ಕಾಗಿ ಕಾಳಸರ್ಪ ಯಂತ್ರವನ್ನು ಮನೆಯೊಳಗಿಟ್ಟು ಪೂಜಿಸುವುದುಂಟು. ಅದರಿಂದಾಗಿ, ಸಕಾರಾತ್ಮಕಪರಿಣಾಮಗಳು ಉಂಟಾಗುತ್ತವೆ ಎನ್ನುವ ನಂಬಿಕೆಯಿದೆ.

Advertisement
Advertisement

ಆದರೆ ಗ್ರಹಗಳ ಚಲನೆ ಒಂದುರಾಶಿಯಿಂದಮತ್ತೊಂದು ರಾಶಿಗೆನಿರಂತರವಾಗಿನಡೆಯುತ್ತಲೇ ಇರುತ್ತವೆ. ಹಾಗಾಗಿಜಾತಕನ ಗ್ರಹಕೂಟದಲ್ಲಿರಾಹು,ಕೇತುಗಳ ಸ್ಥಾನದಲ್ಲಿಬದಲಾವಣೆಯಾಗುತ್ತಲೇ ಇರುತ್ತದೆ. ಹಾಗಾಗಿ ಕಾಳಸರ್ಪ ದೋಷವಿದ್ದರೂ ಮನುಷ್ಯನ ಸ್ವಭಾವದ ಮೇಲಾಗುವ ಪರಿಣಾಮಗಳು ಬೇರೆಯಾಗೇ ಇರುತ್ತವೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಒಂದೊಮ್ಮೆ ನಿಮ್ಮ ಜಾತಕದಲ್ಲಿ ಕಾಳಸರ್ಪ ಯೋಗವಿದ್ರೂ ಹೆದರಿಕೊಳ್ಳೋ ಅವಶ್ಯಕತೆ ಇಲ್ಲ. ಜನ್ಮ ಕುಂಡಲಿಯಲ್ಲಿ ರಾಹು ಮತ್ತು ಕೇತುವಿನ ಸ್ಥಾನಕ್ಕೆ ಅನುಗುಣವಾಗಿ ಕಾಳಸರ್ಪ ಯೋಗವನ್ನು ಏಳುಭಾಗಗಳಾಗಿ ವಿಂಗಡಿಸಲಾಗಿದೆ. ಅದರ ಆಧಾರದಮೇಲೆಜ್ಯೋತಿಷಿಗಳು ಜಾತಕನ ಫಲವನ್ನುಹೇಳುತ್ತಾರೆ.

Advertisement

ಏಳು ಬಗೆಯ ಕಾಳಸರ್ಪ ಯೋಗಗಳೆಂದರೆ,
ಅನಂತ, ಕಾಳಿಕಾ, ವಾಸುಕಿ, ಶಂಖಪಾಲ, ಪದ್ಮ, ಮಹಾಪದ್ಮ ಮತ್ತು ತಕ್ಷಕ⚡ ವೈಜ್ಞಾನಿಕ ದೃಷ್ಟಿಕೋನದಲ್ಲಿ ಹೇಳುವುದಾದರೆ ರಾಹು ಸಂಬಂಧಿತ ಆಹಾರ ಅಂದರೆ ಉದ್ದು. ಅದರ ಸೇವನೆಯನ್ನು ಹೆಚ್ಚಾಗಿ ಮಾಡುವುದರಿಂದ ಶರೀರದಲ್ಲಿ ಟಾಕ್ಸಿಕ್‌ಅಂಶ ಹೆಚ್ಚುತ್ತದೆ. ವಾತದೋಷ ಉಂಟಾಗುತ್ತದೆ. ದೋಷದ ಕಾರಣ ವಾಯು ನೋವು ಮತ್ತಿತರ ಸಮಸ್ಯೆಗಳು ಕಾಣಬಹುದು. ಆ ಕಾರಣ ಮನೋ ನಿಯಂತ್ರಣ ಮಾಡಿಕೊಳ್ಳಬೇಕು.ಧ್ಯಾನ, ಪ್ರಾಣಾಯಾಮ ಕ್ರಿಯೆಗಳಲ್ಲಿ ತೊಡಗಿಸಿಕೊಂಡು ದೇಹವನ್ನು ಶಿಸ್ತುಬದ್ಧವಾಗಿಇಟ್ಟುಕೊಳ್ಳಬೇಕು. ಆಗ ಕಾಳಸರ್ಪ ದೋಷ ಕುರಿತಂತೆ ಅನಗತ್ಯವಾಗಿ ಭಯ ಪಡುವ ಅಗತ್ಯವಿಲ್ಲ.

ಅನಂತ ಕಾಳಸರ್ಪ
ಲಗ್ನದಲ್ಲಿ ರಾಹುವಿದ್ದು ಕೇತು ಏಳನೆಯ ಮನೆಯಲ್ಲಿದ್ದರೆ ಜಾತಕನಿಗೆ ಅನಂತ ಕಾಳಸರ್ಪ ಯೋಗವಿರುತ್ತದೆ. ಅಂತಹ ಜಾತಕನು ವೃಥಾ ಅಪವಾದಕ್ಕೆ ಗುರಿಯಾಗುತ್ತಾನೆ. ಕೋರ್ಟು, ಕಚೇರಿ ವ್ಯವಹಾರಗಳಲ್ಲಿ ತೊಂದರೆ ಅನುಭವಿಸುತ್ತಾನೆ ಎನ್ನಲಾಗುತ್ತದೆ.
ಕಾಳಿಕಾ ಕಾಳಸರ್ಪ
ರಾಹು ಲಗ್ನದಿಂದ ಎರಡನೆಯ ಮನೆಯಲ್ಲಿದ್ದು, ಕೇತು ಎಂಟನೆಯ ಮನೆಯಲ್ಲಿದ್ದರೆ ಕಾಳಿಕಾ ಕಾಳಸರ್ಪ ಯೋಗ ಉಂಟಾಗುತ್ತದೆ. ಅಂತಹ ಯೋಗವಿರುವ ಜಾತಕನು ಆರ್ಥಿಕ ಸಮಸ್ಯೆಗಳಲ್ಲಿ ಬಳಲುವ ಸಾಧ್ಯತೆ ಹೆಚ್ಚು.
ವಾಸುಕಿ ಕಾಳಸರ್ಪ
ರಾಹು ಲಗ್ನದಿಂದ ಮೂರನೆಯ ಮನೆಯಲ್ಲಿದ್ದು ಕೇತು ಒಂಬತ್ತನೆಯ ಮನೆಯಲ್ಲಿದ್ದರೆ ವಾಸುಕಿ ಕಾಳಸರ್ಪ ಯೋಗ ಉಂಟಾಗುತ್ತದೆ. ಅಂತಹ ವ್ಯಕ್ತಿಗಳಿಗೆಕಳತ್ರದೋಷವಿರುತ್ತದೆ, ಎನ್ನಲಾಗುತ್ತದೆ. ಕೋರ್ಟಿನ ವ್ಯವಹಾರಗಳು ಅವರ ಪರವಾಗಿ ಆಗುವುದು ಕಡಿಮೆ.

ಶಂಖಪಾಲ ಕಾಳಸರ್ಪ
ಲಗ್ನದಿಂದ ರಾಹು ನಾಲ್ಕನೆಯ ಮನೆಯಲ್ಲಿದ್ದು ಕೇತು 10ನೇ ಮನೆಯಲ್ಲಿದ್ದರೆ ಶಂಖಪಾಲ ಕಾಳಸರ್ಪ ಯೋಗವಿರುತ್ತದೆ. ಈ ಯೋಗದ ಜಾತಕನು ಸ್ವಯಂಕೃತಾಪರಾಧಕ್ಕೆ ಒಳಗಾಗಿ ತಾನೇ ಸಂಕಷ್ಟಕ್ಕೆ ಗುರಿಯಾಗುತ್ತಾನೆ. ಅದರಲ್ಲೂ ಆಸ್ತಿ, ಭೂ ವಿವಾದಗಳಲ್ಲಿ ತೊಂದರೆಹೆಚ್ಚು.ಆರ್ಥಿಕವಾಗಿಯೂ, ಸಾಕಷ್ಟು ತೊಂದರೆಗಳಿಗೆ ತುತ್ತಾಗುತ್ತಾನೆಎಂದುಜ್ಯೋತಿಷಿಗಳು, ಅಭಿಪ್ರಾಯಿಸುತ್ತಾರೆ.
ಪದ್ಮ ಕಾಳಸರ್ಪ
ಲಗ್ನದಿಂದ ಐದನೆಯ ಮನೆಯಲ್ಲಿ ರಾಹುವಿದ್ದು ಕೇತು 11ನೇ ಮನೆಯಲ್ಲಿದ್ದರೆ ಪದ್ಮ ಕಾಳಸರ್ಪಯೋಗಉಂಟಾಗುತ್ತದೆ. ಅಂತಹವರನ್ನುಅನುವಂಶಿಕ ಅಥವಾ ಸಂತಾನ ದೋಷ ಕಾಡುವ ಸಾಧ್ಯತೆ ಹೆಚ್ಚು.
ಮಹಾಪದ್ಮಕಾಳಸರ್ಪ
ಲಗ್ನ ಭಾವದಿಂದ ರಾಹು ಆರನೆಯ ಮನೆಯಲ್ಲಿದ್ದು ಕೇತು 12ನೇ ಮನೆಯಲ್ಲಿದ್ದರೆ ಮಹಾಪದ್ಮ ಕಾಳಸರ್ಪ ಯೋಗ ಉಂಟಾಗುತ್ತದೆ.ಈಯೋಗವಿರುವವರುಪದೇಪದೇವೈಪಲ್ಯವನ್ನು ಎದುರಿಸುತ್ತಾರೆ.

ತಕ್ಷಕ ಕಾಳಸರ್ಪ
ಲಗ್ನ ಭಾವದಿಂದ ರಾಹು ಏಳನೆಯ ಮನೆಯಲ್ಲಿದ್ದು ಕೇತು ಒಂದನೇ ಮನೆಯಲ್ಲಿದ್ದರೆ ತಕ್ಷ ಕ ಕಾಳಸರ್ಪಯೋಗಉಂಟಾಗುತ್ತದೆ.ಅಂತಹವರುವೃಥಾಅಪವಾದಗಳಿಗೆ ಸಿಲುಕುತ್ತಾರೆ.ವ್ಯಾಪಾರ ಮತ್ತು ಸಂಬಂಧಗಳಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.
ಸರ್ಪಶಾಪ 
ಕುಜನ ಮನೆ ಪಂಚಮ ಭಾವವಾಗಿ ಅಲ್ಲಿ ರಾಹುವಿದ್ದು , ಕುಜನ ದೃಷ್ಟಿಯಿದ್ದರೆ ಸರ್ಪ ಶಾಪದಿಂದ ಸಂತಾನ ವಿಳಂಬವಾಗಿರುತ್ತದೆ.
- ಗುರುವು ರಾಹುಜೊತೆಗಿದ್ದು, ಪಂಚಮಾಧಿಪತಿಬಲಹೀನನಾಗಿಲಗ್ನಾಧಿಪತಿಯು ಕುಜನು ಜೊತೆಗಿದ್ದರೆ ಸರ್ಪ ಶಾಪದಿಂದ ಸಂತಾನವಿಳಂಬವಾಗಿರುತ್ತದೆ,
- ಪಂಚಮ ಭಾವವು ಬಲಹೀನವಾಗಿ,ರಾಹುಕೇತುಗಳ ದೃಷ್ಟಿಗೆ ಒಳಗಾಗಿದ್ದರೆ ಸರ್ಪ ಶಾಪದಿಂದ ಸಂತಾನ ವಿಳಂಬವಾಗಿರುತ್ತದೆ,
- ಪಂಚಮಾಧಿಪತಿಬಲಹೀನನಾಗಿ ರಾಹು ಕೇತುಗಳ ಜೊತೆ ಅಥವಾ ದೃಷ್ಟಿಗೊಳಗಾಗಿದ್ದರೆ ಸರ್ಪ ಶಾಪದಿಂದ ಸಂತಾನ ವಿಳಂಬವಾಗಿರುತ್ತದೆ,
- ಪಂಚಮ ಸ್ಥಾನ ಮೇಷ, ವೃಶ್ಚಿಕವಾಗಿ ಕುಜನು ರಾಹು, ಕೇತುಗಳ ಜೊತೆಗಿದ್ದು ಬುಧನ ಸಂಬಂಧ ಹೊಂದಿದ್ದರೇ ಸರ್ಪ ಶಾಪದಿಂದ ಸಂತಾನ ವಿಳಂಬವಾಗಿರುತ್ತದೆ.,
ಈ ರೀತಿ ಜಾತಕ ಹೊಂದಿರುವ ವ್ಯಕ್ತಿಗಳು, ಧಾರ್ಮಿಕ ಆಚರಣೆ ಮಾಡುವುದರ ಮೂಲಕ, ಹಾಗೂ, ಸರ್ಪ ಸಮಸ್ಕಾರ, ಸರ್ಪ ಶಾಂತಿ, ಆಶ್ಲೇಷ ಬಲಿ ಪೂಜೆ, ನಾಗ ಪ್ರತಿಷ್ಠೆ,{ ಕುಜ{ ಕೇತು } ರಾಹು ಶಾಂತಿ
ಈ ರೀತಿಯಾಗಿರುವ, ಶಾಂತಿಗಳನ್ನು ಮಾಡಿಸಿಕೊಂಡರೆ ಉತ್ತಮ,
ಕರ್ನಾಟಕದಲ್ಲ,{3}ದೇವಸ್ಥಾನಗಳಿವೆ,
01, ಆದಿ ಸುಬ್ರಹ್ಮಣ್ಯ, ಕುಕ್ಕೆ ಸುಬ್ರಹ್ಮಣ್ಯ,
02, ಮಧ್ಯ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ { ದೊಡ್ಡಬಳ್ಳಾಪುರ }
03🌹, ಅಂತ್ಯ ಸುಬ್ರಹ್ಮಣ್ಯ, ನಾಗಲಮಡಕ್ಕೆ { ತುಮಕೂರು ಜಿಲ್ಲೆ ಪಾವಗಡದ ಹತ್ತಿರ }
ಈ ಕ್ಷೇತ್ರಗಳಲ್ಲಿ ಸತ್ಪಾತ್ರರಾದ ಪುರೋಹಿತರಿಂದ ಮಾಡಿಸುವುದು ಸೂಕ್ತ 

ಬರಹ - L ವಿವೇಕಾನಂದ ಆಚಾರ್ಯ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಭಾರತ ಬದ್ಧವಾಗಿದೆ
September 14, 2024
2:25 PM
by: ದ ರೂರಲ್ ಮಿರರ್.ಕಾಂ
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ | ಕೇಂದ್ರ ಸಚಿವ ಸಂಪುಟ ಅನುಮೋದನೆ
September 14, 2024
12:16 PM
by: ದ ರೂರಲ್ ಮಿರರ್.ಕಾಂ
ಹಬ್ಬದ ಸಮಯದಲ್ಲಿ ಆಹಾರ ಕಲಬೆರಕೆಯಾಗದಂತೆ ತಪಾಸಣೆಗೆ ಸೂಚನೆ
September 14, 2024
11:50 AM
by: ದ ರೂರಲ್ ಮಿರರ್.ಕಾಂ
ಹಸಿರು ಜಲಜನಕ – 2024 ಅಂತಾರಾಷ್ಟ್ರೀಯ ಸಮಾವೇಶ | ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡಲು ಗುರಿ
September 13, 2024
9:57 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror