ಈಗ ಹಲಸು ಮೇಳದ ಹವಾ. ಎಲ್ಲಾ ಕಡೆಯೂ ಹಲಸು ಮೇಳ ನಡೆಯುತ್ತದೆ. ಕೆಲವು ಕಡೆ ಅದೇ ಒಂದು ಉದ್ಯಮ. ಮಳೆಗಾಲ – ಹಲಸು ಆರಂಭವಾದ ತಕ್ಷಣವೇ ಒಂದು ಮೇಳ..!. ಆದರೆ ಇದೊಂದು ಮೇಳ ಹಾಗಲ್ಲ, ರೈತರ ಉತ್ಪನ್ನಗಳಿಗೆ ನಗರದಲ್ಲಿ ವೇದಿಕೆ ನೀಡುವ, ಜಾಗ ನೀಡುವ, ಮಾನ ನೀಡುವ ವೇದಿಕೆ.ಅದೂ ಮಂಗಳೂರಿನ ಪ್ರಮುಖವಾದ ಸ್ಥಳದಲ್ಲಿ ಉಚಿತವಾಗಿ ವೇದಿಕೆ.ಹೀಗೆ ವೇದಿಕೆ ಸೃಷ್ಟಿ ಮಾಡಿದವರು ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ಸಾವಯವ ಬಳಗ.…… ಮುಂದೆ ಓದಿ……
ಎಸ್.ಪ್ರದೀಪ್ ಕುಮಾರ ಕಲ್ಕೂರ ಅವರ ಅಧ್ಯಕ್ಷತೆಯ ಕಲ್ಕೂರ ಪ್ರತಿಷ್ಠಾನದಡಿ, ಸಾವಯವ ಕೃಷಿಕ ಗ್ರಾಹಕ ಬಳಗದ ಸಹಕಾರದೊಂದಿಗೆ ಮಂಗಳೂರು ನಗರದ ಕದ್ರಿ ಕಂಬಳದ ಮಲ್ಲಿಕಾ ಬಡಾವಣೆಯಲ್ಲಿ ಮಾವು-ಹಲಸು ಮೇಳ ನಡೆದಿತ್ತು. ಎರಡು ದಿನಗಳ ಕಾಲ ನಡೆದ ಈ ಮೇಳದಲ್ಲಿ ನೂರಾರು ಜನರು ಭಾಗವಹಿಸಿದರು. ಕಳೆದ 4-5 ವರ್ಷಗಳಿಂದ ಈ ಮೇಳವನ್ನು ಕಲ್ಕೂರ ಪ್ರತಿಷ್ಠಾನ, ಸಾವಯವ ಕೃಷಿಕ ಗ್ರಾಹಕ ಬಳಗ ನಡೆಸಿಕೊಂಡು ಬರುತ್ತಿದೆ. ಇಷ್ಟೂ ವರ್ಷಗಳಿಂದ ಕದ್ರಿ ಕಂಬಳದ ಮಲ್ಲಿಕಾ ಬಡಾವಣೆಯಲ್ಲಿ ಅಂದರೆ ಪ್ರದೀಪ್ ಕುಮಾರ್ ಕಲ್ಕೂರ ಅವರ ಮನೆಯ ವಠಾರದಲ್ಲಿ ಈ ಮೇಳ ನಡೆಯುತ್ತಿದೆ. ಹಲಸು-ಮಾವು ಮಾರಾಟ ಮಾಡಲು ತುಮಕೂರು ಸೇರಿದಂತೆ ಹಲಸು ಬೆಳೆಯುವ ಪ್ರದೇಶಗಳಿಂದ ರೈತರು ಅಥವಾ ರೈತ ಪ್ರತಿನಿಧಿಗಳು ಬಂದಿದ್ದರು. ಹಲಸಿನ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರು ಅಥವಾ ಉತ್ಪನ್ನ ತಯಾರಕರು ಬಂದಿದ್ದರು. ಸಾವಯವ ಮಾದರಿಯಲ್ಲಿ ಇರಬೇಕು ಎಂಬವುದರಿಂದ ತೊಡಗಿ ಗೃಹೋದ್ಯಮವಾಗಿರಬೇಕು ಎಂಬ ಕೆಲವು ನಿಯಮಗಳಿಗೆ ಒಳಪಟ್ಟವರನ್ನು ಮಾತ್ರವೇ ಆಹ್ವಾನಿಸುತ್ತದೆ ಈ ತಂಡ. ಸುಮಾರು 25 ಮಳಿಗೆಗಳು ಇದ್ದವು. ಹಲಸು ಜಿಲೇಬಿ, ಹೋಳಿಗೆ ಸೇರಿದಂತೆ ವಿವಿಧ ಉತ್ಪನ್ನಗಳು ಮಾರಾಟವಾಗುತ್ತಿದ್ದವು. ವಿವಿಧ ಪ್ರಮುಖರು ಆಗಮಿಸಿ ಉತ್ಪನ್ನಗಳನ್ನು ಖರೀದಿ ಮಾಡುತ್ತಿದ್ದರು.


ಗ್ರಾಮೀಣ ಭಾಗದಲ್ಲಿ ಬಳಕೆಯಾಗದೇ ಹಾಳಾಗುತ್ತಿರುವ ಹಲಸು ಈಚೆಗೆ ಮೌಲ್ಯವರ್ಧನೆಯಾಗುತ್ತಿದೆ. ಅಡಿಕೆ ಪತ್ರಿಕೆಯಂತಹ ಕೃಷಿ ಪತ್ರಿಕೆ ಅಭಿಯಾನದ ರೂಪದಲ್ಲಿ ಹಲಸು ಮೌಲ್ಯವರ್ಧನೆಯ ಬಗ್ಗೆ ಬೆಳಕು ಚೆಲ್ಲಿತು. ಸಾವಯವ ಕೃಷಿ ಬಳಗದಂತಹ ಸಂಸ್ಥೆಗಳು ಅಭಿಯಾನಗಳಿಗೆ ವೇಗ ನೀಡುವುದಕ್ಕೆ ಕಾರಣವಾದರೆ ಕಲ್ಕೂರ ಪ್ರತಿಷ್ಠಾನ, ಪ್ರದೀಪ್ ಕುಮಾರ್ ಅವರಂತಹವರು ವೇದಿಕೆಯನ್ನು ನೀಡಿ, ಉತ್ಪನ್ನಗಳಿಗೆ ನಗರದಲ್ಲಿ ಜಾಗ ನೀಡಿ ತಯಾರಾದ ಉತ್ಪನ್ನಗಳು ಮಾರಾಟವಾಗುವಂತೆ, ನಗರದ ಮಂದಿಗೂ ಹಳ್ಳಿಯ ಉತ್ಪನ್ನಗಳು ತಲಪುವಂತೆ ಮಾಡಿದರು. ಹೀಗಾಗಿ ಅಭಿಯಾನದ ಉದ್ದೇಶವೊಂದು ಈಗ ಪರಿಪೂರ್ಣಗೊಂಡಿದೆ.


ಇಲ್ಲಿನ ವಿಶೇಷ ಎಂದರೆ ಪ್ರದೀಪ್ ಕುಮಾರ್ ಕಲ್ಕೂರ ಅವರ ಮನೆಯ ಆವರಣದಲ್ಲಿ ಈ ಮೇಳ ನಡೆಯುತ್ತದೆ. ಎಲ್ಲಾ ಮಳಿಗೆಗಳಿಗೂ ಉಚಿತವಾದ ಪ್ರವೇಶ. ಆದರೆ ಸಾವಯವ ಕೃಷಿಕ ಗ್ರಾಹಕ ಬಳಗ ಹಾಗೂ ಕಲ್ಕೂರ ಅವರು ಮಳಿಗೆಗಳನ್ನು ಆಹ್ವಾನಿಸುತ್ತಾರೆ. ಅಂತಹ ಮಳಿಗೆಗಳಿಗೆ ಮಾತ್ರವೇ ಅವಕಾಶ ಇದೆ. ಎಲ್ಲವೂ ಉಚಿತವಾಗಿರುತ್ತದೆ. ಇಷ್ಟೇ ಅಲ್ಲ, ಮಳಿಗೆ ಹಾಕಿದ ಎಲ್ಲರಿಗೂ ಉಚಿತವಾಗಿ ಊಟ, ತಿಂಡಿ ಕಾಫಿ ವ್ಯವಸ್ಥೆಯನ್ನೂ ಮಾಡಿದ್ದಾರೆ. ಹೀಗಾಗಿ ಇದೊಂದು ರೈತರ ಉತ್ಪನ್ನಗಳಿಗೆ ವೇದಿಕೆ ನೀಡುವ ಕಾರ್ಯಕ್ರಮ, ಗೌರವ ನೀಡುವ ಕಾರ್ಯಕ್ರಮ. ಮಳಿಗೆ ಹಾಕಿರುವ ಎಲ್ಲರೂ ಹೇಳುವುದು, ಪ್ರದೀಪ್ ಕುಮಾರ್ ಅವರ ಆತಿಥ್ಯಕ್ಕೆ ಬೆಲೆ ಕಟ್ಟಲಾಗದು. ಒಂದು ವೇಳೆ ತಂದಿರುವ ಉತ್ಪನ್ನಗಳು ಮಾರಾಟವಾಗದೇ ಇದ್ದರೂ ಬೇಜಾರಿಲ್ಲ, ಏಕೆಂದರೆ ನಮಗೆಲ್ಲಾ ಮಳಿಗೆಗಳನ್ನು ಉಚಿತವಾಗಿ ನೀಡಿದ್ದಾರೆ, ಆತಿಥ್ಯ ಮಾಡಿದ್ದಾರೆ. ಒಂದು ವೇದಿಕೆ ನೀಡುವುದು, ಉತ್ಪನ್ನಗಳಿಗೆ ಗೌರವ ನೀಡುವುದಕ್ಕೆ ಕೃತಜ್ಞತೆ ಹೇಳಬೇಕು ಎನ್ನುತ್ತಾರೆ.
ಇಷ್ಟೇ ಅಲ್ಲ, ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸುವ ಎಲ್ಲರನ್ನೂ ಮಾತನಾಡಿಸುವ ಪ್ರದೀಪ್ ಕುಮಾರ್ ಕಲ್ಕೂರ ಅವರ ನಡೆಯೇ ಹಲಸು-ಮಾವು ಮೇಳಕ್ಕೆ ಹೆಚ್ಚು ಜನರು ಬರುವಂತೆ ಮಾಡಿದೆ ಎನ್ನುತ್ತಾರೆ ಮೇಳದ ಆಗಮಿಸುವ ಮಂದಿ.
ಒಟ್ಟಾರೆಯಾಗಿ ಕಳೆದ ಕೆಲವು ಸಮಯಗಳಿಂದ ತಮ್ಮದೇ ವೆಚ್ಚಗಳಿಂದ ಒಂದು ಮೇಳವನ್ನು ಅದರಲ್ಲೂ ರೈತಪರವಾದ ಕಾರ್ಯಕ್ರಮವನ್ನು ಸಂಘಟಿಸುವ ಮೂಲಕ ಗಮನ ಸೆಳೆದಿದ್ದಾರೆ, ರೈತರಿಂದಲೂ ಅಭಿನಂದನೆ ಕಾರಣವಾಗಿದ್ದಾರೆ ಪ್ರದೀಪ್ ಕುಮಾರ ಕಲ್ಕೂರ ಅವರ ಅಧ್ಯಕ್ಷತೆಯ ಕಲ್ಕೂರ ಪ್ರತಿಷ್ಠಾನ, ಸಾವಯವ ಕೃಷಿಕ ಗ್ರಾಹಕ ಬಳಗದ ಎಲ್ಲಾ ಸದಸ್ಯರು.

This fair stands out as a unique initiative, as it provides a distinct platform dedicated to showcasing farmers’ products in an urban setting. Located prominently in Mangalore, it offers farmers a free space to display their goods, ensuring they receive the recognition and respect they deserve. The platform was thoughtfully created by Pradeep Kumar Kalkura and the Organic Group, who envisioned a space where agriculture meets urban life. By bridging the gap between rural producers and city consumers, the fair fosters a mutual appreciation and understanding of locally grown products. It highlights the significance of organic and sustainable farming practices, encouraging a healthier lifestyle among urban dwellers. The fair is not just a marketplace but a celebration of agricultural heritage and innovation. It also provides an opportunity for farmers to network, share knowledge, and learn from each other. This initiative empowers farmers by giving them direct access to customers, eliminating the need for intermediaries. Overall, this fair exemplifies how thoughtful initiatives can bring communities together, supporting local economies and promoting sustainable practices.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel