ಎಲ್ಲೆಡೆಯೂ ಕೃಷಿ ಸಂಕಷ್ಟದಲ್ಲಿದೆ ಎನ್ನುವ ಮಾತುಗಳೇ ಹೆಚ್ಚು ಕೇಳುತ್ತಿದೆ. ಇದಕ್ಕೆ ಪರಿಹಾರ ಮಾರ್ಗಗಳೂ ಅಲ್ಲಲ್ಲಿ ತಯಾರಾಗುತ್ತಿದೆ. ಸುಳ್ಯ ತಾಲೂಕಿನ ಕಲ್ಮಡ್ಕದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ವಿನೂತನ ಹೆಜ್ಜೆ ಇರಿಸಿದೆ. ಸಹಕಾರಿ ಸಂಘದ ಮೂಲಕ ತೆಂಗಿನಕಾಯಿ ಕೊಯ್ಲು, ಅಡಿಕೆಗೆ ಔಷಧಿ ಸಿಂಪಡಣೆ, ಕಳೆ ತೆಗೆಯಲು ತಂಡವನ್ನು ಸಿದ್ಧ ಮಾಡುತ್ತಿದೆ. ಸದ್ಯ 7 ಜನರ ತಂಡ ಇದೆ. ಕೃಷಿಕರಿಗೆ ನೆರವಾಗುವ ಈ ಯೋಜನೆ ಸೆ.1 ರಿಂದ ಚಾಲನೆಗೆ ಬರಲಿದೆ.
ದಕ್ಷಿಣ ಕನ್ನಡ ಜಿಲ್ಲೆಯು ಸಹಕಾರಿ ಸಂಘದ ತವರೂರು. ಸಹಕಾರಿ ಸಂಘಗಳು ಪರಸ್ಪರ ಸಹಕಾರ ಎಂಬ ಮನೋಭಾವದಿಂದಲೇ ಹುಟ್ಟಿಕೊಂಡವು. ಮೊಳಹಳ್ಳಿ ಶಿವರಾಯರು ಸಹಕಾರಿ ಸಂಘಗಳ ಉದ್ದೇಶವನ್ನೇ ಸ್ಪಷ್ಟವಾಗಿ ಹೇಳಿದ್ದರು. ಕೃಷಿಕರು , ಗ್ರಾಮೀಣ ಜನರು ಹಾಗೂ ಸಂಘದ ಪರಸ್ಪರ ಸಹಕಾರದ ತತ್ತ್ವದ ಮೂಲಕ ದ ಕ ಜಿಲ್ಲೆಯಲ್ಲಿ ಸಹಕಾರಿ ಸಂಘ ಬೆಳೆಯಿತು. ರೈತರಿಗೆ ಸಾಲ ನೀಡುವುದು, ವಸೂಲಾತಿ, ಬಡ್ಡಿ , ಉದ್ಯಮ ಇಷ್ಟೇ ಅಲ್ಲ. ರೈತರು, ಗ್ರಾಮೀಣ ಜನರು ಸಂಕಷ್ಟದಲ್ಲಿರುವಾಗ ನೆರವಾಗುವುದು ಅದಕ್ಕಾಗಿಯೇ ಲಾಭದ ಉದ್ದೇಶ ಇಲ್ಲದೆಯೇ ನೆರವಾಗುವುದು ಕೂಡಾ ಸಹಕಾರಿಯ ಉದ್ದೇಶವೂ ಆಗಿದೆ.
ಇದೀಗ ಕಲ್ಮಡ್ಕ ವ್ಯವಸಾಯ ಸಹಕಾರಿ ಸಂಘವು ಕೃಷಿಕರಿಗೆ ನೆರವಾಗುವ ತಂಡವನ್ನು ಸಿದ್ಧ ಮಾಡುತ್ತಿದೆ. ಸಂಘದ ಅಧ್ಯಕ್ಷ ಬೆಟ್ಟ ಉದಯಕುಮಾರ್ ಅವರ ಆಡಳಿತದ ನಿರ್ದೇಶಕರ ತಂಡ ಹಾಗೂ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಜೋಗಿಬೆಟ್ಟು ಅವರ ಯೋಜನೆಯೊಂದಿಗೆ ಈ ತಂಡ ಸಿದ್ಧವಾಗುತ್ತಿದೆ. ಸಂಘದ ವ್ಯಾಪ್ತಿಯ ಕೃಷಿಕರಿಗೆ ತೆಂಗಿನ ಕಾಯಿ ಕೊಯ್ಲು, ಕಳೆ ತೆಗೆಯಲು ಸೇರಿದಂತೆ ಮುಂದಿನ ವರ್ಷದಿಂದ ಅಡಿಕೆಗೆ ಔಷಧಿ ಸಿಂಪಡಣೆಗೂ ತಂಡ ತಯಾರು ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಸದ್ಯ 7 ಜನರ ತಂಡವನ್ನು ಸಿದ್ಧ ಮಾಡಿದ್ದಾರೆ. ಕೃಷಿಕರು ಸಹಕಾರಿ ಸಂಘಕ್ಕೆ ಬೇಡಿಕೆ ಸಲ್ಲಿಸಿದರೆ ಸಂಘವು ಇದಕ್ಕಾಗಿಯೇ ನೇಮಕ ಮಾಡಿರುವ ಸಿಬಂದಿಯ ಮೂಲಕ ಜಾಬ್ ವರ್ಕ್ ತಂಡವನ್ನು ನಿರ್ವಹಣೆ ಮಾಡುತ್ತದೆ. ಕೃಷಿಕರ ಬೇಡಿಕೆ ಗಮನಿಸಿಕೊಂಡು ಕೆಲಸವನ್ನು ವಿಭಾಗಿಸಿ ಸಂಘವು ತಂಡವನ್ನು ಕೃಷಿಕರಲ್ಲಿಗೆ ಕಳುಹಿಸಿಕೊಡುತ್ತದೆ. ಸಂಘದ ವತಿಯಿಂದಲೇ ಈ ತಂಡಕ್ಕೆ ಬೇಕಾದ ಎಲ್ಲಾ ಸಲಕರಣೆಗಳನ್ನೂ ಒದಗಿಸಲಾಗುತ್ತಿದೆ. ಈಗಾಗಲೇ ಎರಡು ಕಾರ್ಬನ್ ಪೈಬರ್ ದೋಟಿ, ಕಳೆ ಕಟಾವು ಯಂತ್ರವನ್ನೂ ಖರೀದಿ ಮಾಡಿದೆ.
ಕೃಷಿಕರು ಜಾಬ್ ವರ್ಕ್ ತಂಡಕ್ಕೆ ನೀಡಬೇಕಾದ ಎಲ್ಲಾ ವೇತನವನ್ನೂ ಸಹಕಾರಿ ಸಂಘಕ್ಕೆ ಪಾವತಿ ಮಾಡಬೇಕು.ಸಂಘವು ಈ ತಂಡಕ್ಕೆ ವೇತನ ನೀಡುತ್ತದೆ. ಇದರ ಜೊತೆಗೆ ಉದ್ಯೋಗ ಭದ್ರತೆ, ವಿಮೆ ಸೇರಿದಂತೆ ಪಿ ಎಫ್ ಮಾದರಿಯ ಹೂಡಿಕೆಯನ್ನೂ ಮಾಡಲು ಯೋಜನೆ ಹಾಕಿಕೊಂಡಿದೆ. ಈ ಮೂಲಕ ಜಾಬ್ ವರ್ಕ್ ಮಾಡುವ ಉದ್ಯೋಗಿಗೂ ಉದ್ಯೋಗ ಭದ್ರತೆಯೂ ಲಭ್ಯವಾಗುತ್ತಿದೆ. ಕೃಷಿಕರಿಗೂ ಕ್ಲಪ್ತ ಸಮಯದಲ್ಲಿ ಸೇವೆ ನೀಡಲು ಯೋಜನೆ ಹಾಕಿಕೊಂಡಿದೆ ಸಹಕಾರಿ ಸಂಘ.
ಸೆ.1 ರಿಂದ ಈ ತಂಡ ಸಿದ್ಧವಾಗುತ್ತಿದೆ. ಸಂಘದ ವತಿಯಿಂದಲೇ ಸಮವಸ್ತ್ರ ನೀಡಲಾಗುತ್ತಿದ್ದು, ಸಮಯವನ್ನು ನಿಗದಿ ಮಾಡಿ ಆ ಸಮಯದಲ್ಲಿ ಕೃಷಿಕರ ತೋಟದಲ್ಲಿ ಕೆಲಸಕ್ಕೆ ಸಿದ್ಧವಾಗುತ್ತಿದೆ ಈ ತಂಡ. ತನ್ನ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಸದ್ಯ ಈ ತಂಡ ಕೆಲಸ ಮಾಡುತ್ತದೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…