ಸುಳ್ಯ ತಾಲೂಕಿನ ಕಲ್ಮಕಾರು ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ. ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಗೆ ಕಲ್ಮಕಾರು ಎಸ್ಟೇಟ್ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ, ಮಣ್ಣು ಮಿಶ್ರಿತ ನೀರಿನೊಂದಿಗೆ ಮರಗಳು ಉರುಳಿ ಬಂದಿದೆ. ಕಲ್ಮಕಾರು ಎಸ್ಟೇಟ್ ಸಂಪರ್ಕ ಕಡಿತವಾಗಿದೆ.
ನಿನ್ನೆ ತಡರಾತ್ರಿ ಸುಮಾರು 2 ಗಂಟೆಗೆ ಭಾರೀ ಮಳೆ ಆರಂಭವಾಗಿತ್ತು. ಆರಂಭದಲ್ಲಿ ಕಲ್ಮಕಾರು ಎಸ್ಟೇಟ್ ಪ್ರದೇಶದಲ್ಲಿ ಜಲಸ್ಫೋಟಗೊಂಡು ನೀರು ಹರಿಯಲು ಆರಂಭವಾಗಿತ್ತು. ಇದೇ ವೇಳೆಗೆ ಸಮೀಪದ ಜನರಿಗೆ ಸದ್ದು ಕೇಳಿದೆ. ಆದರೆ ಮಳೆಯ ಕಾರಣದಿಂದ ಹೊರಗಡೆ ಹೋಗಿರಲಿಲ್ಲ. ಸುಮಾರು 3 ಗಂಟೆಯ ಆಸುಪಾಸಿನಲ್ಲಿ ಭಾರೀ ನೀರು ಕಲ್ಮಕಾರು ಪ್ರದೇಶದ ಇಡ್ಯಡ್ಕ ಮೊದಲಾದ ಕಡೆ ಭಾರೀ ನೀರು ಹರಿದಿದೆ. ತೋಟದ ಪೂರ್ತಿ ಕಲುಷಿತ ನೀರು ಹಾಗೂ ಮರ ಬಿದ್ದುಕೊಂಡಿದೆ. ಇಡ್ಯಡ್ಕದ ಕೆಲವು ಮನೆಯ ಸಮೀಪದವರೆಗೂ ನೀರು ಬಂದಿತ್ತು. ಅನೇಕರಿಗೆ ಭಾರೀ ಮಳೆಯಿಂದ ನೀರು ಬಂದಿರುವುದು ತಿಳಿಯಲೇ ಇಲ್ಲ. ಬೆಳಗ್ಗೆ ನೋಡಿದಾಗ ಹಲವಾರು ಮಂದಿಗೆ ತಿಳಿದಿದೆ. ಬೇರೆಯೇ ಹೊಳೆ ನಿರ್ಮಾಣವಾಗಿದೆ.
ಭಾರೀ ಮಳೆಗೆ ಸುಳ್ಯ ತಾಲೂಕಿನ ಕಲ್ಮಕಾರಿನಲ್ಲಿ ಭೂಕುಸಿತ| ಜನರು ಅತಂತ್ರ |
Sullia | Land slide near Kalmakar | #rain #ಮಳೆ #ಭೂಕುಸಿತ #landsliding #Kalmakar #ಕಲ್ಮಕಾರು pic.twitter.com/Z5qc0rDuaB— theruralmirror (@ruralmirror) August 1, 2022
ಎರಡು ದಿನಗಳ ಹಿಂದೆ ಇಡ್ಯಡ್ಕದ ಕಾಲು ಸಂಕ ತುಂಡಾಗಿತ್ತು. ಇದೀಗ ಕಲ್ಮಕಾರು ಕಡೆಗೆ ಸಂಪರ್ಕ ಕಡಿತಗೊಂಡಿದೆ. ಕಲ್ಮಕಾರು ಎಸ್ಟೇಟ್ ಪ್ರದೇಶದಲ್ಲಿ ಏನಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಕಲ್ಮಕಾರು ಸೇತುವೆ ಕೂಡಾ ಹಾನಿಯಾಗಿದೆ.