ರಾಜಧಾನಿಯಲ್ಲಿ ಇಂದಿನಿಂದ ಕಂಬಳ ಝಲಕ್‌ | ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತೆ ಬೆಂಗಳೂರು ನೆಲ | ಅಶ್ವಿನಿ ಪುನಿತ್‌ ರಾಜ್‌ಕುಮಾರ್‌ ಚಾಲನೆ |

November 25, 2023
12:38 PM
ಇಂದಿನಿಂದ ಎರಡು ದಿನಗಳ ಕಾಲ ರಾಜಧಾನಿಯಲ್ಲಿ ತುಳುನಾಡಿನ ಸಂಸ್ಕೃತಿಯ ವೈಭವ ಅನಾವರಣಗೊಳ್ಳಲಿದೆ.

ತುಳುನಾಡು ಮೂಲದ  ಕಾಂತಾರ(Kantara) ಎಬ್ಬಿಸಿದ್ದ ಧೂಳಿಗೆ ಇಡೀ ವಿಶ್ವವೇ ನಿಬ್ಬೆರಗಾಗಿತ್ತು.  ಇದೀಗ ತುಳುನಾಡಿನ(Tulunad) ಕೋಣಗಳು(Buffalo) ಇಂದು ಬೆಂಗಳೂರಿಗೆ(Bengaluru) ಬಂದು ಸೇರಿದೆ. ಹೌದು, ನಮ್ಮ ತುಳುನಾಡಿನ ಸಂಸ್ಕೃತಿಯನ್ನು(Tulunad culture) ಇಂದು ರಾಜ್ಯದಾದ್ಯಂತ ಪಸರಿಸುವ ಕೆಲಸವನ್ನು ಕಂಬಳ ಸಮಿತಿ(Kambala samiti) ಮಾಡುತ್ತಿದೆ. ಕಂಬಳದ ಬಗ್ಗೆ ಹೆಚ್ಚಾಗಿ ಎಲ್ಲರೂ ಕೇಳಿರುತ್ತಾರೆ. ಆದರೆ ಅದನ್ನು ನಿಬ್ಬೆರಗಾಗಿ ನೋಡಿದ್ದು ನಮ್ಮ ಹೆಮ್ಮೆಯ ತುಳುನಾಡಿನ ದೈವಾರಾಧನೆಯ ತಿರುಳನ್ನು ಇಟ್ಟಕೊಂಡು ಬಂದಂತ ಕಾಂತಾರ ಸಿನಿಮಾದಲ್ಲಿ. ಆದರೆ ಅದರ ನಿಜವಾದ ಝಲಕ್ಕನ್ನು ಯಾರು ಅಷ್ಟಾಗಿ ನೋಡಿರಲಿಕ್ಕಿಲ್ಲ. ಆದರೆ ಆ ಖದರನ್ನು ಇಂದು ನೇರವಾಗಿ ನೋಡುವ ಅವಕಾಶ ನಮ್ಮ ರಾಜಧಾನಿಯ ಮಂದಿಗೆ ಒದಗಿಬಂದಿದೆ.

Advertisement
Advertisement
Advertisement

ಭಾರೀ ಕುತೂಹಲ ಕೆರಳಿಸಿರುವ ತುಳುನಾಡಿನ ಜಾನಪದ ಕ್ರೀಡೆ ಕಂಬಳಕ್ಕೆ ಬೆಂಗಳೂರು (Bengaluru Kambala) ಸಜ್ಜಾಗಿದ್ದು, ಇಂದಿನಿಂದ ಎರಡು ದಿನಗಳ ಕಾಲ ರಾಜಧಾನಿಯಲ್ಲಿ ತುಳುನಾಡಿನ ಸಂಸ್ಕೃತಿಯ ವೈಭವ ಅನಾವರಣಗೊಳ್ಳಲಿದೆ. ಕಳೆದ ಕೆಲ ತಿಂಗಳಿಂದ ಕುತೂಹಲ ಕೆರಳಿಸಿದ್ದ ಇಡೀ ದೇಶವೇ ತಿರುಗಿ ನೋಡುವಂತೆ ಬೆಂಗಳೂರು ಕಂಬಳಕ್ಕೆ ಇಂದು ಬೆಳಗ್ಗೆ 10 ಗಂಟೆಗೆ ಅಶ್ವಿನಿ ಪುನಿತ್‌ ರಾಜ್‌ ಕುಮಾರ ಅವರು ಕಂಬಳ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ನೀಡಿದರು. ಕಂಬಳದ ಕಮ್ಮೆನ ಇಡೀ ರಾಜ್ಯಕ್ಕೆ ಇಂದು ಪಸರಿಸಲಿದ್ದು, ಇಂತಹ ಐತಿಹಾಸಿಕ ಕ್ಷಣಕ್ಕೆ ರಾಜಧಾನಿಯ ನೆಲ ಸಾಕ್ಷಿಯಾಗಲಿದೆ.  ಮೊಟ್ಟ ಮೊದಲ ಕಂಬಳದ ಸೊಗಬನ್ನು ಸವಿಯಲು ಸಿಲಿಕಾನ್ ಸಿಟಿ ಮಂದಿ ಕಾತರದಿಂದ ಕಾಯುತ್ತಿದ್ದ ದಿನ ಇಂದು ಬಂದೇ ಬಟ್ಟಿದೆ.

Advertisement

ಈಗಾಗಲೇ ಕೆಸರಲ್ಲಿ ಚರಿತ್ರೆಯ ಓಟ ಬೀರಿ ಮೋಡಿ ಮಾಡಲು ಮಂಗಳೂರು, ಉಡುಪಿ, ಕುಂದಾಪುರ ಮತ್ತು ಕಾಸರಗೋಡು ಭಾಗದ ಸುಮಾರು 200ಕ್ಕೂ ಹೆಚ್ಚು ಪ್ರತಿಷ್ಠಿತ ಕೋಣಗಳು ಘಟ್ಟ ಹತ್ತಿ ಬೆಂಗಳೂರಿಗೆ ಬಂದಿಳಿದು, ಕರೆದಗೆ ಇಳಿದಿವೆ. ಕೋಣಗಳಿಗೆ ಪ್ರತಿದಿನವೂ ವಿಶೇಷ ಆರೈಕೆ ಮಾಡುವುದರಿಂದ ನಿನ್ನೆ ಪೂರ್ತಿ ದಿನ ಅವುಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಇನ್ನು ಆಹಾರ, ನೀರಿನ ಬಗ್ಗೆ ಕೋಣಗಳ ಮಾಲೀಕರು ದಿನನಿತ್ಯ ವಿಶೇಷ ಕಾಳಜಿ ವಹಿಸುತ್ತಿದ್ದು, ಹೀಗಾಗಿ ಕೋಣಗಳಿಗೆ ಬೈಹುಲ್ಲು, ನೀರನ್ನು ಕೂಡ ಊರಿನಿಂದಲೇ ತರಲಾಗುತ್ತದೆ. ನೀರು ಬದಲಾದರೆ ಕೋಣಗಳ ಆರೋಗ್ಯ ಏರುಪೇರು ಆಗುವ ಸಾಧ್ಯತೆ ಇದ್ದು, ಹೀಗಾಗಿ ಊರಿನಿಂದಲೇ ಟ್ಯಾಂಕರ್ ಮೂಲಕ ನೀರು ತರಲಾಗಿದೆ. ಕಂಬಳದಲ್ಲಿ ಕೋಣಗಳ ಆರೈಕೆಗೆ ಕಂಬಳದ ಸ್ಥಳಕ್ಕೆ ಪಶುವೈದ್ಯರು, ನಾಟಿ ವೈದ್ಯರೂ ಕೂಡ ಉಪಸ್ಥಿತರಿದ್ದಾರೆ.

ಬೆಳಗ್ಗೆ 11 ಗಂಟೆಗೆ ಸರಿಯಾಗಿ ಬೆಳಗಿನ ಸಭಾ ಕಾರ್ಯಕ್ರಮವನ್ನು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಉದ್ಘಾಟಿಸಿದರು. ಇನ್ನು, ಮಧ್ಯಾಹ್ನ 12.00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಉದ್ಘಾಟಿಸಿದರೆ ಸಂಜೆ 6 ಗಂಟೆಗೆ ಲಕ್ಷಾಂತರ ಜನರ ಸಮ್ಮುಖದಲ್ಲಿ ಮುಖ್ಯ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ.

Advertisement

ನಗರದ ಅರಮನೆ ಮೈದಾನದಲ್ಲಿ ಪಕ್ಷಾತೀತವಾಗಿ ಎರಡು ದಿನಗಳ ಕಾಲ ನಡೆಯುವ ಕಂಬಳದಲ್ಲಿ ಎಲ್ಲಾ ಪಕ್ಷಗಳ ಗಣ್ಯರು ಅತಿಥಿಗಳಾಗಿ ಎರಡು ದಿನಗಳ ಕಾಲ ವಿವಿಧ ಸಮಯದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ತುಳುನಾಡಿನಿಂದ ತೆರಳಿ ಚಿತ್ರರಂಗದಲ್ಲಿ ಸಾಧನೆ ಮಾಡಿರುವ ಐಶ್ವರ್ಯಾ ರೈ, ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ ಅವರಿಂದ ಹಿಡಿದು ತಮಿಲಿನ ಕೆಲ ಮತ್ತು ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರೂ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.  ಬೆಂಗಳೂರು ಕಂಬಳದ ಮುಖ್ಯ ವೇದಿಕೆಗೆ ಪುನಿತ್ ರಾಜ್ ಕುಮಾರ್ ಹೆಸರು ಇಡಲಾಗಿದ್ದು, ಕಂಬಳದ ಕರೆ (ಟ್ರ್ಯಾಕ್‌)ಗೆ ರಾಜ ಮಹಾರಾಜ ಎಂದು ಹೆಸರು ನೀಡಲಾಗಿದೆ. ಸಾಂಸ್ಕೃತಿಕ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲಾಗಿದೆ.

ಕಂಬಳಕ್ಕೆ ಸಾರ್ವಜನಿಕರಿಗೆ ಮಾತ್ರ ಯಾವುದೇ ಟಿಕೆಟ್‌ ಇಲ್ಲದೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಅಲ್ಲದೇ, ಸಾರ್ವಜನಿಕರು ಯಾವುದೇ ಪಾಸ್‌ ತೋರಿಸುವ ಅಗತ್ಯವೂ ಇಲ್ಲ, ಆದರೆ ವಿಐಪಿಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಕಂಬಳ ನೋಡಲು ಜನರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದ್ದು, 6 ರಿಂದ 7 ಸಾವಿರ ಜನರು ಏಕಕಾಲದಲ್ಲಿ ಗ್ಯಾಲರಿಯಲ್ಲಿ ಕುಳಿತುಕೊಂಡು ಕಂಬಳ ನೋಡಬಹುದು. ಕಂಬಳದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ವೈಭವವೂ ನಡೆಯಲಿದ್ದು, ತುಳುನಾಡಿನ ಸಾಂಪ್ರದಾಯಿಕ ಪಿಲಿಯೇಸ (ಹುಲಿ ಕುಣಿತ) ಕೂಡ ಇರಲಿದೆ.

Advertisement

ಸಾಮಾನ್ಯವಾಗಿ ಕಂಬಳ ಕೋಣಗಳು ಓಡುವ ಕರೆ (ಟ್ರ್ಯಾಕ್) 147 ಮೀಟರ್ ಉದ್ದ ಇರುತ್ತದೆ. ಆದರೆ ಬೆಂಗಳೂರು ಕಂಬಳದ ಟ್ರ್ಯಾಕ್ 155 ಮೀಟರ್ ಉದ್ದವಿದೆ. ಹೀಗಾಗಿ ಇದು ಕಂಬಳದ ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಲಿದೆ. ಕಂಬಳಕ್ಕೆ 228 ಜೋಡಿ ಕೋಣಗಳ ರಿಜಿಸ್ಟ್ರೇಷನ್ ಆಗಿದ್ದು, 200 ಜೋಡಿ‌ ಫೈನಲ್‌ ಆಗಿದೆ. ಕಂಬಳದ ವೇಳೆ ಪ್ರಾಣಿ ರಕ್ಷಣಾ ಕಾಯ್ದೆಯನ್ನು ಕೂಡ ಅನುಸರಿಸಲಾಗುತ್ತದೆ.

ಈ ಕಂಬಳದಲ್ಲಿ ಗೆದ್ದ ಕೋಣಗಳಿಗೆ ಪ್ರಥಮ ಬಹುಮಾನ 16 ಗ್ರಾಂ ಚಿನ್ನ ಹಾಗೂ 1 ಲಕ್ಷ ನಗದು ಮೀಸಲಿರಿಸಲಾಗಿದ್ದು, ಎರಡನೇ ಬಹುಮಾನ 8 ಗ್ರಾಂ ಚಿನ್ನ ಹಾಗೂ 50,000 ನಗದು ಇಡಲಾಗಿದೆ. ಮೂರನೇ ಬಹುಮಾನ 4 ಗ್ರಾಂ ಚಿನ್ನ ಹಾಗೂ 25,000 ನಗದು ಸಿಗಲಿದೆ. ಕಂಬಳ ನಡೆಯುವ ಅರಮನೆ ಮೈದಾನದಲ್ಲಿ ಇಂದು ಕೂಡ ಕೆಲ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರು ತುಳುಕೂಟಕ್ಕೆ ಇಂದಿಗೆ 50 ವರ್ಷ ಹಿನ್ನೆಲೆ ಇಂದು ಅರಮನೆ ಮೈದಾನದಲ್ಲಿ ಸುವರ್ಣ ಮಹೋತ್ಸವನ್ನು ಆಯೋಜನೆ ಮಾಡಲಾಗಿದೆ.

Advertisement

– ಅಂತರ್ಜಾಲ ಮಾಹಿತಿ

Bengaluru Kambala is all set for the folk sport of Tulunad, and the glory of Tulunad culture will be unveiled in the capital for two days from today. Ashwini Punit Rajkumar gave a grand start to the Bengaluru Kambala Games at 10 am today so that the entire country, which had been excited for the last few months, would turn around and watch. The carpet arch will be spread across the state today and the capital’s floor will witness such a historic moment.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror