ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಪ್ರದೇಶದಲ್ಲಿ ಸೇತುವೆ ನಿರ್ಮಾಣ ಹಾಗೂ ಗುತ್ತಿಗಾರು-ಕಮಿಲ-ಬಳ್ಪ ರಸ್ತೆ ಸಮಸ್ಯೆಯ ವಿಡಿಯೋ ಸಹಿತ ವಿವರಣೆಯ ಸಿಡಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಮಿಲ ಮೊಗ್ರ ಬಳ್ಳಕ್ಕದ ನಾಗರಿಕ ಹೋರಾಟ ಕ್ರಿಯಾ ಸಮಿತಿ ಸದಸ್ಯರು ಕಮಿಲ ಅಂಚೆ ಕಚೇರಿ ಮೂಲಕ ಮಂಗಳವಾರ ಕಳುಹಿಸಿದ್ದಾರೆ.
ಇಂದು ಆಧುನಿಕ ಮಾಧ್ಯಮಗಳಿದ್ದರೂ ಅಂಚೆ ಕಚೇರಿ ಮೂಲಕವೇ ಸಮಸ್ಯೆಗಳನ್ನು ಹೊತ್ತ ವಿಡಿಯೋ ಸಿಡಿಯನ್ನು ಗ್ರಾಮೀಣ ಭಾಗದ ಅಂಚೆ ಕಚೇರಿ ಮೂಲಕವೇ ರವಾನೆಯ ಉದ್ದೇಶದ ಹಿಂದೆ ಗ್ರಾಮೀಣ ಭಾಗದ ಅಂಚೆ ಕಚೇರಿಯನ್ನು ಸರ್ಕಾರಗಳು ಬಲವರ್ಧನೆ ಮಾಡಬೇಕು ಎಂಬ ಕಾಳಜಿಯೂ ಇದೆ. ಗ್ರಾಮೀಣ ಭಾಗದ ಬಹುಪಾಲು ಮಂದಿ ಅಂಚೆ ಕಚೇರಿ ಬಳಕೆ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಬ್ಯಾಂಕಿಂಗ್ ವ್ಯವಸ್ಥೆ ಕೂಡಾ ಅಂಚೆ ಕಚೇರಿಯೇ ಆಗಿದೆ. ಹೀಗಾಗಿ ಆಧುನಿಕ ವ್ಯವಸ್ಥೆಗಳು ಇದ್ದರೂ ಗ್ರಾಮೀಣ ಭಾಗದ ಅಂಚೆ ಕಚೇರಿ ಬಳಕೆಯಾಗುವಂತೆ ಮಾಡಲು ಸಾಮೂಹಿಕ ಸಿಡಿ ರವಾನೆಯ ಉದ್ದೇಶವನ್ನು ನಾಗರಿಕ ಹೋರಾಟ ಕ್ರಿಯಾ ಸಮಿತಿ ಹೊಂದಿದೆ. ಗ್ರಾಮೀಣ ಭಾಗದ ಅಂಚೆ ಕಚೇರಿಗಳು ಇಂದಿಗೂ ನೆಟ್ವರ್ಕ್ ಸಮಸ್ಯೆಯನ್ನು ಹೊಂದಿವೆ. ಇಂಟರ್ನೆಟ್ ಕೈಕೊಟ್ಟರೆ ಕೆಲಸ ಮಾಡಲಾಗದ ಸ್ಥಿತಿ ಇದೆ.
ವಿಡಿಯೋ ಸಿಡಿ ರವಾನೆಯ ಸಂದರ್ಭ ನಾಗರಿಕ ಹೋರಾಟ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಪಿ ಎಸ್ ಗಂಗಾಧರ ಭಟ್ ಪುಚ್ಚಪ್ಪಾಡಿ, ಬಿಟ್ಟಿ ಬಿ ನೆಡುನೀಲಂ, ಜೀವನ್ ಮಲ್ಕಜೆ, ಲಕ್ಷ್ಮೀಶ ಗಬ್ಲಡ್ಕ, ಮಹೇಶ್ ಪುಚ್ಚಪ್ಪಾಡಿ, ಹರ್ಷಿತ್ ಕಾಂತಿಲ, ಬಾಬು ಕಮಿಲ, ಸುರೇಶ್ ಮೊಗ್ರ , ವಿಶ್ವನಾಥ ಕೇಂಬ್ರೋಳಿ ಮೊದಲಾದವರು ಇದ್ದರು.
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…