ಕಾಣಿಯೂರು ಕಾರು ಅಪಘಾತ | ಕಾರಿನಲ್ಲಿಯೂ ಇಲ್ಲ…. ಫೋನಿಗೂ ಸಿಗುತ್ತಿಲ್ಲ… | ಯುವಕರಿಗೆ ಶೋಧ ಆರಂಭ |

July 10, 2022
3:25 PM

ಕಾಣಿಯೂರು ಬಳಿ ಬೈತಡ್ಕದಲ್ಲಿ  ಸೇತುವೆಗೆ ಡಿಕ್ಕಿಯಾದ ಕಾರು ಹೊಳೆಗೆ ಬಿದ್ದಿತ್ತು. ಕಾರಿನಲ್ಲಿ ಇಬ್ಬರು ಯುವಕರು ಇದ್ದರು. ಭಾನುವಾರ ಬೆಳಗ್ಗೆ ಕಾರು ಬಿದ್ದಿರುವುದು  ಸಿಸಿಟಿವಿ ದೃಶ್ಯಾವಳಿಯ ಮೂಲಕ ಖಚಿತವಾಗಿತ್ತು. ಅದಾಗಿ ಶೋಧ ಕಾರ್ಯ ನಡೆಸಿ ಕಾರನ್ನು ಹರಸಾಹಸದಿಂದ ಹೊಳೆಯಿಂದ ಮೇಲೆ ತರಲಾಯಿತು. ಈಗ ಯುವಕರಿಗಾಗಿ ಶೋಧ ಕಾರ್ಯ ಆರಂಭವಾಗಿದೆ.  ಪೊಲೀಸರು ತನಿಖೆ ಆರಂಭಿಸಿದ್ದಾರೆ, ಹೊಳೆಯಲ್ಲೂ ಶೋಧ ಕಾರ್ಯ ಆರಂಭವಾಗಿದೆ.

Advertisement
Advertisement
Advertisement

ಶನಿವಾರ ತಡರಾತ್ರಿ ಕಾರು ಬೈತಡ್ಕ ಮಸೀದಿ ಬಳಿಯಲ್ಲಿ  ನೇರವಾಗಿ ಹೊಳೆಗೆ ಬೀಳುವ ದೃಶ್ಯದ ಮೂಲಕ ಕಾರು ಹೊಳೆಗೆ ಬಿದ್ದಿರುವುದು  ಖಚಿತವಾಗಿತ್ತು. ಹೀಗಾಗಿ ಶೋಧ ಕಾರ್ಯ ನಡೆದ ಬಳಿಕ ಘಟನಾ ಸ್ಥಳದಿಂದ ಸುಮಾರು 60 ಮೀಟರ್‌ ದೂರಲ್ಲಿ ಕಾರು (ಮಾರುತಿ 800) ಪತ್ತೆಯಾಗಿದೆ. ಹರಸಾಹಸದ ಮೂಲಕ ಕಾರನ್ನು  ಸವಣೂರಿನ ಚಾಲಕರು ಹಾಗೂ ಅಗ್ನಿಶಾಮಕ ದಳದ ಸಿಬಂದಿಗಳ ನೆರವಿನಿಂದ  ಮೇಲೆ ತೆಗೆಯಲಾಗಿದೆ. ಯುವಕರ ಪತ್ತೆ ಕಾರ್ಯ ಆರಂಭವಾಗಿದೆ.

Advertisement

ಆದರೆ ಯುವಕರು ಕಾರಿನಿಂದ ಜಿಗಿದರೇ ಅಥವಾ ಹೊಳೆಯಿಂದ ದಾಟಿ ಬಂದರೇ ಅಥವಾ ಹೊಳೆಯಲ್ಲಿ ಕೊಚ್ಚಿ ಹೋದರೇ ಈ ಪ್ರಶ್ನೆಗಳ ಆಧಾರದಲ್ಲಿ ಈಗ ತನಿಖೆ ಆರಂಭವಾಗಿದೆ. ಕಾರಿನಲ್ಲಿ ಇಬ್ಬರು ಯುವಕರು ಇದ್ದದ್ದು  ಖಚಿತವಾಗಿದೆ. ಪುತ್ತೂರು-ಕಾಣಿಯೂರು ರಸ್ತೆ ನಡುವೆ ಸವಣೂರು ಹಾಗೂ ಕಾಣಿಯೂರು ಪ್ರದೇಶದಲ್ಲಿ ಪೊಲೀಸರು ರಾತ್ರಿ ವೇಳೆ ವಾಹನ ತಪಾಸಣೆ ಮಾಡುತ್ತಾರೆ. ಈ ಸಮಯದಲ್ಲಿ ವಾಹನಗಳ ಸಂಖ್ಯೆ ಹಾಗೂ ಮೊಬೈಲ್‌ ಸಂಖ್ಯೆ ಪಡೆಯುತ್ತಾರೆ. ರಾತ್ರಿ ವೇಳೆ ಈ ಯುವಕರು ಸಾಗುತ್ತಿದ್ದ ಕಾರಿನ ಸಂಖ್ಯೆ ಹಾಗೂ ಕಾರಿನ ಚಾಲಕನ ಸಂಖ್ಯೆಯನ್ನೂ ಪಡೆದಿದ್ದಾರೆ ಎಂದು ತಿಳಿದುಬಂದಿದೆ.  ಕಾರಿನಲ್ಲಿದ್ದ ವಿಟ್ಲ ಕುಂಡಡ್ಕದ ಧನುಷ್ (26) ಮತ್ತು ಮಂಜೇಶ್ವರ ನಿವಾಸಿ ಧನುಷ್ (21) ಇಬ್ಬರೂ ಸೋದರಸಂಬಂಧಿ ಎನ್ನಲಾಗಿದೆ. ವಿಟ್ಲದಿಂದ ಹೊರಟಿದ್ದ ಕಾರು ಗುತ್ತಿಗಾರಿನ ಸಂಬಂಧಿಕರ ಮನೆಗೆ ಬರುತ್ತಿತ್ತು. ತಡರಾತ್ರಿ ನಿದ್ರೆಯ ಮಂಪರಿನಲ್ಲಿದ್ದರೇ ಯುವಕರು ಎಂಬುದು  ಸಂದೇಹಕ್ಕೆ ಕಾರಣವಾಗಿದೆ. ಸದ್ಯ ಇಬ್ಬರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

ಅಪಘಾತವು ಸುಮಾರು 12.30 ರ ಆಸುಪಾಸಿನಲ್ಲಿ ನಡೆದಿದೆ. ಅದಾದ ಬಳಿಕ ಈ ಯುವಕರ ಮೊಬೈಲ್‌ ಬಳಕೆಯಾಗಿದೆ ಎಂಬುದು ಸದ್ಯದ ಮಾಹಿತಿ. ತಡರಾತ್ರಿ ಮನೆಗೂ ಕರೆ ಮಾಡಿದ್ದಾರೆ ಎಂಬುದು  ಮನೆಯವರ ಮಾಹಿತಿ. ಹಾಗಾದರೆ ಈ ಇಬ್ಬರು ಯುವಕರ ಮೊಬೈಲ್‌ ಏನಾಗಿದೆ?. ಹೊಳೆ ದಾಟಿದರೆ ? ಈಜಿ ಬಂದರೇ ? ಎಂಬುದು ತನಿಖೆಯ ದಾರಿಗಳು. ಹೀಗಾಗಿ ಮೊಬೈಲ್‌ ಟವರ್‌ ಲೊಕೇಶನ್‌ ಹಾಗೂ ಇತರ ಮಾಹಿತಿಗಳ ಮೂಲಕ ತನಿಖೆ ಆರಂಭಿಸಿದ್ದಾರೆ ಪೊಲೀಸರು. ಭಾರೀ ಮಳೆಯ ಕಾರಣದಿಂದ ರಸ್ತೆ ಬದಿ ಕಾಣದೆ ಸೇತುವೆಗೆ ಡಿಕ್ಕಿಯಾಯಿತೇ ? ಯುವಕರು ನಿದ್ರೆಯ ಮಂಪರಿನಲ್ಲಿದ್ದರೇ ?  ಈ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ. ಸದ್ಯ ಯುವಕರಿಗೆ ಶೋಧ ಕಾರ್ಯ ಆರಂಭವಾಗಿದೆ.

Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 27-11-2024 | ಮೋಡದ ವಾತಾವರಣ | ಕೆಲವು ಕಡೆ ಮಳೆ ಸಾಧ್ಯತೆ |
November 27, 2024
2:30 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ಮೇಲೆ ಕ್ಯಾನ್ಸರ್‌ ಅಪವಾದ | ಕ್ಲಿನಿಕಲ್‌ ಟ್ರಯಲ್‌ ಹೇಗೆ ಮಾಡುವುದು..? | ಪರಿಶುದ್ಧವಾದ ಅಡಿಕೆ ಯಾವುದು..?
November 27, 2024
7:40 AM
by: ದ ರೂರಲ್ ಮಿರರ್.ಕಾಂ
ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ
November 27, 2024
7:03 AM
by: The Rural Mirror ಸುದ್ದಿಜಾಲ
ಖಾದಿಯನ್ನು ಬೆಂಬಲಿಸಿ-ಉಳಿಸಿ | ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನಕ್ಕೆ ಚಾಲನೆ
November 27, 2024
6:51 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror