ಬೈತಡ್ಕ ಕಾರು ಹೊಳೆಗೆ ಬಿದ್ದ ಪ್ರಕರಣ | ತಪ್ಪು ಮಾಹಿತಿ ನೀಡಿರುವುದೇಕೆ… ? | ಸಮಗ್ರ ತನಿಖೆಗೆ ಎಸ್‌ಡಿಪಿಐ ಆಗ್ರಹ |

July 12, 2022
10:13 AM

ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಶನಿವಾರ ರಾತ್ರಿ ವೇಳೆಯಲ್ಲಿ ಕಾರು ಹೊಳೆಗೆ ಬಿದ್ದ ಪ್ರಕರಣವು ಸಾರ್ವಜನಿಕವಾಗಿ ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ, ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕೆಂದು ಎಸ್‌ಡಿಪಿಐ ಸವಣೂರು ಬ್ಲಾಕ್ ಅಧ್ಯಕ್ಷರಾದ ಯೂಸುಫ್ ಹಾಜಿ ಬೇರಿಕೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Advertisement
Advertisement
Advertisement
Advertisement

ಶನಿವಾರ ರಾತ್ರಿ 12 ಗಂಟೆಯ ಸಮಯದಲ್ಲಿ ವಿಟ್ಲ ಮೂಲದ ಮಾರುತಿ ಕಾರೊಂದು ಅತೀ ವೇಗದ ಚಾಲನೆಯಿಂದ ಬೈತಡ್ಕ ಮಸೀದಿ ಸಮೀಪದ ಹೊಳೆಗೆ ಬಿದ್ದಿರುವುದು ಸಿಸಿ ಕ್ಯಾಮಾರ ಮೂಲಕ ತಿಳಿದಿದೆ. ಈ  ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸಂಶಯಗಳು ಸಾರ್ವಜನಿಕರಲ್ಲಿ ಈಗ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಕಾರಿನಲ್ಲಿದ್ದ ಧನುಷ್ ತನ್ನ ಮನೆಯವರಿಗೆ ಕರೆ ಮಾಡಿ ತಾವೂ ಆಲಂಕಾರಿನಲ್ಲಿದ್ದೇವೆಂದು, ಕಾರು ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿರುವುದಾಗಿ ಕುಟುಂಬಸ್ಥರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅದೇ ರೀತಿ ಸವಣೂರು ಚೆಕ್ ಪೋಸ್ಟ್ ನಲ್ಲಿ ಪೋಲೀಸರೊಂದಿಗೆ ಕೂಡ ಗುತ್ತಿಗಾರಿಗೆ ಹೋಗುವುದೆಂದು ಹಾಗೂ ಮೊಬೈಲ್ ಸಂಖ್ಯೆಯನ್ನು ತಪ್ಪಾಗಿ ಕೊಟ್ಟು ಅಸ್ಪಷ್ಟ ಮಾಹಿತಿ ನೀಡಿದ್ದಾರೆ. ಗುತ್ತಿಗಾರಿಗೆ ಹೋಗುವುದಾದರೆ ಪುತ್ತೂರು-ಜಾಲ್ಸೂರು ಮಾರ್ಗ ಹತ್ತಿರದ ರಸ್ತೆ ಆಗಿರುವಾಗ ಈ ಮಾರ್ಗವಾಗಿ ಬರುವ ಅಗತ್ಯವೇನಿತ್ತು?
ಅದೇ ರೀತಿ ಮನೆಯವರ ಬಳಿ ಅಪಘಾತವಾಗಿದೆ ಎಂದು ಸುಳ್ಳು ಹೇಳಿರುವುದು ಯಾಕೆ? ತಡರಾತ್ರಿಯಲ್ಲಿ ಅಂತಹ ಅನಿವಾರ್ಯ ಕೆಲಸವಾದರೂ ಏನು ?  ಅಥವಾ ಬೇರೇನಾದರು ಸಮಾಜಘಾತುಕ ಕೆಲಸಕ್ಕೆ ಬಂದವರೇ? ಇಂತಹ ಹಲವಾರು ಸಂಶಯಗಳು ಜನರೆಡೆಯಲ್ಲಿ ಚರ್ಚೆಯ ವಿಷಯವಾಗಿದೆ. ಹಾಗಾಗಿ ಪೋಲೀಸ್ ಇಲಾಖೆ ಈ ಪ್ರಕರಣವನ್ನು ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಈ ಘಟನೆಯ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕೆಂದು   ಆಗ್ರಹಿಸಿದ್ದಾರೆ. ಹಾಗೂ ನಾಪತ್ತೆಯಾಗಿರುವ ಯುವಕರು ಆದಷ್ಟು ಬೇಗ ಪತ್ತೆಯಾಗಿ ಪ್ರಕರಣವು ಸುಖಾಂತ್ಯವಾಗಲಿ ಎಂದು ಹೇಳಿದ್ದಾರೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 03-03-2025 | ಬಿಸಿಲಿನ ವಾತಾವರಣ ಮುಂದುವರಿಕೆ | ಮಾ.6 ರ ನಂತರ ಅಲ್ಲಲ್ಲಿ ತುಂತುರು ಮಳೆ ನಿರೀಕ್ಷೆ |
March 3, 2025
11:46 AM
by: ಸಾಯಿಶೇಖರ್ ಕರಿಕಳ
ಚಿಕ್ಕಮಗಳೂರಿನ ಅರಣ್ಯದಲ್ಲಿ ಕಾಡ್ಗಿಚ್ಚು | 20 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ
March 3, 2025
7:42 AM
by: The Rural Mirror ಸುದ್ದಿಜಾಲ
Weather Update | ಕೆಲವು ಕಡೆ ಮಳೆ ಸಾಧ್ಯತೆ | ಕರಾವಳಿ ಜಿಲ್ಲೆಗೆ ಇಂದೂ ಹೀಟ್‌ವೇವ್‌ ಎಚ್ಚರಿಕೆ |
March 3, 2025
7:28 AM
by: The Rural Mirror ಸುದ್ದಿಜಾಲ
ಕುಂಭಮೇಳ | ಆ ಪ್ರಯಾಣದಲ್ಲಿ ಕಂಡದ್ದು ಏನೇನು..? ಅದೊಂದು ಸಿಹಿ ನಮಗೂ ಹೊಸದು…!
March 3, 2025
7:06 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

You cannot copy content of this page - Copyright -The Rural Mirror