ಬೀದರ್‌ನ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕನ್ನಡ ಕೃಷಿ ಡಿಪ್ಲೊಮಾ ಕೋರ್ಸ್‌ ಬಂದ್‌ | ವಿದ್ಯಾರ್ಥಿಗಳ ಆಕ್ರೋಶ

July 2, 2024
10:22 AM

ರೈತರ(Farmer) ಮಕ್ಕಳು(Children) ಕೃಷಿ(Agriculture) ಬೇಡ ಅಂತ ಪಟ್ಟಣದ ದಾರಿ ಹಿಡಿತಿದ್ದಾರೆ. ಈ ಮಧ್ಯೆ ಕೆಲವೊಂದು ವಿದ್ಯಾರ್ಥಿಗಳು ಕೃಷಿ ವಿಜ್ಞಾನ(Agriculture science) , ಅಥವಾ ಕೃಷಿ ಪರ ಕೋರ್ಸ್‌ಗಳನ್ನು(Agriculture courses) ತಕ್ಕ ಮಟ್ಟಿಗೆ ತೆಗೆದುಕೊಳ್ಳುವ ಮನಸ್ಸುಗಳನ್ನು ಮಾಡುತ್ತಿದ್ದಾರೆ. ಅದರ ಮಧ್ಯೆ ಬೀದರ್(Bidar) ತಾಲೂಕಿನ  ಜನವಾಡ ಸಮೀಪದ ಕೃಷಿ ಸಂಶೋಧನಾ ಕೇಂದ್ರದ(Agriculture research center) ಆವರಣದಲ್ಲಿ ನಡೆಯುತ್ತಿದ್ದ ಕನ್ನಡ ಕೃಷಿ ಡಿಪ್ಲೊಮಾ ಕೋರ್ಸ್‌ ಪ್ರಸಕ್ತ ವರ್ಷದಿಂದ ಸ್ಥಗಿತಗೊಳಿಸಲು ಕರ್ನಾಟಕ ಸರ್ಕಾರ (Karnataka Govt) ನಿರ್ಧಾರ ಮಾಡಿದೆ.

Advertisement
ಈ ಭಾಗದ ರೈತರ ಮಕ್ಕಳಿಗೆ ಸಹಾಯವಾಗಲೆಂದು 2012ರಲ್ಲಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಕೃಷಿ ಡಿಪ್ಲೊಮಾ ಕೋರ್ಸ್‌ (Bidar Agriculture Diploma Courses) ಆರಂಭಿಸಲಾಗಿತ್ತು. ಕೃಷಿ ವಿಜ್ಞಾನ ಕೇಂದ್ರ ರಾಯಚೂರು ಅಡಿಯಲ್ಲಿ ಎಸ್‌ಎಸ್‌ಎಲ್‌ಸಿ (SSLC) ಬಳಿಕ ವಿದ್ಯಾರ್ಥಿಗಳು ಎರಡು ವರ್ಷದ ಡಿಪ್ಲೊಮಾ ಕೋರ್ಸ್ ಮಾಡುತ್ತಿದ್ದರು. ಕಳೆದ ವರ್ಷವು ಎರಡು ತರಗತಿ ಸೇರಿ 90ಕ್ಕೂ ಅಧಿಕ ವಿದ್ಯಾರ್ಥಿಗಳು ಡಿಪ್ಲೊಮಾ ಪದವಿ ಓದಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಆರಾಧ್ಯ ಜಾದವ್ ಪ್ರತಿಕ್ರಿಯಿಸಿ, ಕೋಟ್ಯಂತರ ರೂ. ಖರ್ಚುಮಾಡಿ ಕೃಷಿ ವಿದ್ಯಾಲಯವನ್ನು ಸ್ಥಾಪಿಸಲಾಗಿದೆ. 2 ವರ್ಷದ ಡಿಪ್ಲೊಮಾದಿಂದಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ ಬೀಳುವುದಿಲ್ಲ. ಸರ್ಕಾರ ಕೃಷಿ ಡಿಪ್ಲೊಮಾ ಕಾಲೇಜು ಬಂದ್ ಮಾಡಿದ್ದರಿಂದ ಎಲ್ಲಾ ಉಪಕರಣಗಳು ತುಕ್ಕು ಹಿಡಿಯುತ್ತಿದ್ದು ಕ್ಲಾಸ್‌ಗಳು ಧೂಳು ತಿನ್ನುತ್ತಿವೆ. 12 ವರ್ಷದಿಂದ ನಡೆಯುತ್ತಿದ್ದ ತರಗತಿಗಳು ಬಂದಾಗಿದ್ದು ಗ್ರಾಮೀಣ ಭಾಗದ ಮಕ್ಕಳಿಗೆ ಭಾರೀ ನಷ್ಟವಾಗಿದೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಗಮನಿಸಿ ಕೃಷಿ ಡಿಪ್ಲೊಮಾ ಪ್ರಾರಂಭಕ್ಕೆ ಮುತುವರ್ಜಿ ವಹಿಸಬೇಕಿದೆ ಎಂದು ಮನವಿ ಮಾಡಿದರು.

  • ಅಂತರ್ಜಾಲ ಮಾಹಿತಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 11-04-2025 | ಕೆಲವು ಕಡೆ ಗುಡುಗು ಸಹಿತ ಮಳೆ ಸಾಧ್ಯತೆ | ಮುಂದಿನ 10 ದಿನಗಳವರೆಗೂ ಮಳೆ ಅಲ್ಲಲ್ಲಿ ಮಳೆಯ ಸಾಧ್ಯತೆ
April 11, 2025
12:06 PM
by: ಸಾಯಿಶೇಖರ್ ಕರಿಕಳ
ಪರಿಸರಕ್ಕೆ ಕೊಡುಗೆಯಾಗಬಹುದು ಅಡಿಕೆ ಮರ | ಅಡಿಕೆ ಮರಕ್ಕೆ ಮೌಲ್ಯ ತರಲು ಒಂದು ದಾರಿ | ಒಂದು ಮರಕ್ಕೆ ಕನಿಷ್ಟ 700 ರೂಪಾಯಿ ಪಡೆಯಬಹುದು ಹೇಗೆ ?
April 11, 2025
7:52 AM
by: ವಿಶೇಷ ಪ್ರತಿನಿಧಿ
2026 ರ ವೇಳೆಗೆ ತುಮಕೂರಿಗೆ ಎತ್ತಿನಹೊಳೆ ನೀರು
April 11, 2025
7:00 AM
by: The Rural Mirror ಸುದ್ದಿಜಾಲ
ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಂಭವ | ಹವಾಮಾನ ಇಲಾಖೆ ಮುನ್ಸೂಚನೆ
April 11, 2025
6:10 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group