#KarnatakaBandh | ನಾಳೆ ಕಾವೇರಿಗಾಗಿ ಬಂದ್ ಆಗಲಿದೆ ಕನ್ನಡನಾಡು : ಬಂದ್​ಗೆ ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡುತ್ತಿರುವ ಕನ್ನಡಪರ ಹೋರಾಟಗಾರು

September 28, 2023
3:18 PM
ರಾಜ್ಯದ ತುಂಬೆಲ್ಲಾ ಕನ್ನಡಪರ ಹೋರಾಟಗಾರು ರಸ್ತೆಗೆ ಇಳಿದಿದ್ದು, ನಾಳೆಯ ಕರ್ನಾಟಕ ಬಂದ್​ಗೆ ಬೆಂಬಲಿಸುವಂತೆ ಜನರಲ್ಲಿ ಮನವಿ ಜೊತೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ನಾಳೆ ಅಂದ್ರೆ ಸೆಪ್ಟೆಂಬರ್ 29ರಂದು ಅಗತ್ಯ ಸೇವೆಗಳನ್ನ ಹೊರತುಪಡಿಸಿ ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟು ಮತ್ತು ವ್ಯವಹಾರಗಳು ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ. ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕರ್ನಾಟಕ ಬಂದ್ ಆಗಲಿದೆ.

ಕಾವೇರಿಗಾಗಿ ಮಂಗಳವಾರ ಬೆಂಗಳೂರು ಹಾಗೂ ಕಾವೇರಿ ಜಲಾನಯನದ ಜಿಲ್ಲೆಗಳಲ್ಲಿ ಬಂದ್‌ ಆಚರಿಸಲಾಗಿತ್ತು. ಆದರೆ ಕಾವೇರಿ ನೀರು ಮಾತ್ರ ಇನ್ನು ತಮಿಳುನಾಡಿಗೆ ಹರಿಯುತ್ತಲೇ ಇದೆ. ಕನ್ನಡಿಗರ ಕಷ್ಟಕ್ಕೆ ಯಾರು ಸ್ಪಂದಿಸುವವರು ಯಾರು ಇಲ್ಲ ಅನ್ನಿಸುತ್ತದೆ. ರಾಜ್ಯದಲ್ಲಿ ಮಳೆಯ ಕೊರತೆ ಉಂಟಾಗಿದ್ರೂ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಯುತ್ತಿರೋದನ್ನು ಖಂಡಿಸಿ ಕನ್ನಡ ಪರ ಹೋರಾಟಗಾರರು ಕರ್ನಾಟಕ ಬಂದ್​ಗೆಕರೆ ಕೊಟ್ಟಿದ್ದಾರೆ.

Advertisement
Advertisement

ಈಗಾಗಲೇ ರಾಜ್ಯದ ತುಂಬೆಲ್ಲಾ ಕನ್ನಡಪರ ಹೋರಾಟಗಾರು ರಸ್ತೆಗೆ ಇಳಿದಿದ್ದು, ನಾಳೆಯ ಕರ್ನಾಟಕ ಬಂದ್​ಗೆ ಬೆಂಬಲಿಸುವಂತೆ ಜನರಲ್ಲಿ ಮನವಿ ಜೊತೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ನಾಳೆ ಅಂದ್ರೆ ಸೆಪ್ಟೆಂಬರ್ 29ರಂದು ಅಗತ್ಯ ಸೇವೆಗಳನ್ನ ಹೊರತುಪಡಿಸಿ ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟು ಮತ್ತು ವ್ಯವಹಾರಗಳು ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ. ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕರ್ನಾಟಕ ಬಂದ್ ಆಗಲಿದೆ ಎಂದು ಕನ್ನಡಪರ ಹೋರಾಟಗಾರು ಮಾಹಿತಿ ನೀಡಿದ್ದಾರೆ.

ಇನ್ನು ರಾಜಧಾನಿ ಈ ವಾರದಲ್ಲಿ ಎದುರಿಸುತ್ತಿರೋ ಎರಡನೇ ಬಂದ್ ಆಗಿದೆ. ಮಂಗಳವಾರ ರೈತಪರ ಸಂಘಟನೆಗಳಿಗೆ ಕರೆ ಕೊಟ್ಟಿದ್ದ ಬೆಂಗಳೂರು ಬಂದ್ ಭಾಗಶಃ ಯಶಸ್ವಿಯಾಗಿತ್ತು. ಶಾಲಾ-ಕಾಲೇಜುಗಳು ಬಂದ್ ಆಗಿದ್ದವು. ರಸ್ತೆಗೆ ಬಸ್​ಗಳು ಇಳಿದಿದ್ರೂ ಪ್ರಯಾಣಿಕರು ಇರಲಿಲ್ಲ. ಶುಕ್ರವಾರದ ಕರ್ನಾಟಕ ಬಂದ್​ಗೆ ರಾಜಧಾನಿಯ ಖಾಸಗಿ ಶಾಲೆಗಳು ನೈತಿಕ ಬೆಂಬಲ ನೀಡೋದಾಗಿ ಹೇಳಿವೆ. ರಾಜ್ಯದಲ್ಲಿ ಬಿಎಂಟಿಸಿ, ಕೆಎಸ್​​ಆರ್​ಟಿಸಿ ಬಸ್​ಗಳು ರಸ್ತೆಗಿಳಿಯುವ ಸಾಧ್ಯತೆಗಳೂ ಇವೆ. ಇಂದು ಸಂಜೆ ಎಲ್ಲವೂ ಅಧಿಕೃತವಾಗಲಿದೆ. ಸದ್ಯದ ಮಾಹಿತಿ ಪ್ರಕಾರ ನಾಳೆ ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ ಎಂಬುದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಏನಿರುತ್ತೆ?: ಅಗತ್ಯ ಸೇವೆಗಳಾದ ಹಾಲು, ದಿನ ಪತ್ರಿಕೆ, ವೈದ್ಯಕೀಯ ಸೇವೆಗಳು, ಮೆಡಿಕಲ್ ಶಾಪ್ ಇರಲಿದೆ. ಇನ್ನು KSRTC, BMTC ಸೇರಿದಂತೆ ಸಾರಿಗೆ ವ್ಯವಸ್ಥೆಯ ನಿರ್ಧಾರ ಇನ್ನೂ ಪ್ರಕಟವಾಗಿಲ್ಲ. ಖಾಸಗಿ ಸಾರಿಗೆ ಒಕ್ಕೂಟ ತಟಸ್ಥ ನಿಲುವು ತೆಗೆದುಕೊಂಡಿದೆ.

ಏನಿರಲ್ಲ? ಮಾಲ್, ಓಲಾ, ಓಬರ್ ಆಟೋ ಕ್ಯಾಬ್ ಸೇವೆ ಇರಲ್ಲ. ಎಲ್ಲಾ ಚಿತ್ರಮಂದಿರಗಳು ಬಂದ್ ಆಗಲಿವೆ. ಸಿನಿಮಾ, ಧಾರಾವಾಹಿಗಳ ಚಿತ್ರೀಕರಣ ಸಹ ಸ್ತಬ್ಧವಾಗಲಿದೆ. ಪ್ರತಿಭಟನಾಕಾರರು ರಸ್ತೆಗಿಳಿದು ಪ್ರತಿಭಟನೆ ನಡೆಸೋ ಸಾಧ್ಯತೆ ಇರೋ ಕಾರಣ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರದಲ್ಲಿ ಏರುಪೇರು ಆಗಬಹುದು. ಇನ್ನು ಶಾಲಾ-ಕಾಲೇಜುಗಳು ತೆರೆಯೋದು ಅನುಮಾನ ಎಂದು ಅಂದಾಜಿಸಲಾಗಿದೆ.

Advertisement

– ಅಂತರ್ಜಾಲ ಮಾಹಿತಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ
July 26, 2025
10:25 PM
by: The Rural Mirror ಸುದ್ದಿಜಾಲ
ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ
July 26, 2025
10:13 PM
by: The Rural Mirror ಸುದ್ದಿಜಾಲ
ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ
July 26, 2025
10:05 PM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ
July 26, 2025
9:12 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group