ಮಣ್ಣು,ನೀರು ಮತ್ತು ಗಾಳಿಯಲ್ಲಿ ಮೈಕ್ರೋ ಪ್ಲಾಸ್ಟಿಕ್ | ಅಧ್ಯಯನ ವರದಿಯಲ್ಲಿ ಆತಂಕದ ಅಂಶ ಬಹಿರಂಗ |

November 3, 2024
4:24 PM
ಒಂದು ಲೀಟರ್ ಸಮುದ್ರದ ನೀರಿನಲ್ಲಿ 2640 ಮೈಕ್ರೋಪ್ಲಾಸ್ಟಿಕ್ ಕಣಗಳು ಕಂಡುಬಂದಿವೆ, ಅವುಗಳಲ್ಲಿ ಹೆಚ್ಚಿನವು ನೈಲಾನ್ ಪಾಲಿಸ್ಟೈರೀನ್ ಫೈಬರ್‌ ಗಳಾಗಿವೆ. ಅಲ್ಲದೆ, ನೀರಿನಲ್ಲಿ ಪ್ಲಾಸ್ಟಿಕ್ ಬಣ್ಣಗಳ ಅಂಶವು ಹೆಚ್ಚು. ಇದೆಲ್ಲಾ ಇಂದು ಕ್ಯಾನ್ಸರ್, ಹೃದ್ರೋಗ ಮತ್ತು ಇತರ ಅಸ್ವಸ್ಥತೆಗಳಂತಹ ಕಾಯಿಲೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ವರದಿ ಉಲ್ಲೇಖಿಸಿದೆ.

ಕಣ್ಣೂರು ಬ್ಲಾಕ್ ಪಂಚಾಯತ್ ನಡೆಸಿದ ಅಧ್ಯಯನ ವರದಿಯ ಪ್ರಕಾರ ಮಣ್ಣು, ನೀರು ಮತ್ತು ಗಾಳಿಯಲ್ಲಿ ಮೈಕ್ರೋ ಪ್ಲಾಸ್ಟಿಕ್ ಕಣಗಳು ಹೆಚ್ಚಾಗುತ್ತಿವೆ. ಖ್ಯಾತ ಪರಿಸರ ವಿಜ್ಞಾನಿ ಡಾ.ಎಂ.ಕೆ.ಸತೀಶ್ ಕುಮಾರ್ ನೇತೃತ್ವದ ತಂಡವು ಆಕಾಶವಾಣಿ ಕಣ್ಣೂರು ಜಿಲ್ಲೆಯ ಅಝಿಕೋಡ್ ಚಾಲ್ ಬೀಚ್ ನಿಂದ ಅಜಿಕಲ್ ವರೆಗಿನ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ಸಮುದ್ರದ ನೀರಿನ ಕುರಿತು ವಿವರಗಳೊಂದಿಗೆ ಅಧ್ಯಯನ ನಡೆಸಿದೆ.…..ಮುಂದೆ ಓದಿ….

Advertisement
Advertisement
Advertisement

ರಾಜ್ಯದ ಸ್ಥಳೀಯ ಸಂಸ್ಥೆಯು ಸಮುದ್ರದ ನೀರಿನಲ್ಲಿ ಹಾಗೂ ಕುಡಿಯುವ ನೀರಿನಲ್ಲಿ ಮೈಕ್ರೋಪ್ಲಾಸ್ಟಿಕ್ ಬಗ್ಗೆ ಅಧ್ಯಯನವನ್ನು ಪ್ರಾರಂಭಿಸಿರುವುದು ಇದೇ ಮೊದಲು. ಸಾಗರ ಪರಿಸರದಲ್ಲಿರುವ ಮೈಕ್ರೋಪ್ಲಾಸ್ಟಿಕ್‌ಗಳು ಮಾನವನ ಆರೋಗ್ಯದ ಮೇಲಿನ ಅಪಾಯವನ್ನು ಹೆಚ್ಚಿಸುತ್ತವೆ. ಏಕೆಂದರೆ ಅವು ಆಹಾರ ಸರಪಳಿಯಲ್ಲಿ ಕೂಡಾ ಸಂಗ್ರಹವಾಗುತ್ತದೆ. ಸಮುದ್ರ ಆಹಾರ ಮತ್ತು ನಾವು ಕುಡಿಯುವ ನೀರಿನಲ್ಲಿ ಒಳಗೊಂಡಿರುತ್ತದೆ. ಈ ಹಿನ್ನೆಲೆಯಲ್ಲಿ ಕಣ್ಣೂರು ಬ್ಲಾಕ್ ಪಂಚಾಯತ್ ನಡೆಸಿದ ಅಧ್ಯಯನ ವರದಿ ಪ್ರಮುಖ ಪಾತ್ರವಹಿಸಿದೆ. ಮೈಕ್ರೋಪ್ಲಾಸ್ಟಿಕ್ ಗಳು ​​ಜೀವಕೋಶದ ಪೊರೆಗಳನ್ನು ಭೇದಿಸುವಷ್ಟು ಚಿಕ್ಕದಾಗಿದೆ. ಇವು ಸೆಲ್ಯುಲಾರ್ ಕಾರ್ಯಗಳಿಗೆ ಅಡ್ಡಿಪಡಿಸುವ ಸಾಧ್ಯತೆ ಇದ್ದು, ಇದರಿಂದ ಉರಿಯೂತ ಉಂಟಾಗಬಹುದು. ಇದು ಕ್ಯಾನ್ಸರ್, ಹೃದ್ರೋಗ ಮತ್ತು ಇತರ ಅಸ್ವಸ್ಥತೆಗಳಂತಹ ಕಾಯಿಲೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ವರದಿ ಉಲ್ಲೇಖಿಸಿದೆ. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಕೇರಳ ಯೂನಿವರ್ಸಿಟಿ ಆಫ್ ಫಿಶರೀಸ್ ಮತ್ತು ಓಷನ್ ಸ್ಟಡೀಸ್‌ನ ಸಂಶೋಧಕರ ಸಹಾಯದಿಂದ ಕಣ್ಣೂರು ಬ್ಲಾಕ್ ಪಂಚಾಯತ್ ಈ ಅಧ್ಯಯನವನ್ನು ನಡೆಸಿತ್ತು.

Advertisement

ಒಂದು ಲೀಟರ್ ಸಮುದ್ರದ ನೀರಿನಲ್ಲಿ 2640 ಮೈಕ್ರೋಪ್ಲಾಸ್ಟಿಕ್ ಕಣಗಳು ಕಂಡುಬಂದಿವೆ, ಅವುಗಳಲ್ಲಿ ಹೆಚ್ಚಿನವು ನೈಲಾನ್ ಪಾಲಿಸ್ಟೈರೀನ್ ಫೈಬರ್‌ ಗಳಾಗಿವೆ. ಅಲ್ಲದೆ, ನೀರಿನಲ್ಲಿ ಪ್ಲಾಸ್ಟಿಕ್ ಬಣ್ಣಗಳ ಅಂಶವು ಹೆಚ್ಚು. ನೈಲಾನ್ ಹಗ್ಗಗಳನ್ನು ಚೆನ್ನಾಗಿ ಪುಲ್ಲಿಗಳಲ್ಲಿ ಬಳಸಲಾಗುತ್ತದೆ. ಬಾವಿಗಳಿಗೆ ಬಳಸುವ ಪ್ಲಾಸ್ಟಿಕ್ ಬಲೆಗಳು, ಅಡುಗೆ ಮನೆಯಲ್ಲಿ ಬಳಸುವ ಕಟಿಂಗ್ ಬೋರ್ಡ್ ಗಳು, ಲಿಪ್ ಸ್ಟಿಕ್ ಇತ್ಯಾದಿಗಳ ಮೂಲಕ ಮೈಕ್ರೋಪ್ಲಾಸ್ಟಿಕ್ ಕಣಗಳು ಮಾನವನ ದೇಹವನ್ನು ಸೇರುತ್ತವೆ ಎಂದೂ ವರದಿ ಹೇಳುತ್ತದೆ.

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಹಾಗೂ ಮೈಕ್ರೊಪ್ಲಾಸ್ಟಿಕ್ ಕಣಗಳು ಮನುಷ್ಯನ ದೇಹ ಸೇರದಂತೆ ವಿವಿಧ ಯೋಜನೆಗಳನ್ನು ಆರಂಭಿಸಲಾಗುವುದು ಎಂದು ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಕೆ.ಸಿ.ಜಿಷಾ ‌ ಹೇಳುತ್ತಾರೆ.

Advertisement

ನೀರಿನಲ್ಲಿ ಬರುವ ಸಣ್ಣ ಚೂರು ಪ್ಲಾಸ್ಟಿಕ್‌, ನಾರುಗಳು, ಪ್ಲಾಸ್ಟಿಕ್ ಹಾಳೆಗಳು, ಫೋಮ್ ಸೇರಿದಂತೆ ಮೈಕ್ರೋಪ್ಲಾಸ್ಟಿಕ್ ಅವಶೇಷಗಳನ್ನು  ಅಧ್ಯಯನ ತಂಡ ಗುರುತಿಸಿದೆ. ಈ ಸಣ್ಣ ಪ್ಲಾಸ್ಟಿಕ್ ಕಣಗಳು, ಬರಿಗಣ್ಣಿಗೆ ಸಾಮಾನ್ಯವಾಗಿ ಕಾಣುವುದಿಲ್ಲ, ಆದರೆ ಸಮುದ್ರ ಜೀವಿಗಳಿಗೆ ಗಂಭೀರ ಅಪಾಯವನ್ನುಂಟುಮಾಡುತ್ತವೆ. ಕೇರಳವು ವಿಶೇಷವಾಗಿ ಸಮುದ್ರ ಮಾಲಿನ್ಯಕ್ಕೆ ಗುರಿಯಾಗುತ್ತಿದೆ .ಸರ್ಕಾರ ಹಾಗೂ ಸ್ಥಳೀಯ ಅಧಿಕಾರಿಗಳು ಕರಾವಳಿ ಪರಿಸರ ವ್ಯವಸ್ಥೆಗಳ ಸೂಕ್ಷ್ಮ ಸಮತೋಲನವನ್ನು ರಕ್ಷಿಸಲು ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎನ್ನುವುದು ಸಂಶೋಧಕ ಸತೀಶ್ ಕುಮಾರ್ ಅವರ ಅಭಿಪ್ರಾಯವಾಗಿದೆ.

ಆತಂಕದ ಮತ್ತೊಂದು ಅಂಶವೆಂದರೆ, ಪ್ಲಾಸ್ಟಿಕ್ ತುಣುಕುಗಳಲ್ಲಿ ಕಂಡುಬರುವ ಬಣ್ಣಗಳು ಕೂಡಾ ಸಮಸ್ಯೆಯಾಗುತ್ತವೆ. ಉದಾಹರಣೆಗೆ ತಾಮ್ರದ ಥಾಲೋಸೈನೈನ್ ಮತ್ತು ಇಂಡಿಗೊ ನೀಲಿ, ಅವುಗಳ ವಿಷ ವೈಜ್ಞಾನಿಕವಾಗಿ ಗಂಭೀರ ಪರಿಣಾಮಗಳಿಗೆ ಕಾರಣವಾಗಿದೆ. ಸಮುದ್ರ ಪ್ರಾಣಿಗಳು ಈ ಕಣಗಳನ್ನು ಸೇವಿಸುವುದರಿಂದ, ರಾಸಾಯನಿಕಗಳು ಜೈವಿಕವಾಗಿ ಸಂಗ್ರಹವಾಗುತ್ತದೆ. ಅದು ಆಹಾರದ ಮೂಲಕ ಮಾನವನ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಮೈಕ್ರೊಪ್ಲಾಸ್ಟಿಕ್‌ಗಳು ಶ್ವಾಸಕೋಶಕ್ಕೆ ಹಾನಿ ಮಾಡುವುದಲ್ಲದೆ  ಲಿವರ್‌ ನಂತಹ ದೇಹದ ಪ್ರಮುಖ ಅಂಗಗಳಲ್ಲಿ ಶೇಖರಗೊಳ್ಳುತ್ತವೆ, ಕಿಣ್ವಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತವೆ ಇದು ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ಪರಿಸರದಲ್ಲಿನ ಮೈಕ್ರೋಪ್ಲಾಸ್ಟಿಕ್ ನಿಯಂತ್ರಣವು ಸಾರ್ವಜನಿಕ ಕಾಳಜಿಯ ವಿಷಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಆಗಾಗ ಎಚ್ಚರಿಸಿದೆ.

Advertisement

A recent study conducted by Kannur Block Panchayath has revealed an increasing presence of microplastic particles in soil, water, and air. Renowned environmental scientist Dr. M K Satish Kumar led a team in conducting a comprehensive examination of the quality of drinking water and sea water in the area stretching from Azhikode Chal beach to Ajikal in Kannur district.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಹವಾಮಾನ ವರದಿ| 21-11-2024 | ಮಳೆಯ ಸಾಧ್ಯತೆ ಕಡಿಮೆ | ನ.26 ಸುಮಾರಿಗೆ ಚಂಡಮಾರುತ ಸಾಧ್ಯತೆ |
November 21, 2024
2:52 PM
by: ಸಾಯಿಶೇಖರ್ ಕರಿಕಳ
ದ ಕ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ
November 20, 2024
8:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-11-2024 | ರಾಜ್ಯದಲ್ಲಿ ಒಣಹವೆ | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ |
November 20, 2024
5:38 PM
by: ಸಾಯಿಶೇಖರ್ ಕರಿಕಳ
ರಾಜ್ಯದ ಕೈಗಾರಿಕೆಗಳಲ್ಲಿ ಹಸಿರು ತಂತ್ರಜ್ಞಾನ ಅಳವಡಿಸಲು ಆದ್ಯತೆ | ಮುಖ್ಯಮಂತ್ರಿ ಸಿದ್ದರಾಮಯ್ಯ
November 20, 2024
5:05 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror