ಯೂಟ್ಯೂಬ್, ಮ್ಯೂಸಿಕ್ ಆ್ಯಪ್ಗಳಿಂದ ‘ವರಾಹ ರೂಪಂ..’ ಹಾಡನ್ನು ಡಿಲೀಟ್ ಮಾಡಲಾಗಿದೆ. ‘ನವರಸಂ..’ ಹಾಡಿನಲ್ಲಿರುವ ಟ್ಯೂನ್ ‘ವರಾಹ ರೂಪಂ..’ನಲ್ಲಿ ಬಳಕೆ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು.ಇಷ್ಟು ಮಾತ್ರವಲ್ಲದೇ ಕೇರಳದ ಕೋರ್ಟ್ ಕೂಡ ಹಾಡನ್ನು ಬಳಕೆ ಮಾಡದಂತೆ ಆದೇಶವನ್ನು ನೀಡಿತ್ತು.
ಕಾಂತಾರ ಚಿತ್ರಕ್ಕೆ ತೈಕ್ಕುಡಂ ಬ್ರಿಡ್ಜ್ ಎಂಬ ಕಂಪನಿ ನಮ್ಮ ಹಾಡನ್ನು ಕಾಂತಾರ ಚಿತ್ರದಲ್ಲಿ ಕಾಪಿ ಮಾಡಲಾಗಿದೆ ಎಂದು ಕೇಸನ್ನು ದಾಖಲಿಸಿತ್ತು. ಪರಿಣಾಮವಾಗಿ ಕೇರಳದ ಸ್ಥಳೀಯ ನ್ಯಾಯಾಲಯ ಕಾಂತಾರ ಚಿತ್ರದಲ್ಲಿ ವರಾಹ ರೂಪಂ ಹಾಡನ್ನು ಪ್ರಸಾರ ಮಾಡುವಂತಿಲ್ಲ ಎಂದು ನೋಟಿಸ್ ನೀಡಿತ್ತು.ಈ ನಡುವೆ ಚಿತ್ರತಂಡದವರು ಕೂಡ ಹಾಡು ತಮ್ಮದೇ ಸ್ವರಚಿತವಾಗಿದೆ ಅಂತ ವಾದ ಮಾಡಿತ್ತು.ಈಗ ‘ಹೊಂಬಾಳೆ ಫಿಲ್ಮ್ಸ್’ ಯೂಟ್ಯೂಬ್ ಚಾನೆಲ್ನಿಂದ ಈ ಹಾಡನ್ನು ಡಿಲೀಟ್ ಮಾಡಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel