ಧೂಳೆಬ್ಬಿಸಲು ಬರುತ್ತಿದೆ ನವ ಪ್ರತಿಭೆಗಳ ನೂತನ ಚಿತ್ರ -ಕಪೋ ಕಲ್ಪಿತಂ

Advertisement
Advertisement
ವಿಭಿನ್ನತೆ ಇರುವ ವಿಭಿನ್ನ ನಿರೂಪಣೆಯ ಹೊಸ ಪ್ರತಿಭೆಗಳ ಹಾಗು ಚಿರಪಚಿತ ಪ್ರತಿಭಾವಂತ ಕಲಾವಿದರ ಸಂಗಮವಾಗಿದೆ ಕಪೋ ಕಲ್ಪಿತಂ.
ಸವ್ಯಸಾಚಿ ಕ್ರಿಯೇಷನ್ ಚಿತ್ರ ಸಂಸ್ಥೆಯ ದ್ವಿತೀಯ ಕೊಡುಗೆಯಾಗಿರುವ ಈ ಚಿತ್ರ ಕೇವಲ 5 ದಿವಸದಲ್ಲಿ ಚಿತ್ರೀಕರಣ ಸಂಪೂರ್ಣ ಗೊಳಿಸಿದ ಚಿತ್ರವಾಗಿದೆ ಜೊತೆಗೆ ಒಂದೇ ಲೊಕೇಷನ್ ನಲ್ಲಿ 90 ಪ್ರತಿಶತ ಚಿತ್ರೀಕರಣ ಗೊಂಡ ಸಿನಿಮಾ ಹಾಗೆ ಗಿಂಬಲ್ ನಲ್ಲಿ ಸಂಪೂರ್ಣ ಚಿತ್ರೀಕರಣ ಗೊಂಡ ಚಿತ್ರ ಎಂಬ ಅನೇಕ ವಿಶೇಷಕ್ಕೆ ಈ ಚಿತ್ರ ಸಾಕ್ಷಿಯಾಗಿದೆ.
ನವ ಪ್ರತಿಭೆ ಹಾಗು ಪ್ರಬುದ್ಧ ನಟ ನಟಿಯರ ಸಮಾಗಮ ವಾಗಲಿದೆ ಕಪೋ ಕಲ್ಪಿತಂ.. ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಸುಮಿತ್ರ ಗೌಡ ಪ್ರೀತಂ ಹೊರನಾಡು, ರಾಜೇಶ್ ಕಣ್ಣೂರ್, ಮಜಾಭಾರತ ಕಲಾವಿದ  ಶಿವರಾಜ್ ಕರ್ಕೇರ, ಅಮೋಘ್ ಕೊಡಂಗಳ, ದೀಕ್ಷಿತ್ ಗೌಡ , ವಿನೀತ್ ಶೆಟ್ಟಿ, ಡಾ.ಕಾಸರಗೋಡು ಅಶೋಕ್ ಕುಮಾರ್,  ವಿಶಾಲ್, ಸರೋಜಾ ರಾವ್, ಮಾಸ್ಟರ್ ನಿಕ್ಷಿತ್, ವಿದ್ಯಾ ಪ್ರಶಾಂತ್,ಚೈತ್ರ  ಹಾಗು ಭಾಸ್ಕರ್ ಮಣಿಪಾಲ್ ನಟಿಸಿದ್ದಾರೆ..
ಕನ್ನಡ ಹಾಗು ಹಿಂದಿ ಭಾಷೆಯಲ್ಲಿ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿರುವ ಕಪೋ ಕಲ್ಪಿತಂ ಸವ್ಯಸಾಚಿ ಕ್ರಿಯೇಷನ್ ಬ್ಯಾನರ್ ನ ಚಿತ್ರವಾಗಿದ್ದು ಚಿತ್ರವನ್ನು ಸುಮಿತ್ರ ಗೌಡ ಹಾಗು ಕವಿತಾ ಕನ್ನಿಕಾ ಪೂಜಾರಿ ನಿರ್ಮಿಸಿದ್ದು, ಗಣಿ ದೇವ್ ಕಾರ್ಕಳ ಈ ಚಿತ್ರಕೆ ಕತೆ ಚಿತ್ರಕತೆ ಸಂಭಾಷಣೆ ಬರೆದಿದ್ದಾರೆ ಜೊತೆಗೆ ಈ ಚಿತ್ರಕೆ 2 ಹಾಡು ಬರೆದು ಸಂಗೀತ ನೀಡಿದ್ದಾರೆ.. ಬಾತು ಕುಲಾಲ್ ಚಿತ್ರೀಕರಣ ಹಾಗು ಸಂಕಲನ ಮಾಡಿದ್ದಾರೆ..
ಹರ್ಷ ಶೆಟ್ಟಿ ಅವರು ಕನ್ನಡ ವರ್ಷನ್ ನಲ್ಲಿ ಒಂದು ಹಾಡನ್ನು ಹಾಡಿ ಹಿಂದಿ ವರ್ಷನ್ ನಲ್ಲಿ ಒಂದು ಹಾಡನ್ನು ಬರೆದು ಚಿತ್ರದ ಸಂಗೀತ ಸಂಯೋಜನೆ ಮಾಡಿ ವಿಭಿನ್ನತೆಮೂಲಕ ಚಿತ್ರರಂಗ ಪ್ರವೇಶಿದರೆ ಲ್ಯಾಸ್ಟರ್ ಫೆರ್ನಾಂಡಿಸ್ ಅವರು ಮಿಕ್ಸಿಂಗ್ ಹಾಗು ಮಾಸ್ಟರಿಂಗ್ ಮುಕಾಂತರ ತಮ್ಮ ಪ್ರತಿಭೆ ತೋರಿಸಲಿದ್ದಾರೆ… ಪ್ರದೀಪ್ ಅವರು ಮೇಕಪ್  ನಲ್ಲಿ ಕೈಚಳಕ ತೋರಿಸದ್ದಾರೆ… ಕಪೋ ಕಲ್ಪಿತ ಚಿತ್ರದ ಮೊದಲ ದ್ವಿಭಾಷಾ ಚಿತ್ರದ ಪೋಸ್ಟರ್ ಇಂದು ಬಿಡುಗಡೆಗೊಂಡಿದೆ..
 ಚಿತ್ರ ಡಿಸೆಂಬರ್ ತಿಂಗಳಲ್ಲಿ ಮೊದಲಿಗೆ ವೋ ಟಿ ಟಿ ಪ್ಲಾಟ್ಫಾರ್ಮ್ ಗಳಲ್ಲಿ ತೆರೆಗಂಡು ನಂತರ ಸಿನಿಮಾ ರೀತಿಯಲ್ಲಿ ಬದಲಾವಣೆಗೊಳಿಸಿ ಚಿತ್ರಮಂದಿರಗಲ್ಲಿ ಫೆಬ್ರವರಿ ನಂತರ ತೆರೆಗಾಣಲಿದೆ ಎಂದು ಚಿತ್ರತಂಡ ತಿಳಿಸಿದೆ..
Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement
Advertisement

Be the first to comment on "ಧೂಳೆಬ್ಬಿಸಲು ಬರುತ್ತಿದೆ ನವ ಪ್ರತಿಭೆಗಳ ನೂತನ ಚಿತ್ರ -ಕಪೋ ಕಲ್ಪಿತಂ"

Leave a comment

Your email address will not be published.


*