ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್, ಕಾಪು ವತಿಯಿಂದ ಆಯೋಜಿಸಲಾದ ಆಹ್ವಾನಿತರ ಮುಕ್ತ ಚೆಸ್ ಸ್ಪರ್ಧೆಯು ಕಾಪುವಿನ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ನಾರಾಯಣ ಗುರು ಸ್ಪೋರ್ಟ್ಸ್ & ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಉಮಾನಾಥ ಕಾಪು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಹಾಗೂ ಆದರ್ಶ ಆಸ್ಪತ್ರೆ ಉಡುಪಿಯ ಹೃದ್ರೋಗ ತಜ್ಞ ಡಾ. ವಿಶು ಕುಮಾರ್ ಭಾಗವಹಿಸಿ, ವಿವಿಧ ವಿಭಾಗಗಳ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್‌ನ ಸ್ಥಾಪಕ ಸಾಕ್ಷಾತ್ ಯು.ಕೆ., ನಿರ್ದೇಶಕಿ ಸೌಂದರ್ಯ ಯು.ಕೆ. ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ವಿವಿಧ ವಯೋಮಿತಿಯ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ವಿಜೇತರಿಗೆ ಟ್ರೋಫಿ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಚೆಸ್ ಪಂದ್ಯಾಟದ ಮುಕ್ತ ವಿಭಾಗದಲ್ಲಿ
- ಪ್ರಥಮ: ಪ್ರಣವ್ ಪಿ.ಜೆ.
- ದ್ವಿತೀಯ: ಅಭಿನವ್ ಪಿ.
- ತೃತೀಯ: ಚಿನ್ಮಯ ಕೃಷ್ಣ
- ಬೆಸ್ಟ್ ವೆಟರನ್ ಪ್ಲೇಯರ್: ರಾಮ ಶೇರಿಗಾರ್
8 ವರ್ಷದೊಳಗಿನ ವಿಭಾಗದಲ್ಲಿ
- ಪ್ರಥಮ: ಸಾಮ್ರಾಟ್ ಬೆಳ್ಚಡ ಕೆ.
- ದ್ವಿತೀಯ: ಇಂಚರ ಉಡುಪ
- ತೃತೀಯ: ಅಭಯ್ ಉಡುಪ
12 ವರ್ಷದೊಳಗಿನ ವಿಭಾಗದಲ್ಲಿ
- ಪ್ರಥಮ: ಡಿಸೋಜ ವಿನೆಲ್ ಲಿಯೋನ್
- ದ್ವಿತೀಯ: ಯಾಯಿನ್ ಎಸ್. ಭಟ್
- ತೃತೀಯ: ಮಧ್ವ ವ್ಯಾಸರಾಜ್ ತಂತ್ರಿ
15 ವರ್ಷದೊಳಗಿನ ವಿಭಾಗದಲ್ಲಿ
- ಪ್ರಥಮ: ರಿಮಾ ರಾವ್ ಯು.ಬಿ.
- ದ್ವಿತೀಯ: ಅನ್ವಯ್ ಎ. ಕಾಮತ್
- ತೃತೀಯ: ಶ್ರೀಪಾದ
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾರ್ಥಿಗಳು ಹಾಗೂ ಪ್ರಶಸ್ತಿ ವಿಜೇತರಿಗೆ ಸಂಘಟಕರು ಅಭಿನಂದನೆ ಸಲ್ಲಿಸಿದರು.
An invitational open chess tournament organized by Sri Narayana Guru School of Chess, Kapu, was successfully held at Sri Narayana Guru Sabhabhavana. Mahesh Puchhappady and cardiologist Dr. Vishu Kumar distributed prizes to winners across various age categories. Students showcased impressive talent in the competition.
In the Open Category of the chess tournament, Pranav P. J. secured the First Place, Abhinava P. won the Second Place, and Chinmaya Krishna secured the Third Place. Rama Sherigar was honoured with the Best Veteran Player Award. The winners were felicitated and presented with prizes for their outstanding performance.


ಪ್ರಣವ್ ಪಿ.ಜೆ.


