ಪುತ್ತೂರು ಮತ್ತು ಬೆಳ್ತಂಗಡಿ ಮುಳಿಯದಲ್ಲಿ ಕರಿಮಣಿ ಉತ್ಸವ | 1000 ಕ್ಕೂ ಅಧಿಕ ಕರಿಮಣಿಗಳ ಸಂಗ್ರಹ | 50 ಕ್ಕೂ ಅಧಿಕ ಆಕರ್ಷಕ ವಿನ್ಯಾಸಗಳ ಕರಿಮಣಿಗಳು |

February 16, 2024
8:06 PM
ಮುಳಿಯ ಜ್ಯುವೆಲ್ಸ್‌ನಲ್ಲಿ 15 ದಿನಗಳ ಕಾಲ ನಡೆಯಲಿರುವ `ಕರಿಮಣಿ ಉತ್ಸವ'ಕ್ಕೆ ಚಾಲನೆ ನೀಡಲಾಯಿತು.

ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಕೋರ್ಟ್‌ರಸ್ತೆ ಮುಳಿಯ ಜ್ಯುವೆಲ್ಸ್‌ನಲ್ಲಿ 15 ದಿನಗಳ ಕಾಲ ನಡೆಯಲಿರುವ `ಕರಿಮಣಿ ಉತ್ಸವ’ಕ್ಕೆ ಫೆ.15ರಂದು ಚಾಲನೆ ದೊರೆಯಿತು.

Advertisement
Advertisement

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಅವರು ಕರಿಮಣಿ ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಾಂಗಲ್ಯದಲ್ಲಿ ಮಂಗಳ ಶಬ್ದವಿದೆ. ಮಂಗಳವನ್ನು ಕರುಣಿಸುವಂತ ದ್ರವ್ಯದಿಂದ ತಯಾರಿಸಲ್ಪಟ್ಟ ವಿಶೇಷವಾಗಿ ಚಿನ್ನದಿಂದ ತಯಾರಿಸಿದ ಕರಿಮಣಿ ಧಾರಣೆ ಮಾಡಿದರೆ ಸೌಭಾಗ್ಯ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಮಂಗಳಸೂತ್ರವನ್ನು ಧರಿಸದಾಗಲೇ ಮುತ್ತೈದೆ ಭಾಗ್ಯದ ಜೊತೆಗೆ ಗೃಹಣಿಗೆ ಸಂಸ್ಕಾರ ದೊರೆಯುತ್ತದೆ. ಇಂತಹ ಕರಿಮಣಿಗಳು ಮುಳಿಯದಲ್ಲಿ 2 ಗ್ರಾಂನಿಂದ ಪ್ರಾರಂಭಿಸಿ ಅತ್ಯಧಿಕ ಚಿನ್ನದ ತನಕ ಗ್ರಾಹಕರಿಗೆ ದೊರೆಯಲಿದೆ. ಕನಿಷ್ಠ 2 ಗ್ರಾಂನ ಕರಿಮಣಿಯ ಮೂಲಕ ಬೆಳ್ಳಿಯ ಕರಿಮಣಿ ಧರಿಸುವ ಬಡವರಿಗೂ ಚಿನ್ನದ ಧರಿಸುವಂತ ಅವಕಾಶ ಮುಳಿಯ ಜ್ಯುವೆಲ್ಸ್ ಮೂಲಕ ದೊರೆಯಲಿದೆ. ಸಂಸ್ಥೆಯ ಶಾಖೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ . ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆಗಳು ದೊರೆಯಲಿ ಎಂದರು.

ಮುಳಿಯ ಜ್ಯುವೆಲ್ಸ್‌ನ , ಚೇರ್ಮೆನ್ ಮತ್ತು ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಚಿನ್ನಾಭರಣಗಳ ಮಾರುಕಟ್ಟೆಯಲ್ಲಿ ಹಲವು ಹೊಸತನಗಳನ್ನು ಮುಳಿಯ ಜ್ಯುವೆಲ್ಸ್ ಸಂಸ್ಥೆ ಪರಿಚಯಿಸಿದೆ. 25 ವರ್ಷಗಳ ಹಿಂದೆ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಆಯೋಜಿಸಿದೆ. ಆಧುನಿಕತೆಯಲ್ಲಿ ಮಹಿಳೆಯರಿಗೆ ವಿವಿಧ ಕಾರ್ಯಕ್ರಗಳಿಗೆ ತಕ್ಕಂತೆ ಅವರವರ ಮನದಿಚ್ಚೆಯ ಕರಿಮಣಿಗಳನ್ನು ಧರಿಸಲು ಅವಕಾಶವಿದೆ. ಸುಮಾರು 1000 ರಕ್ಕೂ ಅಧಿಕ ಕರಿಮಣಿ ಸರಗಳ ಸಂಗ್ರಹ ಈ ಸಂದರ್ಭದಲ್ಲಿ ಲಭ್ಯವಾಗಲಿದ್ದು 50 ಕ್ಕೂ ಅಧಿಕ ಆಕರ್ಷಣೀಯ ವಿನ್ಯಾಸಗಳ ಕರಿಮಣಿಗಳು ಲಭ್ಯವಿದೆ. ಇದಕ್ಕಾಗಿ ಕರಿಮಣಿ ಉತ್ಸವದ ಮೂಲಕ ಹೊಸ ಹೊಸ ಶೈಲಿಯ, ಆಕರ್ಷಕ ವಿನ್ಯಾಸದ ಕರಿಮಣಿ ಉತ್ಸವದಲ್ಲಿ ಲಭ್ಯವಿದ್ದು ಫೆ.15ರಿಂದ ಪ್ರಾರಂಭಗೊಂಡು ಫೆ.29ರ ತನಕ ನಡೆಯಲಿದ್ದು ಗ್ರಾಹಕರು ಇದರ ಸದುಪಯೋಗಹ ಪಡೆದುಕೊಳ್ಳುವಂತೆ ಅವರು ವಿನಂತಿಸಿದರು.

ಮುಳಿಯ ಜ್ಯುವೆಲ್ಸ್‌ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ಶೋರೂಂ ವ್ಯವಸ್ಥಾಪಕ ರಾಘವೇಂದ್ರ ಪಾಟೀಲ್, ಮಾರ್ಕೆಟಿಂಗ್ ಮ್ಯಾನೇಜರ್ ಸಂಜೀವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭವ್ಯಶ್ರೀ ಪ್ರಾರ್ಥಿಸಿದರು. ಯತೀಶ್ ಆಚಾರ್ಯ ಸ್ವಾಗತಿಸಿರು. ಆನಂದ ಕುಲಾಲ್ ವಂದಿಸಿದರು. ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.

ಫೆ.16ರಿಂದ ಪ್ರಾರಂಭಗೊಂಡಿರುವ ಕರಿಮಣಿ ಉತ್ಸವವು ಫೆ.29ರ ತನಕ ನಡೆಯಲಿದ್ದು ಇದರಲ್ಲಿ ನವನವೀನ ಮಾದರಿಯ, ವಿವಿಧ ವಿನ್ಯಾಸ ಕರಿಮಣಿ ಸರಗಳು ಅತೀ ಕಡಿಮೆ ಸುಮಾರು 2 ಗ್ರಾಂ ನಿಂದ ಪ್ರಾರಂಭಿಸಿ ಗ್ರಾಹಕರ ಆವಶ್ಯಕತೆಗೆ ತಕ್ಕಂತೆ ಎಲ್ಲಾ ರೀತಿಯ ಕರಿಮಣಿ ಸರಗಳು ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ನಿಷೇಧ ಇಲ್ಲ – ಈಗ ಅಡಿಕೆ ಬಳಕೆಯ ನಿಯಂತ್ರಣದತ್ತ ಫೋಕಸ್
January 30, 2026
10:42 PM
by: ಮಹೇಶ್ ಪುಚ್ಚಪ್ಪಾಡಿ
ಅಡಿಕೆ ಬಳಕೆಯ ನಿಯಂತ್ರಣಕ್ಕೆ ‘MPOWER’ ನೀತಿ ಅಗತ್ಯ : ವಿಶ್ವ ಆರೋಗ್ಯ ಸಂಸ್ಥೆ
January 30, 2026
6:18 PM
by: ವಿಶೇಷ ಪ್ರತಿನಿಧಿ
ಅರೆಕಾನಟ್ ಚಾಲೆಂಜ್ : ಅಡಿಕೆ ನಿಯಂತ್ರಣ ಕುರಿತು WHO ಉತ್ಸುಕತೆ – ಕ್ಲಿನಿಕಲ್ ಪರೀಕ್ಷೆಗಳ ಅಗತ್ಯಕ್ಕೆ ತಜ್ಞರ ಒತ್ತಾಯ
January 30, 2026
6:04 PM
by: ದ ರೂರಲ್ ಮಿರರ್.ಕಾಂ
AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ
January 30, 2026
8:10 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror